ಬೆಂಗಳೂರು: ಹಾಸನ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್‌ಡಿ ರೇವಣ್ಣ ಕೂಡಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಡಿ ರೇವಣ್ಣ ಇನ್ನೂ ವಿಚಾರಣೆಗೆ ಬರಲಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಶನಿವಾರ ಸಂಜೆಯವರೆಗೆ ಸಮಯ ಇದೆ. ಅದಕ್ಕಾಗಿಯೇ ಎರಡು ನೋಟಿಸ್ ಕೊಟ್ಟಿದ್ದೇವೆ ಎಂದರು.
ಮೈಸೂರು ಕಿಡ್ನಾಪ್ ಕೇಸ್ ಗೂ ರೇವಣ್ಣ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಿಡ್ನಾಪ್ ಕೇಸ್ ನಲ್ಲಿ ಓರ್ವನ ಬಂಧನ ಆಗಿದೆ. ಆಗ್ತಾನೆ ಇರುತ್ತೆ ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಲು ಆಗಲ್ಲ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಡಿ ರೇವಣ್ಣನಿಗೆ ಈಗಾಗಲೇ ಎರಡು ನೋಟಿಸ್ ಕೊಟ್ಟಿದ್ದಾರೆ. 24 ಗಂಟೆಗಳ ಕಾಲ ಆ ನೋಟಿಸ್ ತನಿಖೆಗೆ ಹಾಜರಾಗಲು ಸಮಯ ನೀಡಲಾಗಿದೆ. ಆಮೇಲೆ ನೋಡೋಣ ಇವತ್ತು ವಿಚಾರಣೆಗೆ ಹಾಜರಾಗುತ್ತಾರೋ? ಇಲ್ಲವೋ ಎಂದು. ಆನಂತರ ಏನು ಕ್ರಮ ಮಾಡಬೇಕು ಅಂತ ಕಾದು ನೋಡೋಣ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ವಿಚಾರಣೆಗೆ ಬರಲೇ ಬೇಕು. ಇವತ್ತಲ್ಲ, ನಾಳೆ,ನಾಡಿದ್ದು ವಿಚಾರಣೆಗೆ ಬರಲೇಬೇಕು. ಏನು ಮಾಡಬೇಕು ನೋಡ್ತೀವಿ, ಅಗತ್ಯ ಬಿದ್ದ ಅರೆಸ್ಟ್ ಆದರೂ ಮಾಡುತ್ತೇವೆ, ಕಾನೂನು ಪ್ರಕ್ರಿಯೆ ಹೇಗಿದೆಯೋ ಹಾಗೆ ಮಾಡುತ್ತೇವೆ ಎಂದು ತಿಳಿಸಿದರು.
ಎಚ್‌ಡಿ ರೇವಣ್ಣನಿಗೂ, ಪ್ರಜ್ವಲ್ ಗೂ ಇಬ್ಬರಿಗೂ ಲುಕ್ ಔಟ್ ನೋಟಿಸ್ ಆವತ್ತೇ ಕೊಟ್ಟಿದ್ದೇವೆ. ರೇವಣ್ಣ ಸಹ ಹೋರ ದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಸೂಚಿಸಿದರು.