This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಕೃಷಿಯಲ್ಲಿ ವೈಜ್ಞಾನಿಕ ಪದ್ದತಿ ಅನುಸರಿಸಿ:ಕಾರಜೋಳ

ಜಿಲ್ಲೆಯಲ್ಲಿ ಪಾಯಲೆಟ್ ಪ್ರಾಜೆಕ್ಟ್ ಅಳವಡಿಕೆಗೆ ಕ್ರಮ

ನಿಮ್ಮ ಸುದ್ದಿ ಬಾಗಲಕೋಟೆ

ಭೂಮಿ ಸವಳು-ಜವಳು ಆಗುವದನ್ನು ತಡೆಗಟ್ಟಲು ಕೃಷಿಯಲ್ಲಿ ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಮುಧೋಳದ ರನ್ನ ಭವನದಲ್ಲಿ ಶನಿವಾರ ಜಲ ಸಂಪನ್ಮೂಲ ಇಲಾಖೆ, ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ, ರಾಜ್ಯ ನೀರಾವರಿ ನಿಗಮ, ಅಚ್ಚಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ, ತೋಟಗಾರಿಕೆ ವಿವಿ, ಕೃಷಿ, ತೋಟಗಾರಿಗೆ ಹಾಗೂ ಇತರೆ ಸಹಯೋಗದಲ್ಲಿ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಸವಳು-ಜವಳು ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಮುಧೋಳ ಭಾಗದಲ್ಲಿ ನೀರಾವರಿ ಕ್ಷೇತ್ರ ಹೆಚ್ಚಾಗಿದ್ದು, ಕಬ್ಬು ಬೆಳೆಯನ್ನೇ ಹೆಚ್ಚಾಗಿ ಬೆಳೆಯುತ್ತಿರುವದರಿಂದ ಭೂಮಿ ಸವಳು-ಜವಳು ಆಗುತ್ತಿದೆ. ಮುಧೋಳ ತಾಲೂಕಿನಲ್ಲಿಯೇ ಅಂದಾಜು 7900 ಎಕರೆ ಸವಳು ಭೂಮಿ ಇದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಉಳಿಸಲು ಮಣ್ಣಿನ ಗುಣಮಟ್ಟ ಹೆಚ್ಚಿಸಲು ವಿವಿದ ಬೆಳೆ ಪದ್ದತಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿಯೇ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಶೇ.35 ರಷ್ಟು ನೀರಾವರಿ ಕ್ಷೇತ್ರವಿದ್ದು, ಇನ್ನು ಶೇ.65 ರಷ್ಟು ನೀರಾವರಿ ಮಾಡಿದಾಗ ಮಾತ್ರ 22 ಲಕ್ಷ ಎಕೆರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿದೆ. ಅದಕ್ಕಾಗಿ 2.35 ಲಕ್ಷ ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಇದು ಸುಲಭದ ಮಾತಲ್ಲ. ಶೇ.20 ರಷ್ಟು ಭೂಮಿ ಸವಳು-ಜವಳು ಆಗಿದ್ದು, ಅಂತಹ ಭೂಮಿಯಲ್ಲಿ ಪರ್ಯಾಯ ಬೆಳೆಯ ಬಳೆಯಬೇಕಾಗುತ್ತದೆ. ನಮಗೆ ಆರಾಮವಿಲ್ಲದಾಗ ಡಾಕ್ಟರ ಬಳಿ ಹೋಗುವ ಹಾಗೆ ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆಗೆ ಅಳವಡಿಸುವುದು ಅವಶ್ಯವಾಗಿದೆ ಎಂದರು.

