ಬಾಗಲಕೋಟೆ
ವಿಜ್ಞಾನವಿಲ್ಲದ ಜಗತ್ತು ಶೂನ್ಯವಾಗಿದ್ದು, ಜಾಗತಿಕವಾಗಿ ಮನುಷ್ಯ ಇಷ್ಟೊಂದು ಮಂದುವರೆಯಲು ವೈಜ್ಞಾನಿಕ ಅನ್ವೇಷಣೆಗಳೇ ಕಾರಣ ಎಂದು ಧಾರವಾಡದ ಎಸ್‌ಡಿಎಂ ಸಂಶೋಧನಾ ಸಂಸ್ಥೆ ಪ್ರಾಚಾರ್ಯ ಡಾ.ಅಜಯಕುಮಾರ ಓಲಿ ಹೇಳಿದರು.
ನಗರದ ಬವಿವ ಸಂಘದ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸರ್.ಸಿ.ವಿ.ರಾಮನ್ ಅವರ ಜನ್ಮದಿನದ ಅಂಗವಾಗಿ ನಡೆದ ರಾಷ್ಟಿçÃಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳು ನಗರದ ವಿದ್ಯಾರ್ಥಿಗಳಿಗಿಂತ ಪ್ರತಿಭಾವಂತರಾಗಿದ್ದು, ದೇಶಾದ್ಯಂತ ಸಾಧನೆಗೈದ ಅನೇಕ ವಿಜ್ಞಾನಿಗಳು ಗ್ರಾಮೀಣ ಹಿನ್ನೆಲೆಯಿಂದಲೇ ಬಂದವರಾಗಿದ್ದಾರೆ ಎಂದರು
ಯಾವುದೇ ಮೂಲ ಸೌಕರ್ಯಗಳಿಲ್ಲದ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡಿ ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸವಾದರೆ ವೈಜ್ಞಾನಿಕ ಸಾಧಕರ ಸಂಖ್ಯೆ ಗಣನೀಯವಾಗಿ ಬೆಳೆಯಲಿದೆ. ಭಾರತದ ಅನೇಕ ವಿಜ್ಞಾನ ಸಂಸ್ಥೆಗಳು ಇಂತಹ ಮಹತ್ವಪೂರ್ಣ ಕಾರ್ಯಕ್ಕೆ ಅನುದಾನ, ಧನಸಹಾಯ, ವೈಜ್ಞಾನಿಕ ಯೋಜನೆ ಹಮ್ಮಿಕೊಂಡಿದ್ದು, ಇತ್ತೀಚೆಗೆ ಭಾರತದ ವೈಜ್ಞಾನಿಕ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ ಆಗುತ್ತಿರುವುದನ್ನು ಕಾಣಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎಸ್.ಆರ್.ಸಬರದ, ವಿದ್ಯಾರ್ಥಿಗಳು ಹೊಸ ಹೊಸ ವೈಜ್ಞಾನಿಕ ಪ್ರಯೋಗಗಳಿಗೆ ತಮ್ಮನ್ನು ತೊಡಗಿಸಿಕೊಂಡು ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಐಕ್ಯೂಎಸಿ ಸಂಯೋಜಕ ಡಾ.ಡಿ.ಎಸ್.ಲಮಾಣಿ, ಡಾ.ಎ.ಎಂ ಸತ್ಯನಾಯಕ, ಪ್ರೊ.ವಿ.ಎನ್.ವನಕುದರೆ, ಪೂಜಾ ನರಗುಂದ, ತೇಜಸ್ವಿನಿ ಬಡಿಗೇರ, ಪೂರ್ಣಿಮಾ ಮುಚ್ಚಂಡಿ, ಡಾ.ಜಯಶ್ರೀ ಉಪ್ಪಿನ ಇತರರಿದ್ದರು.