ಬಾಗಲಕೋಟೆ:
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ತಾಲೂಕಾ ಘಟಕದ ಸಂಯುಕ್ತಾಶ್ರಯದಲ್ಲಿ ದಿ.೯ ರಂದು ಮಧ್ಯಾನ್ಹ ೩ ಘಂಟೆಗೆ ಕಾ.ತ. ಚಿಕ್ಕಣ್ಣ ಅವರ ಸಾಹಿತ್ಯಾವಲೋಕನ ಕಾರ್ಯಕ್ರಮವನ್ನು ಪ್ರಾರ್ಥನಾ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದೆ.
ಹಿರಿಯ ಸಾಹಿತಿ ಕಾ.ತ. ಚಿಕ್ಕಣ್ಣ ಅವರು ತಿಂಗಳ ವಿಶೇಷ ಅತಿಥಿ ಸ್ಥಾನ ವಹಿಸುವರು. ಸಾಂಸ್ಕೃತಿಕ ಚಿಂತಕ ಡಾ.ಲಕ್ಷö್ಮಣ ಕೊಡಸೆ ಉದ್ಘಾಟನೆ ನೆರವೇರಿಸುವರು. ಬಾಗಲಕೋಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಸುಮಂಗಲಾ ಮೇಟಿ ಸಾಹಿತ್ಯಾವಲೋಕನ ಮಾಡುವರು.ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸುವರು ಎಂದು ಕಸಾಪ ತಾಲೂಕಾ ಅಧ್ಯಕ್ಷ ಪಾಂಡುರAಗ ಸಣ್ಣಪ್ಪನವರ, ಸಂಚಾಲಕ ಪ್ರಕಾಶ ಡಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.