This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education News

ಕರದಂಟಿಗೆ ಹೊಸ ಟಚ್ ನೀಡಿದ ಉದ್ಯಮಿ ಸಂತೋಷ

ಸಿದ್ಧವಾಯ್ತು ಸ್ವೀಟ್ ಲೆಸ್ ಅಮೀನಗಡ ಕರದಂಟು 
ನಿಮ್ಮ ಸುದ್ದಿ ಬಾಗಲಕೋಟೆ

ಶುಚಿ, ರುಚಿ, ಆರೋಗ್ಯ, ಸ್ವಾದಿಷ್ಠ, ಗುಣಮಟ್ಟಕ್ಕೆ ಹೆಸರುವಾಸಿ ಅಮೀನಗಡದ ಕರದಂಟಿಗೆ ಇಲ್ಲಿನ ವಿಜಯಾ ಕರದಂಟು ಉದ್ಯಮಿ ಸಂತೋಷ ಐಹೊಳ್ಳಿ ಹೊಸ ರೂಪು ನೀಡಿದ್ದು ಸ್ವೀಟ್‌ಲೆಸ್ ಕರದಂಟು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.

ಹೌದು.. ಉತ್ತರ ಕರ್ನಾಟಕದಲ್ಲಿ ಅನೇಕ ಪ್ರಸಿದ್ಧಿ ವಸ್ತುಗಳೊಂದಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಕರದಂಟೂ ಸಹ ಸೇರುತ್ತದೆ. ಅಮೀನಗಡ ಪಟ್ಟಣದಲ್ಲಿ ಬೆರಳೆಣಿಕೆಯಷ್ಟು ಮಂದಿ ಗ್ರಾಮದಲ್ಲಿದ್ದುಕೊಂಡು ರುಚಿ ಹಾಗೂ ಶುಚಿಗೆ ಹೆಚ್ಚು ಒತ್ತು ಕೊಟ್ಟು ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ.

ಆದರೆ ಪಿತ್ರಾರ್ಜಿತ ವೃತ್ತಿಯಾಗಿ ರುಚಿ ಹಾಗೂ ಶುಚಿಯೊಂದಿಗೆ ಕರದಂಟನ್ನು ಜನಪ್ರೀಯಗೊಳಿಸುತ್ತ ಬಂದಿರುವ ವಿಜಯಾ ಕರದಂಟು ಹೆಸರಿನಿಂದ ಪ್ರಸಿದ್ಧಿ ಪಡೆದ ಬಸವರಾಜ ಐಹೊಳ್ಳಿ ಹಾಗೂ ಅವರ ಪುತ್ರ ಯುವ ಉದ್ಯಮಿ ಸಂತೋಷ ಐಹೊಳ್ಳಿ ಕರದಂಟು ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಸದ್ಯ ಸಕ್ಕರೆ ಹಾಗೂ ಬೆಲ್ಲದಿಂದ ಹೊರತುಪಡಿಸಿ ಅಂಜೂರ ಹಾಗೂ ಖರ್ಜೂರದಿಂದ ಕರದಂಟು ತಯಾರಿಸಿ ಮತ್ತಷ್ಟು ಜನಪ್ರೀಯತೆಗೆ ಹೊಸ ಹೆಜ್ಜೆ ಇಟ್ಟಿದ್ದಾರೆ.

ನೂರು ವರ್ಷಕ್ಕೂ ಹೆಚ್ಚು ಕಾಲ ಕರದಂಟು ತಯಾರಿಸಿ ಮಾರಾಟ ಮಾಡುತ್ತಿರುವ ಐಹೊಳ್ಳಿ ಕುಟುಂಬದ ಮೂರನೇ ತಲೆಮಾರಿನ ಕುಡಿ, ಯುವ ಉದ್ಯಮಿ ಸಂತೋಷ ಐಹೊಳ್ಳಿ ಹೊಸ ಚಿಂತನೆಯೊಂದಿಗೆ ಹೊಸ ರೂಪದಲ್ಲಿ ಕರದಂಟನ್ನು ಮಾರುಕಟ್ಟೆಗೆ ತಂದಿದ್ದಾರೆ. ಇತ್ತೀಚೆಗೆ ಅಮೀನಗಡಕ್ಕೆ ಆಗಮಿಸಿದ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾರುಕಟ್ಟೆಗೆ ವಿನೂತನ ಸ್ವಾದಿಷ್ಠದ ಕರದಂಟನ್ನು ಬಿಡುಗಡೆಗೊಳಿಸಿದರು.

