This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಶ್ರಮಜೀವಿ ಶರಣ ಸಿದ್ದರಾಮೇಶ್ವರ:ಚರಂತಿಮಠ

ಶ್ರಮಜೀವಿ ಶರಣ ಸಿದ್ದರಾಮೇಶ್ವರ : ಚರಂತಿಮಠ

ನಿಮ್ಮ ಸುದ್ದಿ ಬಾಗಲಕೋಟೆ

ತಮ್ಮ ಗುರು ರೇವಣಸಿದ್ದೇಶ್ವರರು ಕೈಗೊಳ್ಳುತ್ತಿದ್ದ ಕಾರ್ಯಗಳನ್ನೇ ಮುಂದುವರಿಸಿ ವಚನ ರಚಿಸುತ್ತ ಶಿವಯೋಗಿ ಸಿದ್ದರಾಮೇಶ್ವರರು ಒಬ್ಬ ಶ್ರಮಜೀವಿಯಾಗಿದ್ದರು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು ಕಾಯಕ ಯೋಗಿಯಾಗಿದ್ದ ಶರಣರು ಮೇಲು, ಕೀಳು, ಜಾತಿಬೇಧ ರಹಿತವಾಗಿ ಸುಂದರ ಸಮಾಜ ನಿರ್ಮಿಸುವ ಕನಸು ಕಂಡವರು ಎಂದರು.

ಶರಣರು, ಮಹಾತ್ಮರು, ಕವಿಗಳು, ದಾಸರು ಯಾವ ಧರ್ಮಕ್ಕೂ ಸೀಮಿತರಲ್ಲ. ಇಂತಹ ಮಹಾತ್ಮರ ತತ್ವಾದರ್ಶಗಳನ್ನು, ತಂದೆ ತಾಯಿಯರನ್ನು ಕಡೆಗಣಿಸುತ್ತಿರುವ ಇಂದಿನ ಯುವ ಪೀಳಿಗೆಗೆ ಇಂಥವರ ಸ್ಮರಣೆ ಇರಲಿ ಎಂಬ ಉದ್ದೇಶದಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಾಗಲಕೋಟ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಮಾತನಾಡಿ, ಸಿರಿ ಸಂಪತ್ತು, ಅಧಿಕಾರ, ಅಂತಸ್ಥಿನಿಂದ ನೆಮ್ಮದಿ ಸಾಧ್ಯವಿಲ್ಲ. ಎಂಬುದನ್ನು 12ನೇ ಶತಮಾನದ ಶರಣರು ತಿಳಿದಿದ್ದರು. ಲೋಕಕಲ್ಯಾಣಕ್ಕಾಗಿ ವಚನ ರಚಿಸಿ ಉತ್ತಮ ಸಮಾಜದ ದಾರಿದೀಪವಾದರು ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಗಜೇಂದ್ರಗಡದ ಪ್ರೊ.ಎಚ್.ಎಸ್.ಕರಿದುರಗಣ್ಣವರ ಮಾತನಾಡಿ 12ನೇ ಶತಮಾನದ ಶರಣರಲ್ಲಿ ಮುಖ್ಯವಾಹಿನಿಯಲ್ಲಿದ್ದ ಸಿದ್ದರಾಮೇಶ್ವರರು ಸ್ವತ ಮಲ್ಲಿಕಾರ್ಜುನನನ್ನು ಕಂಡವರು. ಗುರುಗಳಾದ ರೇವಣಸಿದ್ದೇಶ್ವರ ಶ್ರೀಗಳ ಆಶಯದಂತೆ ಕೆರೆ ಕಟ್ಟುವ ಕಾರ್ಯ ಮಾಡುತ್ತಾ 66 ಸಾವಿರ ವಚನಗಳನ್ನು ರಚಿಸಿದವರು ಎಂದರು.

ಸಮಾಜದ ಮುಖಂಡ ಅಶೋಕ ಲಿಂಬಾವಳಿ ಮಾತನಾಡಿ ಸಿದ್ದರಾಮೇಶ್ವರರ ಅನುಯಾಯಿಗಳಾದ ನಾವು ಶ್ರಮಜೀವಿಗಳಾಗಿದ್ದು, ನಾಡಕಟ್ಟುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಶಿಕ್ಷಣದಿಂದ ವಂಚಿತರಾದ ನಾವು ಇನ್ನೂ ಸಮಾಜದ ಮುಖ್ಯವಾಹಿನಿಗೆ ಬರಲಾಗುತ್ತಿಲ್ಲ. ನಮ್ಮ ಜನ ವೆಸನಿಗಳಾಗದೆ ನಮ್ಮಂತೆ ನಮ್ಮ ಮಕ್ಕಳು ಕಷ್ಟ ಪಡಬಾರದೆಂಬ ಉದ್ದೇಶ ವಿದ್ದರೆ, ಕೂಡಲೆ ನಿಮ್ಮ ದುರಭ್ಯಾಸಗಳನ್ನು ಬಿಟ್ಟು ಸರಕಾರ ನಿಮಗಾಗಿ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಅದರ ಪ್ರಯೋಜನ ಪಡೆದು ರಾಜಕೀಯವಾಗಿ, ಶೈಕ್ಷಣಿಕವಾ, ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಮಾತನಾಡಿ ಯುವಜನರಿಗೆ ಶರಣರ ಜೀವಣ ದಾರಿದೀಪವಾಗಲಿ ಎಂಬ ಉದ್ದೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಇಂಥಹ ಮಾಹಾತ್ಮರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಶಂಕರಲಿಂಗ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

*ಅದ್ದೂರಿ ಮೆರವಣಿಗೆ*
————–
ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭಗೊಂಡು ನಗರದ ನಾನಾ ಕಡೆಗಳಲ್ಲಿ ಸಂಚರಿಸಿ ಕೊನೆಗೆ ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಮಹಿಳೆಯರು ಆರತಿ ಮತ್ತು ಪೂರ್ಣಕುಂಬ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಆಕರ್ಷನೀಯವಾಗಿತ್ತು.

Nimma Suddi
";