This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಸದಾನಂದಗೌಡ ಪಕ್ಷಕ್ಕೆ ಸೇರುತ್ತಾರೆಂದರೆ ಸ್ವಾಗತ: ಡಿಸಿಎಂ ಡಿಕೆ ಶಿವಕುಮಾರ್​

ಸದಾನಂದಗೌಡ ಪಕ್ಷಕ್ಕೆ ಸೇರುತ್ತಾರೆಂದರೆ ಸ್ವಾಗತ: ಡಿಸಿಎಂ ಡಿಕೆ ಶಿವಕುಮಾರ್​

ಕಲಬುರಗಿ: ಬಹಳಷ್ಟು ಜನರು ನಮ್ಮನ್ನು ಭೇಟಿಯಾಗಿದ್ದಾರೆ. ಮಂಗಳವಾರ ಜಯಪ್ರಕಾಶ್ ಹೆಗ್ಡೆ, ಎಂ.ಪಿ.ಕುಮಾರಸ್ವಾಮಿ ಪಕ್ಷ ಸೇರಿದ್ದಾರೆ. ಇನ್ನೂ ಬಹಳ ಜನರು ಪಕ್ಷಕ್ಕೆ ಬರಲಿದ್ದು,ಅದರಲ್ಲಿ ಬಿಜೆಪಿಯ ಸಂಸದರು ಸಹ ನನ್ನನ್ನು ಭೇಟಿ ಮಾಡಿದ್ದಾರೆ. ಭೇಟಿ ಮಾಡಿದವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಮಾಜಿ ಮುಖ್ಯಮಂತ್ರಿಗಳು ಸದಾನಂದಗೌಡ ಅವರು ಪಕ್ಷಕ್ಕೆ ಸೇರುತ್ತಾರೆಂದರೆ ಸ್ವಾಗತ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ತಿಳಿಸಿದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಸಿಇಸಿ ಸಭೆಯಾಗಬೇಕು ಸಭೆ ಬಳಿಕ, ಮಾ.15ರಂದು ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗುತ್ತೆ, ಬೆಂಗಳೂರು ಸೇರಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಆಗಿದೆ. ಬೆಂಗಳೂರು ನಗರದಲ್ಲಿ 70 ಬೋರ್​ವೆಲ್​ಗಳು ಬತ್ತಿ ಹೋಗಿವೆ. ಆದರೆ ಸಮರ್ಪಕವಾಗಿ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಸಾಕಷ್ಟು ಹಣವಿದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇವೆ.ಮುಖ್ಯಮಂತ್ರಿಗಳು ಕೂಡ ಸಭೆ ನಡೆಸಿ ಸೂಚನೆ ನೀಡಿದ್ದಾರೆ.ಸಂಸದ ಅನಂತಕುಮಾರ್​ ಹೆಗಡೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದರು.

ಇದಕ್ಕೆ ಮೋದಿಯವರು ಇಲ್ಲಿಯವರೆಗೆ ಮಾತನಾಡಿಲ್ಲ. ಅದರ ಅರ್ಥ ಮೌನಂ ಸಮ್ಮತಿ ಲಕ್ಷಣಂ ಅಂತ. ಹೆಗಡೆಯವರ ಹೇಳಿಕೆ, ಬಿಜೆಪಿ ಹೇಳಿಕೆಯಾಗಿದೆ ಎಂದು ವಾಗ್ದಾಳಿ ಮಾಡಿದರು.ನಾನು (ಡಿಕೆ ಶಿವಕುಮಾರ್​) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇರೆ ಬೇರೆಯಾಗಿ ಸಮಾವೇಶ ಮಾಡುತ್ತಿದ್ದೇವೆ. ಇವತ್ತು ಸಿಎಂ ಉಡುಪಿ ಮತ್ತು ಕೋಲಾರಕ್ಕೆ ಹೋಗುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡಬೇಕಿದೆ. ಅದಕ್ಕೆ ನಾನು ಖರ್ಗೆ ಸಾಹೇಬರು ಬಂದಿದ್ದೇವೆ. ಇನ್ನು ಕಲಬುರಗಿ ಕಾಂಗ್ರೆಸ್​ ಅಭ್ಯರ್ಥಿ ಯಾರು ಪ್ರಶ್ನೆಗೆ, ನಾನೇ ಅಭ್ಯರ್ಥಿ ಎಂದರು. ನಾವು ಚುನಾವಣೆಗೋಸ್ಕರ ಗ್ಯಾರೆಂಟಿ ಜಾರಿ ಮಾಡಿಲ್ಲ. ಜನರ ಬದುಕಿಗೆ ಒಳ್ಳೆಯದಾಗಲಿ ಅಂತ ಮಾಡಿದ್ದೆವೆ ಎಂದರು.

ಡಿ.ಕೆ.ಸುರೇಶ್​ ವಿರುದ್ಧ ಜಯದೇವ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಹಿಂದೆ ಹೆಚ್​​ಡಿ ದೇವೇಗೌಡರ ವಿರುದ್ಧ ಗೆದ್ದಿದ್ದೇವೆ, ಹೆಚ್​ಡಿ ಕುಮಾರಸ್ವಾಮಿ ವಿರುದ್ಧವೂ ಗೆದ್ದಿದ್ದೇವೆ. ಡಾ.ಸಿ.ಎನ್​​.ಮಂಜುನಾಥ್​ ಸ್ಪರ್ಧೆ ಮಾಡಿದರೂ ನಮಗೇನು ಬೇಸರವಿಲ್ಲ. ಸುರೇಶ್ ಬರೀ ಸಂಸದನಲ್ಲ, ಪಂಚಾಯಿತಿ ಮೆಂಬರ್​​ ಸಹ ಹೌದು. ಡಿ.ಕೆ.ಸುರೇಶ್​ ಪಂಚಾಯಿತಿ ಸದಸ್ಯನ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಡಿ.ಕೆ.ಸುರೇಶ್ ವಿರುದ್ಧ ಯಾರನ್ನು ಬೇಕಾದರೂ ನಿಲ್ಲಿಸಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Nimma Suddi
";