ಬಾಗಲಕೋಟೆ
ಭಾರತೀಯರಾದ ನಮಗೆ ಸ್ವಾತಂತ್ರ್ಯವು ಸುಲಭವಾಗಿ ದೊರೆತಿಲ್ಲ, ಲಕ್ಷಾಂತರ ಜನ ದೇಶಪ್ರೇಮಿಗಳ ತ್ಯಾಗ ಬಲಿದಾನದ ಪ್ರತೀಕದ ಸಂಭ್ರಮ ಇದಾಗಿದೆ ಎಂದು ಡಾ. ಆರ್.ಆರ್. ಶೆಟ್ಟರ್ ಇಂದಿಲ್ಲಿ ಹೇಳಿದರು.
ಸ್ಥಳೀಯ ಶ್ರೀ ರಂಗನಾಥ ಅಂತಾರಾಷ್ಟ್ರೀಯ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶದ ಹೊರಗಿರುವ ವೈರಿಗಳಿಗಿಂತ ದೇಶದ ಒಳಗಿರುವ ವೈರಿಗಳಿಂದ ದೇಶಕ್ಕೆ ಅಪಾಯ ಜಾಸ್ತಿ, ಆದ್ದರಿಂದ ನಾವು ನೀವೆಲ್ಲ ದೇಶ ಸೇವೆಗೆ ಮುಂದಾಗುವ ಸಂಕಲ್ಪ ಮಾಡಬೇಕಾಗಿದೆ , ತಾಯಿ ಜನ್ಮ ನೀಡಿದರೆ ಭೂತಾಯಿ ನಮಗೆ ಆಸರೆಯಾಗಿದ್ದಾಳೆ ಎಂದರು. ಶಾಲೆಯ ಕಾರ್ಯದರ್ಶಿ ರುಕ್ಮಾಸಾ ಕಾವಡೆ ಅವರು ಮಾತಾಡಿ ಮಕ್ಕಳು ಬಾಲ್ಯದಲ್ಲಿ ದೇಶಾಭಿಮಾನ, ರಾಷ್ಟ್ರ ನಾಯಕರ ಸ್ವಾಭಿಮಾನ, ಗಡಿಯಲ್ಲಿ ನಮಗಾಗಿ ಹಗಲಿರುಳು ದುಡಿಯುವ ಸೈನಿಕನ ಸೇವೆಯನ್ನು ಎಂದಿಗೂ ಮರೆಯಬಾರದು ಹೇಳಿದರು.
ನಂತರ ಶಾಲೆಯ ಮಕ್ಕಳಿಂದ ಆಕರ್ಷಕ ಪಂಥ ಸಂಚಲನ, ಹಾಡು, ನೃತ್ಯ, ಭಾಷಣ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಮಕ್ಕಳ ದೇಶಪ್ರೇಮವನ್ನು ಇಮ್ಮಡಿಗೊಳಿಸಿದವು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ರಾಮಕೃಷ್ಣ ಗಂಗೋಜಿ, ಗೀತಾ ಕಾವಡೆ, ಪ್ರಾಚಾರ್ಯ ವಿಕ್ರಮ್ ನಾರ್ವೇಕರ್, ವಸುಧಾ ನಾರ್ವೇಕರ್, ಸಂಗಮೇಶ ಹತ್ತರಕಿಹಾಳ, ಪ್ರಕಾಶ ವೆಂಕಣ್ಣವರ, ಕೃಷ್ಣಾ ಝಿಂಗಾಡೆ, ಚಂದ್ರಕಾಂತ ಆಲೂರ, ಇರ್ಫಾನ್ ಬೂದಿಹಾಳ, ಇಂಧುಮತಿ ಜಾಧವ ಸೇರಿದಂತೆ ಇತರರು ಹಾಜರಿದ್ದರು.