This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಸುರಕ್ಷಿತ, ಪಾರದರ್ಶಕ ಪರೀಕ್ಷೆ:ಎ.ಎಚ್.ಬೆಲ್ಲದ

ಸೂಳೇಭಾವಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆ ಸಭೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿ ಸರಕಾರಿ ಪಪೂ ಕಾಲೇಜ್‌ನ ಪ್ರೌಢಶಾಲೆ ವಿಭಾಗದ ಪರೀಕ್ಷಾ ಕೇಂದ್ರದಲ್ಲಿ ಜು.೧೯ ಹಾಗೂ ೨೨ರಂದು ನಡೆಯಲಿರುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಕಾರ್ಯನಿರ್ವಹಣೆ ಕುರಿತಂತೆ ಕೇಂದ್ರಕ್ಕೆ ನಿಯೋಜಿಸಿದ ಕೊಠಡಿ ಮೇಲ್ವಿಚಾರಕರ ಪೂರ್ವಭಾವಿ ಸಭೆ ಜರುಗಿತು.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ, ಉಪಪ್ರಾಚಾರ್ಯ ಎ.ಎಚ್.ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕಸ್ಟೋಡಿಯನ್ ಆದ ನವಚೇತನ ಪ್ರೌಢಶಾಲೆಯ ಮುಖ್ಯಗುರು ಎಸ್.ಬಿ.ಬಿರಾದಾರ ಅತಿಥಿ ಸ್ಥಾನ ವಹಿಸಿದ್ದರು. ಸಭೆಗೆ ಆಗಮಿಸಿದ ಎಲ್ಲರನ್ನೂ ಶಿಕ್ಷಕಿ ಡಾ:ಎಸ್.ಸಿ.ರಂಜಣಗಿ ಸ್ವಾಗತಿಸಿ ಪರೀಕ್ಷಾ ಕಾರ್ಯದ ಕುರಿತು ವಿವರವಾಗಿ ಸಮಗ್ರ ಮಾಹಿತಿ ನೀಡಿದರು.

ಈ ಸಲದ ಪರೀಕ್ಷೆಯಲ್ಲಿ ಉಪಯೋಗಿಸುವ ವಿಷಯವಾರು ಓ.ಎಮ್.ಆರ್. ಹಾಳೆಗಳ ಬಣ್ಣ ಹಾಗೂ ಅವುಗಳ ನಿರ್ವಹಣೆ ಕುರಿತು ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿದರು. ಮಕ್ಕಳಿಗೆ ಯಾವುದೇ ಗೊಂದಲವಾಗದAತೆ ಪ್ರತಿಯೊಂದು ಮಾಹಿತಿಯನ್ನು ಮೇಲ್ವಿಚಾರಕರಿಗೆ ಮನವರಿಕೆ ಮಾಡಿಕೊಟ್ಟರು. ಕೊಠಡಿ ಮೇಲ್ವಿಚಾರಕರ ಎಲ್ಲಾ ಸಂಶಯಗಳಿಗೂ ಸಮರ್ಪಕ ಉತ್ತರ ನೀಡಿದರು.

ನಂತರ ಪ್ರಶ್ನೆಪತ್ರಿಕೆ ಪಾಲಕರಾದ ಎಸ್.ಬಿ.ಬಿರಾದಾರ ಮಾತನಾಡಿ, ಕೊಠಡಿ ಮೇಲ್ವಿಚಾರಕರು ಸಮಯ ಪಾಲನೆಯೊಂದಿಗೆ ಜಾಗೃತೆಯಿಂದ ಪರೀಕ್ಷಾ ಕೆಲಸ ನಿರ್ವಹಿಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಅಧೀಕ್ಷಕ ಎ.ಎಚ್.ಬೆಲ್ಲದ ಮಾತನಾಡಿ, ಈಗಾಗಲೇ ನಮ್ಮ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೋನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್.ಎಸ್.ಎಲ್.ಸಿ. ಮಕ್ಕಳು ನಿರ್ಭಯದಿಂದ, ಆತ್ಮವಿಶ್ವಾಸದಿಂದ ಮತ್ತು ಖುಷಿಯಿಂದ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪರೀಕ್ಷಾ ಕೇಂದ್ರದಲ್ಲಿ ಮಾಡಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ೨೨೭ ವಿದ್ಯಾರ್ಥಿಗಳು ನೊಂದಾಯಿಸಿದ್ದಾರೆ. ಇದರಲ್ಲಿ ಬೇರೆ ತಾಲೂಕು/ಜಿಲ್ಲೆಯ ೦೭ ವಲಸೆ ಮಕ್ಕಳು ಸೇರಿದ್ದಾರೆ. ಒಟ್ಟು ೧೯ ಕೊಠಡಿಗಳನ್ನು ರಚಿಸಲಾಗಿದೆ. ವಿಶೇಷವಾಗಿ ಜ್ವರ, ಕೆಮ್ಮ, ನೆಗಡಿಯಂತಹ ಲಕ್ಷಣವಿರುವ ಮಕ್ಕಳಿಗೋಸ್ಕರ ಎರಡು ಹೆಚ್ಚುವರಿ ಕೊಠಡಿಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ಕೊಠಡಿಗಳಿಗೂ ಸೋಂಕು ನಿವಾರಕವನ್ನು ಸಿಂಪಡಿಸಿ ಸ್ಯಾನಿಟೈಜ್ ಮಾಡಿಸಲಾಗಿದೆ.

