This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

National NewsState News

ಇನ್ಮುಂದೆ ಹೈಕೋರ್ಟ್​ನ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ: ಸಿಕ್ಕಿಂ ಹೈಕೋರ್ಟ್​

ಇನ್ಮುಂದೆ ಹೈಕೋರ್ಟ್​ನ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ: ಸಿಕ್ಕಿಂ ಹೈಕೋರ್ಟ್​

ಹೈಕೋರ್ಟ್​ನಲ್ಲಿ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ಸಿಗಲಿದ್ದು, ಸಿಕ್ಕಿಂ ಹೈಕೋರ್ಟ್​ ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ರಜೆಯನ್ನು ಹೈಕೋರ್ಟ್​ನ ವೈದ್ಯಾಧಿಕಾರಿಗಳ ಶಿಫಾರಸಿನ ಮೇರೆಗೆ ನೀಡಲಾಗುತ್ತದೆ. ಇದನ್ನು ಒಟ್ಟಾರೆ ರಜೆ ಜತೆಗೆ ಪರಿಗಣಿಸಲಾಗುವುದಿಲ್ಲ.

ಸಿಕ್ಕಿಂ ಹೈಕೋರ್ಟ್​ ದೇಶದ ಅತ್ಯಂತ ಚಿಕ್ಕ ಹೈಕೋರ್ಟ್​ ಆಗಿದ್ದು ದೊಡ್ಡ ನಿರ್ಧಾರವನ್ನೇ ಕೈಕೊಂಡಿದೆ. ಇದರಲ್ಲಿ ಮೂವರು ನ್ಯಾಯಮೂರ್ತಿಗಳು ಇದ್ದಾರೆ, ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ಕೇವಲ 9 ಮಂದಿ ಇದ್ದಾರೆ.

ಸಿಕ್ಕಿಂ ಹೈಕೋರ್ಟ್ ಮುಟ್ಟಿನ ರಜೆ ನೀತಿಯನ್ನು ಪರಿಚಯಿಸಿದ ಮೊದಲ ಹೈಕೋರ್ಟ್ ಆಗಿದೆ. ಪ್ರಸ್ತುತ, ಮುಟ್ಟಿನ ರಜೆಗೆ ಯಾವುದೇ ರಾಷ್ಟ್ರೀಯ ನೀತಿ ಅಥವಾ ಕಾನೂನು ಇಲ್ಲ.

ಹೈಕೋರ್ಟ್​ನ ಮಹಿಳಾ ಉದ್ಯೋಗಿಗಳು ತಿಂಗಳಲ್ಲಿ 2-3 ದಿನ ಮುಟ್ಟಿನ ರಜೆ ಪಡೆಯಬಹುದು ಎಂದು ಹೇಳಲಾಗಿದ್ದು, ಇದರಿಂದ ಮಹಿಳಾ ಸಿಬ್ಬಂದಿ ಸಂತಸಪಟ್ಟಿದ್ದಾರೆ.

 

Nimma Suddi
";