This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsState News

ಆರ್‌ಟಿಐ ಕಾಯಿದೆ ಅಧ್ಯಯನ ಅಗತ್ಯ:ರವೀಂದ್ರ ದಾಖಪ್ಪನವರ

ಆರ್‌ಟಿಐ ಕಾಯಿದೆ ಅಧ್ಯಯನ ಅಗತ್ಯ:ರವೀಂದ್ರ ದಾಖಪ್ಪನವರ

ಬಾಗಲಕೋಟೆ

ಆರ್‌ಟಿಐ ಕಾಯ್ದೆ ಕುರಿತು ಅಕಾರಿಗಳು ಅಧ್ಯಯನ ಮಾಡುವುದು ಅತ್ಯಗತ್ಯ ಎಂದು ಕಲಬುರ್ಗಿ ಪೀಠದ ಮಾಹಿತಿ ಹಕ್ಕು ಆಯೋಗದ ಆಯುಕ್ತ ರವೀಂದ್ರ ಗುರುನಾಥ ದಾಖಪ್ಪನವರ ಹೇಳಿದರು.

ನಗರದ ಜಿಪಂ ಹಳೆಯ ಸಭಾಂಗಣದಲ್ಲಿ ನಾನಾ ಇಲಾಖೆ ಅಕಾರಿ ಮತ್ತು ಸಿಬ್ಬಂದಿಯೊAದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಬಹುತೇಕ ಇಲಾಖೆಯ ಮುಖ್ಯಸ್ಥರು, ಅಕಾರಿಗಳು ಕೆಲಸದ ಒತ್ತಡದಲ್ಲಿ ಮಾಹಿತಿ ಹಕ್ಕು ಕಾಯಿದೆ ಕುರಿತು ಅಧ್ಯಯನ ಮಾಡದೇ, ತಮ್ಮ ಅÃನ ಸಿಬ್ಬಂದಿ ಅಥವಾ ಕೇಸ್ ವರ್ಕರ್ ಹೇಳುವ ಮಾತಿನ ಆಧಾರದಲ್ಲಿ ಅರ್ಜಿದಾರನಿಗೆ ಮಾಹಿತಿ ನೀಡಿ ಅನಗತ್ಯ ಗೊಂದಲ ಮಾಡಿಕೊಳ್ಳುತ್ತಾರೆ. ಆರ್‌ಟಿಐ ಕಾಯ್ದೆ ಕುರಿತು ಅಧ್ಯಯನ ಮಾಡಿ ಸಂಪೂರ್ಣವಾಗಿ ಅರಿತುಕೊಂಡಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಉದ್ಬವಿಸುವದಿಲ್ಲ ಎಂದು ತಿಳಿಸಿದರು.

ಮಾಹಿತಿ ಕೇಳುವ ಅರ್ಜಿದಾರನಿಗೆ ಕಾನೂನು ಅಡಿಯಲ್ಲಿನ ವಿಷಯಗಳಿದ್ದಲ್ಲಿ ೩೦ ದಿನದೊಳಗೆ ಮಾಹಿತಿ ನೀಡಬೇಕು. ವೈಯುಕ್ತಿಕ ವಿಷಯ, ಸಾರ್ವಜನಿಕ ಹಿತಾಸಕ್ತಿ ಇದ್ದರೆ ಮಾಹಿತಿ ನೀಡಲು ಬರುವದಿಲ್ಲ. ಮಾಹಿತಿ ನೀಡುವ ಮುನ್ನ ಸಂಪೂರ್ಣವಾಗಿ ಅರಿತು, ಸಾಕಷ್ಟು ವಿಚಾರ ಮಾಡಿ ಕಾಯ್ದೆಗೆ ಅನುಗುಣವಾಗಿ ಮಾಹಿತಿ ನೀಡುವ ಕೆಲಸ ಮಾಡಬೇಕು. ಇಲ್ಲಿ ಹೆದರುವ ಅವಶ್ಯಕತೆ ಇರುವದಿಲ್ಲ ಎಂದು ಹೇಳಿದರು.

ಕಚೇರಿಯಲ್ಲಿ ಕಡತಗಳನ್ನು ಸರಿಯಾಗಿ ನಿರ್ವಹಿಸಿದ್ದಲ್ಲಿ ಮಾಹಿತಿ ನೀಡುವ ಕೆಲಸ ಸುಲಭವಾಗುವದರಿಂದ ಅವುಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಅಕಾರಿ ಮತ್ತು ಸಿಬ್ಬಂದಿ ನಡುವೆ ಒಗ್ಗಟ್ಟು ಇಲ್ಲದಿದ್ದಾಘ ಮಾಹಿತಿ ಕೇಳುವ ಅರ್ಜಿದಾರರ ಸಂಖ್ಯೆಯು ಹೆಚ್ಚಾಗಿ ಸಮಸ್ಯೆ ಉದ್ಬವಿಸುವ ಸನ್ನಿವೇಶ ಉಂಟಾಗಬಹುದು. ಕಚೇರಿ ಕೆಲಸಗಳಲ್ಲಿ ಉದಾಸೀನತೆ ತೋರದೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಶಶಿಧರ ಕುರೇರ್ ಇದ್ದರು.

 

 

Nimma Suddi
";