ನಿಮ್ಮ ಸುದ್ದಿ ಬಾಗಲಕೋಟೆ
ಸೇವೆ ಮಾಡುವುದೇ ಜಗತ್ತಿನಲ್ಲಿ ಶ್ರೇಷ್ಠ ಧರ್ಮವಾಗಿದ್ದು, ಅದರ ಪ್ರತಿಫಲ ಕೆಲವರಿಗೆ ಮಾತ್ರ ಸಿಗಲು ಸಾಧ್ಯ ಎಂದು ಕೆಲೂರ ಗುರು ಮಂಟೇಶ್ವರ ಮಠದ ಡಾ.ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.
ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರ ಗ್ರಾಮದ ಗುರು ಮಂಟೇಶ್ವರ ಮಠದಲ್ಲಿ ಹುಣ್ಣಿಮೆ ನಿಮಿತ್ತ ನಡೆದ ೨೧೬ನೇ ಧರ್ಮ ಚಿಂತನಾ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು. ಮಹಾತ್ಮಾ ಗಾಂ, ಲಾಲ್‌ಬಹಾದ್ದೂರ್ ಶಾಸ್ತಿç ಅವರಂತೆ ಸತ್ಯ, ನ್ಯಾಯ, ನೀತಿ, ಧರ್ಮ ತತ್ವ, ಆದರ್ಶಗಳನ್ನು ನೂತನ ಗ್ರಾಮ ಪಂಚಾಯಿತಿ ಸದಸ್ಯರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಆಚರಣೆಗಳು ಒಂದು ಅಧ್ಯಯನ ಕುರಿತು ಪ್ರಬಂಧ ಮಂಡಿಸಿ ಆಂದ್ರಪ್ರದೇಶದ ದ್ರಾವಿಢ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿಗಳನ್ನು ಇದ್ದಲಗಿ ಗ್ರಾಮದ ನಿಂಗನಗೌಡ ನಾಡಗೌಡರ ಕುಟುಂಬದಿಂದ ಗೌರವಿಸಿ ಸತ್ಕರಿಸಲಾಯಿತು.
೨೦ ವರ್ಷದಿಂದ ಸೈನ್ಯದಲ್ಲಿ ಸೇವೆ ಸಲ್ಲಿಸಿ ಗ್ರಾಮಕ್ಕೆ ಮರಳಿದ ಯೋಧರಾದ ಬಸಲಿಂಗಪ್ಪ ಮಂಡಿ, ಶರಣಪ್ಪ ಕೊಟೇಣ್ಣವರ, ಕೆಲೂರ ಗ್ರಾಪಂಗೆ ನೂತನವಾಗಿ ಆಯ್ಕೆಯಾದ ಮಹಾಲೀಂಗೇಶ ನಾಡಗೌಡರ, ಉಮೇಶ ಹೂಗಾರ, ರಮೇಶ ಕೊಪ್ಪದ, ಗಿರಿಜಾ ಅಕಾರಿ, ರತ್ನಾ ಮಾದರ, ರೇಣುಕಾ ಕಮತರ, ಹನಮಂತ ವಡ್ಡರ, ಬೇಬಿಜಾನ ಸೀಮಿಕೇರಿ, ಭೀಮವ್ವ ತೋಟಗೇರ, ಹಾಗೂ ನೀಲವ್ವ ಕಬ್ಬರಗಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.
ಮುರನಾಳದ ಮೇಘರಾಜೇಂದ್ರ ಸ್ವಾಮೀಜಿ, ಮುತ್ತು ನಾಡಗೌಡರ, ಎಸ್.ವಿ.ಮಾದನಶೆಟ್ಟಿ ಬಸಪ್ಪ ಚಿಕ್ಕಣ್ಣವರ, ಪಿಕೆಪಿಎಸ್ ಉಪಾಧ್ಯಕ್ಷೆ ತಿಪ್ಪವ್ವ ಕೊಪ್ಪದ, ವಜೀರಪ್ಪ ಪೂಜಾರ, ಮುತ್ತಣ್ಣ ಮಂಡಿ, ನ್ಯಾಯವಾದಿ ಬಸವರಾಜ ನಾಡಗೌಡರ, ಸಾನ್ವಿ ನಾಡಗೌಡರ, ಸಂಗಪ್ಪ ಹೂಗಾರ, ಬಸವರಾಜ ಪಲ್ಲೇದ, ಶಂಕರ ಮಂಡಿ ಇತರರು ಇದ್ದರು.