ಬಾಗಲಕೋಟೆ
ಜಿಲ್ಲೆಯ ಹುನಗುಂದದ ಶ್ರೀ ಸಂಗಮೇಶ್ವರ ಶಿಕ್ಷಕರ ಪತ್ತಿನ ಸಹಕಾರ ಸಂಘ ನಿ. ಹುನಗುಂದದ 2023-28ನೇ ಅವಧಿಯ ನಿರ್ದೇಶಕ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದು ಆರಂಭವಾಯಿತು.
ಅಮೀನಗಡ ಭಾಗದ ಸಾಮಾನ್ಯ ಅಭ್ಯರ್ಥಿಯಾಗಿ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಸುಭಾಸ ಲುಮ್ಮಣ್ಣ ಕಣಗಿ ಮೊದಲನೆಯವರಾಗಿ ನಾಮಪತ್ರ ಸಲ್ಲಿಸಿದರು.
ನಂತರ ಗಂಜೀಹಾಳ ಭಾಗದಿಂದ ಸಾಮಾನ್ಯ ಅಭ್ಯರ್ಥಿಯಾಗಿ ವಿಜಯಾ ಗೌಡರ ಕೂಡ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಈಶ್ವರ ಅಂಗಡಿ ಅಭ್ಯರ್ಥಿಗಳಿಂದ ಉಮೇದುವಾರಿಕೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹುನಗುಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದು ಶೀಲವಂತರ, ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ, ಶಿಕ್ಷಕರುಗಳಾದ ಎಂ.ಎಂ.ಚೌಕಿಮಠ, ಕೆ ಆರ್ ದೇಶಪಾಂಡೆ, ಪಿ.ವಿ.ದಾಸರ, ಸಂಗಮೇಶ ಹೊದ್ಲೂರ, ಡಿ ಎಂ ಬಾಗವಾನ್, ಎಸ್ ಎಸ್ ಲಾಯದಗುಂದಿ, ಎಂ ಬಿ ಕಂದಕೂರ, ಆರ್. ಹೆಚ್. ಮುಂದಿನಮನಿ, ಮಂಜುಳಾ ಬೆಲ್ಲದ, ಎಂ ಬಿ ವಂದಾಲಿ, ಮಂಜುಳಾ ಡಿ. ಸಾವಿತ್ರಿ ಮಾಶ್ಯಾಳ, ಅಶೋಕ ಬಳ್ಳಾ, ಎ ಎನ್ ನದಾಫ್, ಯಾಸೀನ್ ಲೈನ್, ಎಸ್ ಎಸ್ ಸಜ್ಜನರ, ಮುತ್ತಪ್ಪ ಪೂಜಾರಿ, ಎಂ.ಜಿ.ಗೌಡರ ಇತರರು ಉಪಸ್ಥಿತರಿದ್ದರು.
ಡಿಸೆಂಬರ್ 31ರಂದು ಮತದಾನ ನಡೆಯಲಿದ್ದು, 23 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಒಟ್ಟು 13 ಸ್ಥಾನಗಳ ಈ ಚುನಾವಣೆಯಲ್ಲಿ ಸಾಮಾನ್ಯ-7, ಪರಿಶಿಷ್ಟ ಜಾತಿ-1 ಪರಿಶಿಷ್ಟ ಪಂಗಡ-1, ಮಹಿಳಾ ವರ್ಗದಿಂದ- 2 ಹಿಂದುಳಿದ ಪ್ರವರ್ಗ ‘ಅ’-1 ಹಿಂದುಳಿದ ಪ್ರವರ್ಗ ‘ಬ’-1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಈಶ್ವರ ಅಂಗಡಿ ಮಾಹಿತಿ ನೀಡಿದ್ದಾರೆ.
ಇನ್ನು ಹುನಗುಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ರಿನ ಸಹಕಾರ ಸಂಘ ನಿ. ಹುನಗುಂದ ದಲ್ಲೂ ಕೂಡ ಇಂದೇ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಎಸ್ ಟಿ ವಿಭಾಗದಲ್ಲಿ ಮುತ್ತಪ್ಪ ಪೂಜಾರಿ ಸೇರಿದಂತೆ ಮೂವರು ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿ ವಿನೋದ ಭೋವಿ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಿದರು.