ಸಂಗಮೇಶ್ವರ ಪತ್ತಿನ ಸಂಘ:19 ಲಕ್ಷ ಲಾಭ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಪ್ರತಿಷ್ಠಿತ ಸಂಗಮೇಶ್ವರ ಪತ್ತಿನ ಸಹಕಾರಿ ಸಂಘ 19 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಹಿರೇಮಠ ತಿಳಿಸಿದರು.
ಸ್ಥಳೀಯ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ದೇಶವೇ ಆರ್ಥಿಕ ಹೊಡೆತ ಅನುಭವಿಸಿದೆ. ಇದಕ್ಕೆ ನಮ್ಮ ಬ್ಯಾಂಕ್ ಕೂಡ ಹೊರತಾಗಿಲ್ಲ. ಆದರೂ ಗ್ರಾಹಕರ ವಿಶ್ವಾಸದೊಂದಿಗೆ ಲಾಭ ಗಳಿಸಿದೆ ಎಂದರು.
ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ವ್ಯವಸ್ಥಾಪಕ ಪಾಂಡುರಂಗ ದಡ್ಡೇನವರ ವರದಿ ವಾಚಿಸಿದರು. ಸಂಘದ ನಿರ್ದೇಶಕ ಎಸ್.ಐ.ಮುಳ್ಳೂರ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಂಘದ ಅಧ್ಯಕ್ಷೆ ಪಿ.ಆರ್.ಅರಳಲೇಮಠ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹಾಂತೇಶ ಹಿರೇಮಠ. ನಿರ್ದೇಶಕರಾದ ಕುಶಪ್ಪ ಕಾಳಗಿ, ವಿಜಯಕುಮಾರ ಕನ್ನೂರ, ಸಂತೋಷ ಐಹೊಳ್ಳಿ, ಗುರು ಹಿರೇಮಠ, ರಾಮಣ್ಣ ಬ್ಯಾಕೋಡ, ಮುತ್ತಪ್ಪ ಬಂಡಿವಡ್ಡರ, ಶಾಂತಪ್ಪ ಹಂಡರಗಲ್, ಈರಣ್ಣ ಬಳಬಟ್ಟಿ ಸೇರಿದಂತೆ ಇತರರು ಇದ್ದರು.