ಸಾಮಾಜಿಕ ಅಂತರ ಪಾಲಿಸಿ ಪರೀಕ್ಷೆ ಬರೆಯುವದಕ್ಕಾಗಿ ಪ್ರತಿ ಕೊಠಡಿಯಲ್ಲಿ ಕೇವಲ ೧೨ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯಗಳನ್ನು ಸ್ಯಾನಿಟೈಜ್ ಮಾಡಿಸಿ ಅಲ್ಲಿ ಹ್ಯಾಂಡವಾಸ್‌ಗಳನ್ನು ಇರಿಸಲಾಗಿದೆ. ಪರೀಕ್ಷೆಯ ಎರಡೂ ದಿನಗಳಂದು ಮಕ್ಕಳು ಎಸ್.ಓ.ಪಿ. ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೇಂಟಿನಿAದ ಬಾಕ್ಸ್ ಹಾಕಿಸಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಿAದ ಪ್ರತಿ ವಿದ್ಯಾರ್ಥಿಯ ಉಷ್ಣತೆಯನ್ನು ಪರೀಕ್ಷಿಸುವುದು ಮತ್ತು ಸ್ಯಾನಿಟೈಜ್ ಮಾಡಿ ಸುರಕ್ಷಿತವಾಗಿ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳು ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಮಾಹಿತಿಯನ್ನು ಸರಳವಾಗಿ ಪಡೆಯಲು ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಸ್ಕೌಟ್ಸ್ & ಗೈಡ್ಸ್ ಮತ್ತು ಸೇವಾದಳ ಶಿಕ್ಷಕರ ಸಹಕಾರದೊಂದಿಗೆ ಹೆಲ್ಪ ಡೆಸ್ಕ ವ್ಯವಸ್ಥೆಗೊಳಿಸಿದೆ.

ಇದೇ ಸಂದರ್ಭದಲ್ಲಿ ಸೂಳೇಭಾವಿಯಲ್ಲಿವ ಹುನಗುಂದ ತಾಲೂಕ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯವರು ಕೊಡ ಮಾಡಿದ ಮಾಸ್ಕಗಳನ್ನು ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಇವತ್ತಿನ ಈ ಪೂರ್ವಭಾವಿ ಸಭೆಯಲ್ಲಿ ತಿಳಿಸಿದ ಎಲ್ಲಾ ಸಂಗತಿಗಳನ್ನು ಕೊಠಡಿ ಮೇಲ್ವಿಚಾರಕರಾದ ತಾವೆಲ್ಲರೂ ಚಾಚೂ ತಪ್ಪದೇ ನಿರ್ವಹಿಸುವುದರ ಮೂಲಕ ಈ ಸಲದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಪಾವಿತ್ರತೆಯೊಂದಿಗೆ ಅತ್ಯಂತ ಪ್ರಾಮಾಣಿಕವಾಗಿ ನಡೆಸುವ ಗುರುತರವಾದ ಹೊಣೆಗಾರಿಕೆ ತಮ್ಮ ಮೇಲಿದೆ ಎಂದು ನೆನಪಿಸುತ್ತಾ ಆ ದಿಶೆಯತ್ತ ತಾವೆಲ್ಲರೂ ಯಶ್ವಿಸಿಯಾಗಿ ತಮ್ಮ ಕಾರ್ಯನಿರ್ವಹಿಸುತ್ತೀರೆಂದು ಆಶಾಭಾವನೆ ವ್ಯಕ್ತಪಡಿಸಿದರು.

Nimma Suddi
";