This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics NewsState News

ಜಾತ್ಯತೀತತೆ ಎನ್ನುವುದು ಭಾರತೀಯರ ರಕ್ತ, ಸ್ವಭಾವದಲ್ಲೇ ಬಂದಿದೆ: ಪ್ರಲ್ಹಾದ್‌ ಜೋಶಿ

ಜಾತ್ಯತೀತತೆ ಎನ್ನುವುದು ಭಾರತೀಯರ ರಕ್ತ, ಸ್ವಭಾವದಲ್ಲೇ ಬಂದಿದೆ: ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ: ದೇಶದಲ್ಲಿ ಹಿಂದು ಜನಸಂಖ್ಯೆ ಕುಸಿತ ತೀವ್ರ ಆತಂಕಕಾರಿ ಬೆಳವಣಿಗೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೇ ಎಚ್ಚೆತ್ತುಕೊಂಡು ಪರ್ಯಾಯ ಕ್ರಮ ಕೈಗೊಳ್ಳ ಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿ, ಹಿಂದುಗಳ ಜನಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ. ಆದರೆ, ಸಮಗ್ರ ಅಧ್ಯಯನ ನಡೆಸಬೇಕಿದೆ. ಜಗತ್ತಿ ನಲ್ಲೇ ಏಕೈಕ ಜಾತ್ಯತೀತ ರಾಷ್ಟ್ರ ಭಾರತ. ಜಾತ್ಯತೀತತೆ ಎನ್ನುವುದು ಭಾರತೀಯರ ರಕ್ತ, ಸ್ವಭಾವದಲ್ಲೇ ಬಂದಿದೆ.ಮುಂದೊಂದು ದಿನ ಇದಕ್ಕೆ ಧಕ್ಕೆ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಆದರೆ, ಕಾಂಗ್ರೆಸ್ ದೇಶ ವಿಭಜಿಸುವ ರೀತಿ ಮಾತನಾಡುತ್ತಿದೆ ಎಂದರು. ಮೀರಿ ವರ್ಣ, ಬಣ್ಣ, ಚರ್ಮ ಕಾಂತಿ, ವಿಭಿನ್ನ ಸಂಸ್ಕೃತಿ ಎನ್ನುತ್ತ ಪ್ರತ್ಯೇಕತೆ ಭಾವ ಮೂಡಿ ಸುವುದು ಶೋಭೆ ತರದು. ಜಾತಿ, ಸಂಸ್ಕೃತಿ, ಬಣ್ಣ ಎಲ್ಲವನ್ನೂ ಭಾರತ ಸಾಂಸ್ಕೃತಿಕವಾಗಿ ಬಹು ವಿಶಾಲವಾಗಿದೆ. ಅಫ್ಘಾನಿಸ್ತಾನದವರೆಗೂ ಭಾರತ ವಿಸ್ತಾರವಾಗಿದೆ.

ಆದರೂ ಸಾಂಸ್ಕೃತಿಕವಾಗಿ ತಲ ತಲಾಂ ತರದಿಂದಲೂ ಒಂದಾಗೇ ಉಳಿದಿದೆ ಎಂದು ಪ್ರತಿಪಾದಿಸಿದರು. ಭಾರತ ಪ್ರಮುಖವಾಗಿ ಹಿಂದುಗಳ ದೇಶ ವೆಂದರೂ ಸರ್ವ ಧರ್ಮೀಯರನ್ನು ಒಳಗೊಂಡಿದೆ. ಆದರೆ, ಈಗ ಹಿಂದುಗಳ ಸಂಖ್ಯೆಯೇ ಕುಸಿಯುತ್ತಿದೆ ಎಂಬುದು ಸರ್ಕಾರ, ಸಮಾಜ ಗಂಭೀರವಾಗಿ ಚಿಂತಿ ಸಬೇಕಾದ ಸಂಗತಿ ಎಂದು ಎಚ್ಚರಿಸಿದರು.

ಇದೇ ವೇಳೆ ಜೋಶಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ತಲ ತಲಾಂತರದಿಂದಲೂ ಒಂದಾಗಿರುವ ದೇಶವನ್ನು ಒಡೆಯುವ ಹುನ್ನಾರ ಮಾಡು ತಿದೆ. ಕಾಂಗ್ರೆಸ್‌ನವರು ದಕ್ಷಿಣ ಭಾರತ, ಉತ್ತರ ಭಾರತ ಎಂದು ಪ್ರತ್ಯೇಕತೆಯ ಮಾತ ನಾಡುತ್ತಿದ್ದಾರೆ. ದಕ್ಷಿಣ ಭಾರತದವರು ಆಫ್ರಿಕನ್ನರ ತರ, ಪೂರ್ವೋತ್ತರ ಭಾರತೀಯರು ಚೀನಿಸ್ ತರ ಕಾಣುತ್ತಾರೆ ಎಂದೆಲ್ಲ ಹೇಳುತ್ತ ದೇಶ ಒಂದಾಗಿಲ್ಲ ಎಂಬ ಸಂದೇಶ ಸಾರುವ ಪ್ರಯತ್ನ ಮಾಡುತ್ತಿದ್ದಾರೆ. ಉತ್ತರದಲ್ಲಿ ಕಾಶಿ ವಿಶ್ವನಾಥನ ದೇವಸ್ಥಾನ ವಿದ್ದರೆ, ದಕ್ಷಿಣದಲ್ಲಿ ರಾಮೇಶ್ವರ ದೇಗುಲವಿದೆ. ಆದರೆ, ಎರಡ ರಲ್ಲೂ ಈಶ್ವರನನ್ನೇ ಕಂಡ ದೇಶ ನಮ್ಮದು.

Nimma Suddi
";