ಕರದಂಟು ಎಂಬ ಹೆಸರು ಕೇಳುತ್ತಲೇ ಅದರ ಸ್ವಾಧ ಅರಿಯದವರಿಲ್ಲ. ಇದು ಸಿಹಿ ತಿನ್ನಿಸು ಮಾತ್ರವಲ್ಲ, ಪೌಷ್ಠಿಕ ಆಹಾರವೂ ಆಗಿದೆ. ಪಿಸ್ತಾ, ಕೇರಬೀಜ, ಗಸಗಸಿ, ಗೋಡಂಬಿ, ಬಾದಾಮಿ, ತುಪ್ಪ, ಒಣದ್ರಾಕ್ಷಿ, ಜಾಜಿಕಾಯಿ, ಏಲಕ್ಕಿ, ಬೆಲ್ಲ, ಜಾಲಿಗಿಡದ ಅಂಟು, ಇಲಾಚಿ, ಆಳ್ವಿ ಮತ್ತಿತರ ಸತ್ವಾಂಶವುಳ್ಳ ವಸ್ತುಗಳು ಸೇರಿ ಕರದಂಟು ಸಿದ್ಧವಾಗುತ್ತದೆ. ಹಾಗಾಗಿ ಇದಕ್ಕೆ ನಾಲಗೆಯ ರುಚಿಯ ಖಾದ್ಯದ ಜತೆಗೆ ಪೌಷ್ಠಿಕ ಆಹಾರ ಎನ್ನುವ ಹೆಗ್ಗಳಿಕೆಯೂ ಉಂಟು.

ಹೀಗೆ ಪಿತ್ರಾರ್ಜಿತ ವೃತ್ತಿಯಾಗಿ ರುಚಿ, ಶುಚಿಯೊಂದಿಗೆ ಕರದಂಟನ್ನು ಜನಪ್ರೀಯಗೊಳಿಸುತ್ತ ಅದನ್ನು ಒಂದು ಉದ್ಯಮವನ್ನಾಗಿ ಬೆಳೆಸುತ್ತಿರುವ ಸಂತೋಷ ಐಹೊಳ್ಳಿ, ಕರದಂಟಿಗೆ ಗುಣಮಟ್ಟ ಪ್ರಮಾಣಪತ್ರ ಪಡೆದಿದ್ದಲ್ಲದೆ ವಿದೇಶದಲ್ಲೂ ಕರದಂಟನ್ನು ಘಮಘಮಿಸುವಂತೆ ಮಾಡಿದ್ದಾರೆ. ಸದ್ಯ ಒಂದು ಹೆಜ್ಜೆ ಮುಂದೆ ಸಾಗಿ ಸಿಹಿ ರಹಿತ ಅಂಜೂರ ಹಾಗೂ ಖರ್ಜೂರದಿಂದ ತಯಾರಿಸಿದ ರುಚಿಯಾದ ಕರದಂಟನ್ನು ಪರಿಚಯಿಸಿದ್ದಾರೆ. ಮುಖ್ಯವಾಗಿ ಡಯಾಬಿಟಿಸ್ ಹಾಗೂ ರಕ್ತದ ಅಂಶ ಕಡಿಮೆ ಇರುವವರಿಗೆ ರಾಮಬಾಣವಾಗಲಿದೆ ಎನ್ನಲಾಗಿದೆ.

ಅಂತೂ ಬಾಗಲಕೋಟೆ ಜಿಲ್ಲಾ ಪ್ರವಾಸಕ್ಕೆ ಬಂದ ಪ್ರವಾಸಿಗರಿಗೆ ವಿಜಯಾ ಕರದಂಟು ಶುಚಿ, ರುಚಿ, ಆರೋಗ್ಯ, ಗುಣಮಟ್ಟದೊಂದಿಗೆ ಸ್ವೀಟ್‌ಲೆಸ್ ಕರದಂಟು ದೊರೆಯಲಿದ್ದು ಕರದಂಟಿಗೆ ಮತ್ತೆ ಬೇಡಿಕೆ ಹೆಚ್ಚುವುದಲ್ಲದೆ ಕರದಂಟು ಉದ್ಯಮವೂ ಬೆಳವಣಿಗೆ ಹೊಂದಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ರಾಜ್ಯ ಹಾಗೂ ದೇಶ ವಿದೇಶಕ್ಕೂ ಯಾವುದೇ ಮೂಲೆಯಲ್ಲಿರಲಿ ಕರದಂಟು ಕಳುಹಿಸಿಕೊಡುವ ವ್ಯವಸ್ಥೆ ಇದ್ದು ಉದ್ಯಮಿ ಸಂತೋಷ ಐಹೊಳ್ಳಿ (9880112002) ಗೆ ಸಂಪರ್ಕಿಸಬಹುದಾಗಿದೆ.

“ಕರದಂಟಿಗೆ ಹೊಸ ರೂಪು ಕೊಡಲು ಅಂಜೂರ ಹಾಗೂ ಖರ್ಜೂರ ಮಿಶ್ರಿತ ಸಿಹಿ ರಹಿತ ಕರದಂಟು ತಯಾರಿಸಲಾಗಿದೆ. ಇದು ಮಧುಮೇಹ ಹಾಗೂ ಹಿಮೋಗ್ಲೋಬಿನ್‌ನಿಂದ ಬಳಲುತ್ತಿರುವವರಿಗೆ ಸೂಕ್ತ ಪೌಷ್ಠಿಕ ಆಹಾರವಾಗಲಿದೆ.”
-ಸಂತೋಷ ಐಹೊಳ್ಳಿ, ಯುವ ಉದ್ಯಮಿ, ವಿಜಯಾ ಕರದಂಟು ಅಮೀನಗಡ.

";