ಬಾಗಲಕೋಟೆ
ಭ್ರಷ್ಟಾಚಾರ ಮಾಡದವರನ್ನು ಸೋಲಿಸುವುದು. ಪರಮಭ್ರಷ್ಟರು, ಹೆಣ್ಣು ಮಕ್ಕಳೊಂದಿಗೆ ಚಕ್ಕಂದ ಆಡುವವರನ್ನು ಗೆಲ್ಲಿಸುವುದು. ಏನು ಬಂತ್ರಿ ಕರ್ಮ? ನಾಚಿಕೆಯಾಗಬೇಕಲ್ಲವಾ* ಎಂದು ಮೈಸೂರಿನ ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದರು.
ನಗರದಲ್ಲಿ ಹಿಂದು ಜಾಗರಣ ವೇದಿಕೆಯಿಂದ ಹಮ್ಮಿಕೊಂಡ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇದನ್ನು ಪ್ರಶ್ನೆ ಮಾಡಿದವರನ್ನು ಚಾಕು ಹಾಕಿ ಕೊಲೆ ಮಾಡಲಾಗುತ್ತದೆ ಎಂದರು.
ಮನೆಗೆ ೧೦ ಸಾವಿರ ಕೊಟ್ಟು ಬಾಗಲಕೋಟೆಯಲ್ಲಿ ಗೆದ್ದದ್ದಲ್ಲವಾ? ಅದರ ಆಸೆಗೆ ಓಟು ಹಾಕಿದಿರಿ. ಈಗ ನಿಮ್ಮ ಕೈಯಲ್ಲಿ ಆ ಹಣ ಇದೆಯಾ? ಒಬ್ಬ ಯೋಗ್ಯ ಮನುಷ್ಯನಿಗೆ ಸೋಲಾಯಿತಲ್ಲ. ಯಾರಿಗಾದರೂ ಬೇಸರವಿದೆಯಾ? ಸಮಾಜ ಇದನ್ನು ಪ್ರಶ್ನಿಸಬೇಕು’ ಎಂದರು.
ಒಳ್ಳೆಯವರಿಗೆ ಕಾಲ ಇಲ್ಲ ಅಂತಾರೆ. ಕಳ್ಳರು, ಸುಳ್ಳರು, ಮೋಸಗಾರರು ತೋರಿಸಿದರೆ ಮೋದಿಯನ್ನು ಸೋಲಿಸುತ್ತೀರಾ? ಮೋದಿಯಂತಹ ಚಿನ್ನ, ಒಂಬತ್ತು ವರ್ಷಗಳಲ್ಲಿ ಒಂದಾದರೂ ಭ್ರಷ್ಟಾಚಾರ ಆರೋಪ ಅವರ ಮೇಲೆ ಬಂದಿದೆಯಾ? ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಆಡಳಿತದಲ್ಲಿದ್ದಾಗ 200 ಭ್ರಷ್ಟಾಚಾರ ಆರೋಪಗಳಿದ್ದವು ಎಂದು ದೂರಿದರು.
ಕರ್ನಾಟಕದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಕೂಲಿಯಾಗಿಸಿದ್ದಾರೆ. ಬೇರೆ ರಾಜ್ಯದಲ್ಲಿ ದುಡ್ಡು ತಿಂದು, ಜೈಲಿಗೆ ಹೋದವರ ಕಾರಿನ ಬಾಗಿಲು ತೆರೆಯುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.