ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯ ಅಮೀನಗಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಬಸ್ ನಿಲ್ದಾಣದ ಆವರಣದಲ್ಲಿ ಚಾಲಕ, ನಿರ್ವಾಹಕ, ನಿಯಂತ್ರಕರು ಹಾಗೂ ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿದರು.
ಪಪಂ ಸದಸ್ಯ ರಮೇಶ ಮುರಾಳ, ನಗರ ಘಟಕದ ಮಾಜಿ ಅಧ್ಯಕ್ಷ ಎಸ್.ಎಸ್.ಚಳ್ಳಗಿಡದ, ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ ಬಿಸಲದಿನ್ನಿ, ಯುವ ಘಟಕದ ಅಧ್ಯಕ್ಷ ಶಶಿ ಪಾಟೀಲ, ಮಾಜಿ ಸದಸ್ಯ ಫಯಾಜ್ ಮಸಳಿ, ಮನೋಹರ ರಕ್ಕಸಗಿ, ವಿಲಾಸ ಮೆಣಸಗಿ, ಶ್ರೀಧರ ಕ್ಯಾದಿಗ್ಗೇರಿ, ಗೌಡಪ್ಪ ಹೊರಗಿಮನಿ, ಪ್ರಭಾಕರ ನಾಗರಾಳ, ಅಮರೇಶ ಮಡ್ಡಿಕಟ್ಟಿ, ರವೀಂದ್ರ ಅನವಾಲ, ಡಿ.ಎಚ್.ಬಾಗೇವಾಡಿ, ಪ್ರಭು ತೆಗ್ಗಿನಮನಿ, ಸಲೀಂ ಹಾದಿಮನಿ, ಚಂದ್ರು ಹುಬ್ಬಳ್ಳಿ, ಸಿಕಂದರ ಲಾಲಕೋಟಿ, ಶೇಖರ ಶಾಂತಗೇರಿ ಇತರರು ಇದ್ದರು.