This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsPolitics NewsState News

ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಿ : ಸತೀಶ ಜಾರಕಿಹೊಳಿ

ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಿ : ಸತೀಶ ಜಾರಕಿಹೊಳಿ

ಬಾಗಲಕೋಟೆ:

ಗುಣಮಟ್ಟದ ಕಾಮಗಾರಿಗಳಿಗೆ ಅಧಿಕಾರಿಗಳು ಆದ್ಯತೆ ನೀಡಿ ಕೆಲಸ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನವನಗರದ ಹೊಸ ನಿರೀಕ್ಷಣಾ ಮಂದಿರದಲ್ಲಿ ಮಂಗಳವಾರದಂದು ಜರುಗಿದ ಬಾಗಲಕೋಟೆ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗುವ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಇದರ ಸಂಪರ‍್ಣ ಜವಾಬ್ದಾರಿಯನ್ನು ಸಹಾಯಕ ಕರ‍್ಯನಿವಾಹಕ ಅಭಿಯಂತರರಿಗೆ ವಹಿಸಲಾಗುತ್ತಿದ್ದು, ಲೋಪದೋಷಗಳು ಏನಾದರು ಕಂಡು ಬಂದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಗುತ್ತಿಗೆದಾರರಿಂದ ಸರಿಯಾದ ಕೆಲಸ ಮಾಡಿಸಿಕೊಳ್ಳಬೇಕು. ಗುತ್ತಿಗೆದಾರರರು ಹಣ ಉಳಿಸಿಕೊಳ್ಳಲು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ನಮ್ಮ ರಸ್ತೆ ಮತ್ತು ಕಟ್ಟಡಗಳನ್ನು ಹಾಳು ಮಾಡುವ ಸಂಭವನೀಯತೆ ಇರುವದರಿಂದ ಅಧಿಕಾರಿಗಳು ಕಾಮಗಾರಿಯ ಸ್ಥಳಗಳಿಗೆ ಖುದ್ದು ಬೇಟಿ ನೀಡಬೇಕು. ಶಾಲೆ ಮತ್ತು ಅಂಗನವಾಡಿ ಕಟ್ಟಡಗಳನ್ನು ನರ‍್ಮಿಸಿದ ನಂತರ ಯಾವುದೇ ಕಾರಣಕ್ಕೂ ದೂರುಗಳು ಬರದಂತೆ ಕರ‍್ಯನರ‍್ವಹಿಸಿರಿ. ಯಾವುದೇ ಕಾಮಗಾರಿಯಾಗಿದ್ದರೂ ಅದರ ಮುಂಚಿನ, ನಂತರದ ಹಾಗೂ ಅಂತೀಮ ವರದಿಯನ್ನು ಛಾಯಾಚಿತ್ರ ಹಾಗೂ ವೀಡಿಯೊ ತುಣುಕುಗಳೊಂದಿಗೆ ಸಚಿವಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಒಂದು ಬಾರಿ ರಸ್ತೆ ಕಾಮಗಾರಿಯಲ್ಲಿ ಅದು ಕನಿಷ್ಠ ೧೦ ರ‍್ಷವಾದರು ಬಾಳಿಕೆ ಬರುವಂತಿರಬೇಕು ಎಂದು ಹೇಳಿದರು.

ರಸ್ತೆಗಳನ್ನು ತಿಪ್ಪಿ ಗುಂಡಿಗಳು ಮತ್ತು ಬೆಳೆಗಳಿಂದ ಅತೀಕ್ರಮಣವಾಗದಂತೆ ಹಾಗೂ ರಸ್ತೆ ಮಧ್ಯದಲ್ಲಿ ಚರಂಡಿ ನೀರು ಅಥವಾ ಮಳೆ ನೀರು ನಿಲ್ಲದಂತೆ ಸಂರಕ್ಷಿಸಬೇಕು. ಇಲಾಖೆಗೆ ಸಾಕಷ್ಟು ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಧಿಕಾರಿಗಳು ಕ್ರೀಡಾಂಗಣ, ಗ್ರಂಥಾಲಯದಂತಹ ಸರ‍್ವಜನಿಕರಿಗೆ ಉಪಯೋಗವಾಗುವಂತಹ ಕಾಮಗಾರಿಗಳಿಗೆ ಒತ್ತು ನೀಡಬೇಕು ಎಂದರು.

ಲೋಕೋಪಯೋಗಿ ಇಲಾಖೆ ಬಾಗಲಕೋಟ ವಿಭಾಗದ ಕಾರ‍್ಯನಿವಾಹಕ ಅಭಿಯಂತರರಾದ ರಾಜಶೇಖರ ಕಡಿವಾಲ ಅವರು ಸಭೆಗೆ ಮಾಹಿತಿ ನೀಡಿ ನಬರ‍್ಡ ೨೭ ಯೋಜನೆಯಡಿ ರೂ. ೩೫.೮೫ ಕೋಟಿ ಅನುದಾನದಲ್ಲಿ ೭ ಸೇತುವೆ ನರ‍್ಮಾಣ ಕಾಮಗಾರಿಗಳಿದ್ದು, ಇದರಲ್ಲಿ ೧ ಸೇತುವೆ ಪರ‍್ಣಗೊಂಡಿರುತ್ತದೆ. ಬಾಕಿ ಉಳಿದ ೬ ರಸ್ತೆ ಸೇತುವೆ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ರ‍್ನಾಟಕ ರಸ್ತೆ ಅಭಿವೃದ್ದಿ ಯೋಜನೆ ನಾಲ್ಕನೆ ಹಂತದ ರೂ.೧೫೪ ಕೋಟಿ ಅನುದಾನದಲ್ಲಿ ೬ ಪ್ಯಾಕೇಜ್ ಅಡಿ ೧೧ ರಸ್ತೆಗಳ ಮುಖಾಂತರ ೭೭.೩೦ ಕಿ ಮೀ ಉದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಯೋಜಿಸಲಾಗಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ ಎಂದು ಹೇಳಿದರು.

ಸಭೆಯಲ್ಲಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕರಾದ ಹೆಚ್.ವಾಯ್ ಮೇಟಿ, ಜೆ.ಟಿ ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ಮುಖ್ಯ ಅಭಿಯಂತರ ಹೆಚ್.ಸುರೇಶ, ಬೆಳಗಾವಿ ವೃತ್ತದ ಅಧೀಕ್ಷಕ ಅಭಿಯಂತರ ಅರುಣಕುಮಾರ ಪಾಟೀಲ ಹಾಗೂ ಜಿಲ್ಲೆಯ ಎಲ್ಲ ಉಪ ವಿಭಾಗದ ಸಹಾಯಕ ಕರ‍್ಯನರ‍್ವಾಹಕ ಅಭಿಯಂತರರು, ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ಇದ್ದರು.

Nimma Suddi
";