This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ವೈಭವ ತೊರೆದು ಸಮಾನತೆ ಸಾರಿದ ಸಂತ ವೇಮನ : ಗದ್ದಿಗೌಡರ

ವೈಭವ ತೊರೆದು ಸಮಾನತೆ ಸಾರಿದ ಸಂತ ವೇಮನ : ಗದ್ದಿಗೌಡರ

ಬಾಗಲಕೋಟರ

ಸಿರಿವಂತಿಕೆ ವೈಭವದ ಜೀವನ ತೊರೆದು ಮೇಲು ಕೀಳು ಬದಿಗಿರಿಸಿ ಸಮಾನತೆ ಸಾರಿದ ಸಂತ ಮಹಾಯೋಗಿ ವೇಮನ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ವೇಮನ ತನ್ನ ಜೀವನದಲ್ಲಾದ ಘಟನಗಳನ್ನೇ ಆಡು ಭಾಷೆಯಲ್ಲಿ ರಚಿಸಿ ತೆಲುಗು ನುಡಿಯನ್ನು ಶ್ರೀಮಂತಗೊಳಿಸಿದವರು ಎಂದರು.

ತೆಲುಗಿನ ತ್ರಿಪದಿ ಕವಿ ವೇಮನಾದರೆ, ಕನ್ನಡದ ತ್ರಿಪದಿ ಕವಿ ಸರ್ವಜ್ಞನಾಗಿದ್ದು, ತಮಿಳಿನ ತಿರುವಳ್ಳರ ತಮಿಳು ಭಾಷೆ ತ್ರಿಪದಿ ಕವಿಯಾಗಿದ್ದಾರೆ. ಈ ಮೂವರು ಭಾಷೆ ಬೇರಾದರೂ ಲೋಕ ಕಲ್ಯಾಣಕ್ಕಾಗಿ ಮಾನವ ಜೀವಿಗಳೇಲ್ಲ ಒಂದೇ ಎಂಬ ಸಂದೇಶವನ್ನು ಜನತೆಗೆ ತಿಳಿಸಿದವರು. ವೇಮನ ಜಯಂತಿ ಉತ್ಸವ ಆಚರಿಸಿದರೆ ಸಾಲದು ಅವರ ಜೀವನದ ತತ್ವಾದಾರಗಳನ್ನು ಅಳವಡಿಸಿಕೊಂಡು ಬದುಕಿದಾಗ ಮಾತ್ರ ಆಚರಿಸಿದಕ್ಕೂ ಸಾರ್ಥಕವೆಂದರು. ನವನಗರ ಹಾಗೂ ಶೀರೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೇಮರಡ್ಡಿ ಮಲ್ಲಮ್ಮಳ ದೇವಸ್ಥಾನಕ್ಕೆ ತಲಾ 5 ಲಕ್ಷ ರೂ.ಗಳನ್ನು ನೀಡುವುದಾಗಿ ಪಿ.ಸಿ.ಗದ್ದಿಗೌಡರ ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಲಕ್ಷ್ಮೇಶ್ವರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕ ಮಾಜಿ ಅಧ್ಯಕ್ಷರು ಹಾಗೂ ಶಿಕ್ಷಕರಾದ ಡಾ.ಜಯಶ್ರೀ ಹೊಸಮನಿ ಮಾತನಾಡಿ ಭಾರತದಲ್ಲಿ ಬ್ರೀಟಿಷರ ಆಡಳಿತ ಕಾಲದಲ್ಲಿ ಸಿ.ಪಿ.ಬ್ರೌನ್ ಎಂಬ ಅಧಿಕಾರಿ ವೇಮನರ ಎಲ್ಲ ವಚನಗಳನ್ನು ಕ್ರೂಡಿಕರಿಸಿದ್ದರಿಂದ ಇಂದು ನಾವೆಲ್ಲ ಆ ವಚನಗಳನ್ನು 18 ಭಾಷೆಗಳಲ್ಲಿ ನೋಡುವಂತಾಗಿದೆ. ತುಪ್ಪವಿಲ್ಲದ ಊಟ, ಸಾರು ಇಲ್ಲದ ನೋಟ ಸ್ವಾನವು ಮೂಶಿಸಲಾರದು ಕೇಳಾವೇವ ಪಟ್ಟಾಭಿರಾಮ ಎಂಬ ವಚನದಲ್ಲಿ ಜೀವನಶೈಲಿಯನ್ನು ಸಹ ತಿಳಿಸಿಕೊಟ್ಟಿದ್ದಾರೆ. ವೇವನರ ಇಂತಹ ವಚನಗಳು ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಎಚ್.ವಾಯ್.ಮೇಟಿ ಮಾತನಾಡಿ ಮಹಾಮಾತೆ ಮಲ್ಲಮ್ಮಳ ಆಶೀರ್ವಾದದಿಂದ ಕೃಪಾಶೀರ್ವಾದ ಪಡೆದ ವೇಮ ಭೋಗಿಯಾಗಿ, ತ್ಯಾಗಿಯಾಗಿ ಮಹಾಯೋಗಿಯಾದವರು ವೇಮನ ಎಂದರು. ನವನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೇಮರಡ್ಡಿ ಮಲ್ಲಮ್ಮಳ ದೇವಸ್ಥಾನಕ್ಕೆ 20 ಲಕ್ಷ ರೂ.ಗಳ ನೀಡುವುದಾತಿ ತಿಳಿಸಿ ಸದ್ಯ 10 ಲಕ್ಷ ರೂ.ಗಳನ್ನು ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಸಮುದಾಯದ ಮುಖಂಡರಾದ ಮಹೇಶ ಕಕರಡ್ಡಿ, ಡಾ.ಜಿ.ಆರ್.ಹಲಗಲಿ, ಶಿವಣ್ಣ ಮಾಚಾ, ಎಸ್.ಎಸ್.ನಾಲತ್ವಾಡ, ನಾರಾಯಣ ಹಾದಿಮನಿ, ಕುಮಾರ ಹುಲಕುಂದ, ಈಶ್ವರ ಕೋಣಪ್ಪನವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ವೇಮನರ ಅದ್ದೂರಿ ಭಾವಚಿತ್ರದ ಮೆರವಣಿಗೆ*

ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಸಂಸದ ಪಿ.ಸಿ.ಗದ್ದಿಗೌಡ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯಲ್ಲಿ ಅಲಂಕೃತಗೊಂಡ ಕೃಷಿ ಪರಿಕರವಾದ ಕೂರಿಗೆಯನ್ನು ಹಿಡಿದು ಬಿತ್ತುವ ಚಿತ್ರಣವನ್ನು ಮಾದರಿಯಾಗಿ ತೋರಿಸಿದ್ದು, ಎಲ್ಲರ ಗಮನ ಸೆಳೆಯಿತು. ಅಲ್ಲದೇ ಮಹಿಳೆಯರು ಪೂರ್ಣಕುಂಬ ಹೊತ್ತಿಕೊಂಡು ಪಾಲ್ಗೊಂಡಿರುವುದು ಆಕರ್ಷಣೀಯವಾಗಿತ್ತು.

";