ನಮ್ಮ ರಾಜ್ಯದಲ್ಲಿ ಮೀನುಗಾರಿಕೆ ಇಲಾಖೆಗೆ ಹೆಚ್ಚಿನ ಬೇಡಿಕೆ ಇದೆ. ಸವಳು ಭೂಮಿಯಲ್ಲಿ ಮೀನು ಕೃಷಿ ಕೈಗೊಳ್ಳುವದರಿಂದ ವರ್ಷಕ್ಕೆ 4 ಲಕ್ಷ ರೂ.ಗಳ ಆದಾಯ ಪಡೆಯಬಹುದಾಗಿದೆ. ಒಂದು ಎಕರೆ ಭೂಮಿಯಲ್ಲಿ ಹೊಂಡ ಮಾಡಿಕೊಂಡು ಕಸ ತೆಗೆಯುವುದು, ಗಳೆ ಹೊಡುವುದು ಯಾವುದೇ ಇರುವದಿಲ್ಲ. ಮೀನು ಕೃಷಿಯಿಂದ ಉತ್ತಮ ಆದಾಯ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಿಂದಲೇ ವರ್ಷಕ್ಕೆ 50 ಸಾವಿರ ಟನ್ ಮೀನು ಉತ್ಪಾಧಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಜಮಖಂಡಿ ಮತ್ತು ಮುಧೋಳ ತಾಲೂಕಿನಲ್ಲಿ ಪಾಯಲೆಟ್ ಪ್ರಾಜೆಕ್ಟ್ ಅಳವಡಿಸಲಾಗುತ್ತಿದ್ದು, ರೈತರಿಗೆ ಎಲ್ಲ ತರಹದ ಮಾಹಿತಿ ನೀಡುವ ಸಲುವಾಗಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು. ಅನೇಕ ಸಂಪನ್ಮೂಲ ವ್ಯಕ್ತಿಗಳು ಸವಳು-ಜವಳು ನಿವಾರಣೆಗೆ ಕ್ರಮಗಳನ್ನು ತಿಳಿಸಿಕೊಡಲಿದ್ದಾರೆ ಎಂದರು.

ಕಾರ್ಯಾಗಾರದಲ್ಲಿ ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಂ.ಎಸ್.ಶಿರಹಟ್ಟಿ ಸವಳು ಜವಳು ನಿರ್ವಹಣೆಯಲ್ಲಿ ತಾಂತ್ರಿಕ ಪರಿಹಾರ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಡಾ.ವಿ.ಬಿ.ಕುಲಗೋಡ ಸವಳು ಜವಳು ಪ್ರದೇಶಗಳಲ್ಲಿ ಮಣ್ಣಿನ ಆರೋಗ್ಯ ನಿರ್ವಹಣೆ, ಬೇಸಾಯ ಶಾಸ್ತ್ರದ ಪ್ರಾಧ್ಯಾಪಕ ಡಾ.ಬಿ.ಟಿ.ನಾಡಗೌಡ ಅಚ್ಚುಕಟ್ಟು ಪ್ರದೇಶಗಳಲ್ಲಿ ಸೂಕ್ತ ಬೆಳೆ, ಬೇಸಾಯ ಪದ್ದತಿಗಳು, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಎಂ.ಎಚ್.ಭಾಂಗಿ ನೀರಾವರಿ ಕ್ಷೇತ್ರಗಳಲ್ಲಿ ಲಾಭದಾಯಕ ಮೀನು ಕೃಷಿ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜಾನಮಟ್ಟಿ ಸವಳು ಜವಳು ಕ್ಷೇತ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಧಾರವಾಡದ ವಾಲ್ಮಿ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ಬೆಳಗಾವಿ ಕಾಡಾ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ಆಡಳಿತಾಧಿಕಾರಿ ಶಶಿಧರ ಕುರೇರ, ಧಾರವಾಡ ಕೃಷಿ ನಿರ್ದೇಶಕ ಡಾ.ಪಿ.ಎಲ್.ಪಾಟೀಲ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತಹಶೀಲ್ದಾರ ಸಂಗಮೇಶ ಬಾಡಗಿ, ಅಶೋಕ ಖಂಡ್ರಟ್ಟಿ, ಲಕ್ಷ್ಮಣ ಚಿನ್ನಣ್ಣವರ, ತೋವಿವಿಯ ಪ್ರಾದ್ಯಾಪಕ ಡಾ.ಎಸ್.ಶಶಿಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

";