ಹುಬ್ಬಳ್ಳಿ,: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಅನ್ನು ಬ್ಯಾನ್ ಮಾಡಿದ್ದರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸುಳ್ಳು ಹೇಳುತಿಲ್ಲ, ಬೇಕಿದ್ದರೆ ಬಿಜೆಪಿಯವರನ್ನು ಕೇಳಿ. ದಾಖಲೆ ತೆಗದು ನೋಡಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಆರ್ಎಸ್ಎಸ್ ಬ್ಯಾನ್ ಮಾಡಿದ್ದು. ಇದೀಗ ಅವರೇ ಸರ್ದಾರ್ ವಲ್ಲಭಭಾಯಿ ಪಟೇಲ್ರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣವಾಯ್ತು, ಮುಂದೇನು? ಇವರ ಸಿದ್ಧಾಂತವೆ ನನಗೆ ಅರ್ಥವಾಗುತಿಲ್ಲ. ಆರ್ಎಸ್ಎಸ್, ಬಿಜೆಪಿಯವರು ಯಾರ ಪರ ಇದ್ದಾರೋ? ಯಾರ ವಿರುದ್ಧ ಇದಾರೋ? ಅರ್ಥವಾಗುತ್ತಿಲ್ಲ ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು ಚೈನಾದವರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಎಲ್ಲಾದರೂ ಒಂದು ಪೋಸ್ಟರ್ ಇದೆಯಾ? ಹಳ್ಳಿ ಭಾಷೆಯಲ್ಲಿ ಜಾತ್ರೆ ಇದ್ದಾಗ ತುರಾಡುವುದು ಅಂತಾರೆ ಹಾಗಲ್ಲ. ಇದೊಂದು ಜಾತ್ರೆ, ಮತ್ತೊಂದು ಜಾತ್ರೆ ಎಂದು ಪರೋಕ್ಷವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.