ಬೆಂಗಳೂರು: ದಲಿತರಿಗೆ ಸರ್ಕಾರದಿಂದ ಸಿಗುವ ಯೋಜನೆಗಳು, ಕಾರ್ಯಕ್ರಮಗಳು ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸಮಗ್ರ ಜಾರಿ ಸಮಾವೇಶದಲ್ಲಿ ಅಬಕಾರಿ ಮತ್ತು ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಭಾಗವಹಿಸಿದ್ದರು.
ಹೋರಾಟ ಮಾಡಿರುವುದು ಸಾಕು, ನಿಮಗೆ ಬೇಕಾದವರನ್ನ ಎಂಎಲ್‌ಎ, ಎಂಪಿಯನ್ನ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಬಗ್ಗೆ ಭಯ ಇರುವಂತವರನ್ನು ಆಯ್ಕೆ ಮಾಡಿದ್ರೆ ಹೋರಾಟ ಮಾಡುವ ಅವಶ್ಯಕತೆಯೇ ಇರಲ್ಲ, ತಾನಾಗಿಯೇ ಅಭಿವೃದ್ಧಿ ಆಗಲಿದೆ. ಗಟ್ಟಿ ಮಾತಿನಿಂದ ಮಾತ್ರ ಗುರಿ ಮುಟ್ಟೋಕೆ ಸಾಧ್ಯ ಆಗಲಿದೆ. ಅಂಬೆಂಡ್ಕರ್ ಅವರ ಗಟ್ಟಿ ಮಾತಿನಿಂದ ಮಾತ್ರ ಗುರಿ ಮುಟ್ಟಲು ಸಾಧ್ಯವಾಯಿತು ಎಂದು ಸಚಿವ ತಿಮ್ಮಾಪೂರ ಅವರು ಹೇಳಿದರು.
ಸರ್ಕಾರದಿಂದ ದಲಿತರಿಗೆ ಸಿಗುವ ಯೋಜನೆಗಳು, ಕಾರ್ಯಕ್ರಮಗಳು ದುರುಪಯೋಗ ಆಗುತ್ತಿದೆ. ದಲಿತರ ಹೆಸರಲ್ಲಿ ಬೇರೆಯವರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಯಾರು ಚಕಾರ ಎತ್ತುತ್ತಿಲ್ಲ. ಇದರ ಬಗ್ಗೆ ಜಾಗೃತಿ ಮೂಡಬೇಕು. ಬದಲಾವಣೆ ಆಗಬೇಕು. ಪ್ರತಿಯೊಬ್ಬರು ಬದಲಾವಣೆ ಕಡೆಗೆ ಹೆಜ್ಜೆ ಹಾಕಿ. ಬದಲಾವಣೆ ಆದ್ರೆ ಮಾತ್ರ ಅಭಿವೃದ್ಧಿಯಾಗುತ್ತದೆ. ಮತ ಯಾರಿಗೆ ಹಾಕಿದ್ರೆ ಅಭಿವೃದ್ಧಿ ಆಗುತ್ತೆ ಅರಿವು ಇರಬೇಕು. ಈ ರೀತಿಯ ಕಾರ್ಯಕ್ರಮಗಳು ಬದಲಾವಣೆಗೆ ದಾರಿಯಾಗಲಿ ಎಂದು ಸಚಿವ ಆರ್ ಬಿ ತಿಮ್ಮಾಪೂರ ಅವರು ಹೇಳಿದರು.
ಮನವಾದವನ್ನು ಧೈರ್ಯವಾಗಿ ಎದುರಿಸಲಿಲ್ಲ ಅಂದ್ರೇ, ಮನುವಾದವೇ ನಮ್ಮನ್ಮ ಆಳುತ್ತೆ. ಈ ಬಗ್ಗೆ ಸೂಕ್ಷವಾಗಿ ಅರಿತುಕೊಳ್ಳಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರು, ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿಎನ್ ಚಂದ್ರಪ್ಪ, ಜಿಗಣಿ ಶಂಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.