ಬಾಗಲಕೋಟೆ
ನಗರದ ನವನಗರದಲ್ಲಿ ಎಸ್ ಬಿ ಐ ಲೈಫ್ ಇನ್ಸೂರನ್ಸ್ ಜಿಲ್ಲಾ ಶಾಲೆಯ ಉದ್ಘಾಟನಾ ಸಮಾರಂಭ ಡಿ:೫, ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಮಾಡಿ ಮಾತನಾಡಿದ ಎಸ್ ಬಿ ಐ ಲೈಫ್ ಇನ್ಸೂರನ್ಸ್ ನ ಕರ್ನಾಟಕ ಪ್ರಾಂತ್ಯದ ಮುಖ್ಯಸ್ಥ ಅಶ್ವಿನಿಮಾರ ಶುಕ್ಲಾ ಅವರು ಮಾತನಾಡಿ, ಜೀವ ವಿಮಾ ಪಾಲಸಿದಾರನ ಮರಣದ ಸಂದರ್ಭದಲ್ಲಿ ನಿರ್ದಿಷ್ಟವಾದ ಫಲಾನುಭವಿ ಅಥವಾ ಸಂಬಂಧಿಸಿದ ವ್ಯಕ್ತಿಗಳಿಗೆ ಪಾವತಿಸಲು ಒಪ್ಪಿಕೊಂಡಿರುವ ಒಂದು ವಿಧದ ವಿಮಾ ಯೋಜನೆ. ಇದರ ಪ್ರಯೋಜನವನ್ನು ಜೀವ ಹಾನಿ ಸಂಭವಿಸಿದಲ್ಲಿ ಅಥವಾ ಅಂಗವೈಕಲ್ಯ ,ಅಂಗವಿಕಲತೆ, ಗಂಭೀರವಾದ ಅನಾರೋಗ್ಯದ ರೋಗದ ನಿರ್ಣಯದಂತಹ ಕೆಲವು ನಿರ್ದಿಷ್ಟವಾದ ಮಾನದಂಡ ಪೂರೈಸಿದರೆ ಪಾಲಸಿದಾರರ ಮುಂದಿನ ಸಂಬಂಧಿಕರು, ಕುಟುಂಬದ ಸದಸ್ಯರು ಆರ್ಥಿಕವಾಗಿ ಸಹಾಯಕ್ಕಾಗಿ ಇರುತ್ತದೆ ಎಂದರು.
ಜೀವ ವಿಮೆಯ ಸೌಲಭ್ಯಗಳು ಹಲವಾರು ಪ್ರಕಾರಗಳು ಹೀಗಿವೆ; ಟರ್ಮ ಲೈಫ್ ವಿಮಾ ಯೋಜನೆ ಇದು ನಿರ್ದಿಷ್ಟವಾದ ಅಪಾಯವನ್ನು ಹೊಂದಿರುತ್ತದೆ. ಯುನಿಟ್ ಲಿಂಕ್ ಪಾಲಸಿ,ಆಯ್ಕೆಯ ಹೂಡಿಕೆಗೆ ಅವಕಾಶ ನೀಡುತ್ತದೆ, ದತ್ತಿ ಯೋಜನೆ, ವಿಮೆ ಮತ್ತು ಉಳಿತಾಯದ ಮನಿ ಬ್ಯಾಕ್ ವಿಮಾ ರಕ್ಷಣೆಯನ್ನು ಆವರ್ತಕ ಆದಾಯವನ್ನು ಹೊಂದಿರುವ ಯೋಜನೆಯಾಗಿದೆ.
ಸಂಪೂರ್ಣ ಜೀವ ವಿಮೆ ಜೀವ ವಿಮಾದಾರರಿಗೆ ಸಂಪೂರ್ಣ ಜೀವಿತ ರಕ್ಷಣೆ ಹೊಂದಿರುವ ಯೋಜನೆಯಾಗಿದೆ. ಮಕ್ಕಳ ಯೋಜನೆ – ಶಿಕ್ಷಣ ಮತ್ತು ಮದುವೆಯಂತಹ ನಿಮ್ಮ ಮಗುವಿನ ಜೀವನದ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ನಿವೃತ್ತಿ ಯೋಜನೆ – ನಿವೃತ್ತಿಯ ನಂತರವೂ ಆದಾಯ ನೀಡುವ ಯೋಜನೆಯನ್ನು ಹೊಂದಿದೆ, ಹೀಗೆ ಹಲವು ವಿಧದ ವಿಮಾ ಯೋಜನೆಗಳನ್ನು ಹೊಂದಿರುವ ಎಸ್ ಬಿ ಐ ಲೈಫ್ ಇನ್ಸೂರನ್ಸ್ ನಲ್ಲಿನ ಹೊಡಿಕೆದಾರರ ಭವಿಷ್ಯದ ಸುರಕ್ಷಿತೆಯೊಂದಿಗೆ ಅವರ ಕುಟುಂಬದ ಆರ್ಥಿಕವಾಗಿ ರಕ್ಷಣೆಯನ್ನು ಒದಗಿಸುತ್ತದೆ,ಎಂದು ಎಸ್ ಬಿ ಐ ಲೈಫ್ ಇನ್ಸೂರನ್ಸ್ ಕರ್ನಾಟಕ ಪ್ರಾಂತ್ಯದ ಮುಖ್ಯಸ್ಥ ಅಶ್ವಿನಿಕುಮಾರ ಶುಕ್ಲಾ ಹೇಳಿದರು.
ಈ ಸಂದರ್ಭದಲ್ಲಿ ಎಸ್ ಬಿ ಐ ಲೈಫ್ ಇನ್ಸೂರನ್ಸ್ ನ ಪ್ರಾದೇಶಿಕ ವ್ಯವಸ್ಥಾಪಕ ಸುರೇಶಚಂದಿರ ರೆಡ್ಡಿ, ಬವಿವ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬಾಗಲಕೋಟೆ ಶಾಖೆಯ ವ್ಯವಸ್ಥಾಪಕ ರಮೇಶ ಪಿಂಡರಕಿ,ಹಾಗೂ ಜಿಲ್ಲೆಯ ಎಲ್ಲಾ ವಿಮಾ ಪ್ರತಿನಿಧಿಗಳು ಭಾಗವಹಿಸಿದ್ದರು.