This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Entertainment NewsLocal NewsState News

ಲಗಾನ್’ ಸಿನಿಮಾ ನಿರ್ದೇಶಕರ ಸಿನಿಮಾಗೆ ರಿಷಬ್‌ ಶೆಟ್ಟಿ ಹೀರೊ?

ಲಗಾನ್’ ಸಿನಿಮಾ ನಿರ್ದೇಶಕರ ಸಿನಿಮಾಗೆ ರಿಷಬ್‌ ಶೆಟ್ಟಿ ಹೀರೊ?

ಬೆಂಗಳೂರು: ʻಕಾಂತಾರʼ ಸಿನಿಮಾ ಮೂಲಕ ರಿಷಬ್‌ ಶೆಟ್ಟಿ (Rishab Shetty) ಖ್ಯಾತಿಯನ್ನು ಪಡೆದರು. ಕಾಂತಾರ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಬೇರೆ ಸಿನಿಮಾ ರಂಗದಿಂದ ರಿಷಬ್ ಶೆಟ್ಟಿಗೆ (Rishabh Shetty) ಆಫರ್ ಬಂದಿತ್ತು. ಅದು ನಿಜ ಕೂಡ ಎಂದು ಹಿಂದೊಮ್ಮೆ ರಿಷಬ್‌ ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದರು. ಇದೀಗ ವರದಿಗಳ ಪ್ರಕಾರ ‘ಕಾಂತಾರ’-2 ಚಿತ್ರೀಕರಣ ಮುಗಿದ ಬಳಿಕ ‘ಲಗಾನ್’, ‘ಸ್ವದೇಶ್’, ‘ಜೋಧಾ ಅಕ್ಬರ್’, ‘ಪಾಣಿಪತ್’ ರೀತಿಯ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಅಶುತೋಷ್ ಗೋವಾರಿಕರ್ (ashutosh gowariker) ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

“ಕಾಂತಾರ-2′ ಪೂರ್ಣಗೊಂಡ ಬಳಿಕ ಮುಂದಿನ ಸಿನಿಮಾಗಳ ಬಗ್ಗೆ ಯೋಚಿಸುವೆ ಎಂದು ರಿಷಬ್‌ ಹೇಳಿಕೊಂಡಿದ್ದರು. ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಯಾವಾಗ ಮುಗಿಯುತ್ತೆ ಎನ್ನುವುದರ ಮೇಲೆ ಮುಂದಿನ ಸಿನಿಮಾ ಶುರುವಾಗುವುದು ಯಾವಾಗ ಎನ್ನುವುದು ತಿಳಿಯುತ್ತದೆ. . ಇದೀಗ ಅಶುತೋಷ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ನಟಿಸುತ್ತಾರೆ ಎನ್ನುವ ಸುದ್ದಿಯೇ ಭಾರೀ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾ ಪ್ರೀ ಪ್ರೊಡಕ್ಷನ್ ಶೀಘ್ರದಲ್ಲೇ ಶುರುವಾಗಲಿದೆ. ಮುಂದಿನ ವರ್ಷ ಮಧ್ಯಭಾಗದಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ ಎನ್ನಲಾಗಿದೆ. ಈ ಬಗ್ಗೆ ರಿಷಬ್‌ ಶೆಟ್ಟಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.

ಕೆಜಿಎಫ್ ಚಾಪ್ಟರ್ 2 (KGF Chapter 2) ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೇಗೆ ಖ್ಯಾತಿ ಗಳಿಸಿತೋ ಅದೇ ರೀತಿ ಕಾಂತಾರ 2 ಕೂಡ ಅಷ್ಟೇ ಎತ್ತರಕ್ಕೆ ಹೋಗಲಿದೆ ಎನ್ನಲಾಗುತ್ತಿದೆ. ಕಾಂತಾರ 2 ಚಿತ್ರೀಕರಣ ಇನ್ನೂ ಪ್ರಾರಂಭವಾಗದಿದ್ದರೂ, ಸಿನಿಮಾ ಬಜೆಟ್ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಇದೀಗ ವರದಿಗಳ ಪ್ರಕಾರ ಕಾಂತಾರ 1 ಕ್ಕಿಂತ ಕಾಂತಾರ 2 ಸಿನಿಮಾ (Kantara 2 budget) ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಎಂದು ವರದಿಯಾಗಿದೆ.
ಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವದಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಈಗಾಗಲೇ ಕಾಂತಾರ 2 ಸಿನಿಮಾ ಕೆಲಸಗಳು ಭರದಿಂದ ಸಾಗಿದೆ. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Nimma Suddi
";