ಬೆಂಗಳೂರು: ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದೆ. ಪ್ರಚಾರ ಆರಂಭವಾಗಿದೆ. ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ನಾನಾ ತಯಾರಿ ಆರಂಭಿಸಿದ್ದಾರೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವಂತೆ ಮಾಡಲು ಬಿಜೆಪಿ ತಲಾ 50 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತದೆ.
ಇಂದಿಗೂ ಅವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಿಗೆ ರಾಜೀನಾಮೆ ನೀಡುವಂತೆ 50 ಕೋಟಿ ರೂ. ಆಮಿಷವೊಡ್ಡತ್ತಿದ್ದಾರೆ. ನಿಮ್ಮ ಚುನಾವಣಾ ವೆಚ್ಚಕ್ಕೂ ಹಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಯಾವ ಹಣದ ಭರವಸೆ ನೀಡುತ್ತಿದ್ದಾರೆ? ಅದು ಕಪ್ಪು ಹಣ ಅಲ್ಲವೇ? ಅದು ಭ್ರಷ್ಟಾಚಾರದ ಹಣವಲ್ಲವೇ? ಎಂದು ಸಿಎಂ ಕೆಂಡಕಾರಿದರು
ಕ್ರಮದ ಮೂಲಕ ಸಂಪತ್ತು ಗಳಿಸಿದ ಶ್ರೀಮಂತರು ವಿರೋಧ ಪಕ್ಷಗಳಲ್ಲಿ ಮಾತ್ರ ಇದ್ದಾರೆಯೇ? ಬಿಜೆಪಿಯಲ್ಲಿ ಯಾರೂ ಇಲ್ಲವೇ? ಬಿಜೆಪಿ ಅವರೇ ಭ್ರಷ್ಟಾಚಾರದ ಮೂಲ ಪಿತಾಮಹರು ಎಂದು ಸಿದ್ದರಾಮಯ್ಯ ಕಿಡಿಕಾರಿದರು.
.
ರಾಜ್ಯ ಕಾಂಗ್ರೆಸ್‌ನ 118.8 ಕೋಟಿ ರೂಪಾಯಿ ಪಕ್ಷದ ಬ್ಯಾಂಕ್ ಖಾತೆಗಳಲ್ಲಿ ಐಟಿ ಇಲಾಖೆಯಿಂದ ಸ್ಥಗಿತಗೊಂಡಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೋದಿ ಆಡಳಿತವನ್ನು ಟೀಕಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ನಾವು 78 ಲಕ್ಷ ಜನರನ್ನು ಪಕ್ಷಕ್ಕೆ ಸೇರಿಸಿದ್ದೇವೆ ಮತ್ತು ಅವರು ತಲಾ 10 ರೂ. ಯುವ ಕಾಂಗ್ರೆಸ್ ಸದಸ್ಯತ್ವದಿಂದ ಸುಮಾರು 90 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದೇವೆ. ಎಂಎಲ್ಎ ಟಿಕೆಟ್ ಆಕಾಂಕ್ಷಿಗಳಿಂದ ತಲಾ 2 ಲಕ್ಷ ರೂಪಾಯಿ ಅಂದರೆ ಸುಮಾರು 21 ಕೋಟಿ ರೂಪಾಯಿ ಸಂಗ್ರಹಿಸಿದ್ದೇವೆ. ಆ ಎಲ್ಲ ಹಣವನ್ನು ಬಿಜೆಪಿ ಸೀಜೆ ಮಾಡಿದೆ ಎಂದರು.