ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಪ್ರತಿಷ್ಠಿತ ಸಂಗಮೇಶ್ವರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಇಂದು ಸಂಜೆ ನಡೆಯಲಿದೆ.
ಸಂಗಮೇಶ್ವರ ಪತ್ತಿನ ಸಹಕಾರಿ ಸಂಘದ ೨೦೧೯-೨೦ನೇ ಸಾಲಿನ ವಾರ್ಷಿಕ ಸಭೆ ಇದಾಗಿದ್ದು ಸ್ಥಳೀಯ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಭಾನುವಾರ ಸಂಜೆ ೪.೩೦ಕ್ಕೆ ಸಭೆ ಆಯೋಜಿಸಲಾಗಿದೆ.
ಬ್ಯಾಂಕ್‌ನ ಅಧ್ಯಕ್ಷೆ ಶ್ರೀಮತಿ ಪ್ರಮಿಳಾದೇವಿ ಆರ್. ಅರಳಲೇಮಠ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ನಗದು ಬಹುಮಾನ ನೀಡಲಾಗುವುದು.
೨೦೧೯-೨೦ನೇ ಸಾಲಿನ ವರದಿ, ಜಮಾ-ಖರ್ಚು ಪತ್ರಿಕೆ, ಲಾಭ-ಹಾನಿ ಪತ್ರಿಎಕ ಮತ್ತು ೩೧-೦೩-೨೦೨೦ಕ್ಕೆ ಇದ್ದಂತೆ ಅಢಾವೆ ಪತ್ರಿಕೆಯನ್ನು ಪರಿಶೀಲಿಸಿ ಮಂಜೂರು ನೀಡುವುದು. ೨೦೧೮-೧೯ನೇ ಸಾಲಿನ ವಾರ್ಷಿಕ ಸಭೆಯ ನಡುವಳಿ ಓದಿ ದೃಢೀಕರಿಸುವುದು, ೨೦೨೦-೨೧ನೇ ಸಾಲಿನ ಆಯವ್ಯಯ ಪರಿಶೀಲಿಸಿ ಮಂಜೂರು ಪಡೆಯುವುದು, ಲೆಕ್ಕ ಪರಿಶೋಧಕರ ನೇಮಕ, ಸಂಘದ ಸದಸ್ಯರ ಮತ್ತು ಸೇವೆಗಳ ಬಳಕೆ ಕುರತು, ನಿಧಿಗಳ ಬಗ್ಗೆ ಚರ್ಚೆ, ಸಂಘದ ಪದಾಧಿಕಾರಿಗಳು ಮತ್ತು ನೌಕರರ ನೀತಿ ಸಂಹಿತೆ ರೂಪಿಸುವುದು ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಸಂಘದ ಪ್ರಧಾನ ವ್ಯವಸ್ಥಾಪಕ ಪಾಂಡುರAಗ ದಡ್ಡೇನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.