ದೆಹಲಿ: ಇಂದು ಲೋಕಸಭೆ ಆರನೇ ಹಂತದ ಮತದಾನ ನಡೆಯುತ್ತಿದ್ದು, ಬಿಹಾರ (8 ಸ್ಥಾನಗಳು), ಹರಿಯಾಣ (ಎಲ್ಲಾ 10 ಸ್ಥಾನಗಳು), ಜಮ್ಮು ಮತ್ತು ಕಾಶ್ಮೀರ (1 ಸ್ಥಾನ), ಜಾರ್ಖಂಡ್ (4 ಸ್ಥಾನಗಳು), ದೆಹಲಿ (ಎಲ್ಲಾ 7 ಸ್ಥಾನಗಳು), ಒಡಿಶಾ (6 ಸ್ಥಾನಗಳು), ಉತ್ತರ ಪ್ರದೇಶ (14 ಸ್ಥಾನಗಳು), ಮತ್ತು ಪಶ್ಚಿಮ ಬಂಗಾಳ (8 ಸ್ಥಾನಗಳು)ದಲ್ಲಿ ಮತದಾನ ನಡೆಯಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮೊದಲ ಪುರುಷ ಮತದಾರ ಪ್ರಮಾಣಪತ್ರವನ್ನು ಸಹ ಪಡೆದಿದ್ದಾರೆ. “ಈ ಬೂತ್‌ನಲ್ಲಿ ನಾನು ಮೊದಲ ಪುರುಷ ಮತದಾರರಾಗಿದ್ದೇನೆ” ಎಂದು ಜೈಶಂಕರ್ ತಮ್ಮ ಪ್ರಮಾಣಪತ್ರವನ್ನು ಹಿಡಿದುಕೊಂಡು ಫೋಟೋ ಕ್ಲಿಕಿಸಿದ್ದಾರೆ. ದೆಹಲಿಯ ಮತದಾರರು ಮತ್ತೊಮ್ಮೆ ಮೋದಿ ಸರ್ಕಾರವನ್ನು ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು. ದೇಶಕ್ಕೆ ಇದು ನಿರ್ಣಾಯಕ ಕ್ಷಣವಾಗಿರುವುದರಿಂದ ಜನರು ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನನಗೆ ವಿಶ್ವಾಸವಿದೆ ಎಂದರು.
ಇದೀಗ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ದೇಶದ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರು ತಮ್ಮ ಮತವನ್ನು ಚಲಾಯಿಸಿದರೆ. ಇದರಲ್ಲೂ ಒಂದು ವಿಶೇಷವಿದ್ದು, ತಮಗೆ ಗೊತ್ತುಪಡಿಸಿದ ಮತಗಟ್ಟೆಯಲ್ಲಿ ಮೊದಲ ಪುರುಷ ಮತದಾರ ಎಂಬ ಪ್ರಶಂಸೆ ಪಡೆದುಕೊಂಡಿದ್ದಾರೆ.