ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಯ ಅಮೀನಗಡದಲ್ಲಿ ಬಿದ್ದಿದ್ದ ಕಬ್ಬಿನದ ರಾಸಾಯನಿಕವನ್ನು ಪಟ್ಟಣದ ಸೋಷಿಯಲ್ ಹೆಲ್ಪ್ ಡೆಸ್ಕ್ ಸಂಘಟನೆ ಸಹಾಯದಿಂದ ತೆರವುಗೊಳಿಸಲಾಯಿತು.
ಮಂಗಳವಾರ ರಾತ್ರಿ ೧೦ರ ಸುಮಾರಿಗೆ ಇಟ್ಟಿಗೆ ಗಟ್ಟಿಗೊಳಿಸಲು ಅವಶ್ಯಕವಾದ ಕಬ್ಬಿನದ ರಾಸಾಯನಿಕ ತುಂಬಿಕೊAಡು ಸಾಗುತ್ತಿದ್ದ ವಾಹನವೊಂದು ಪಟ್ಟಣದ ಹೊರವಲಯದ ಹಾದಿ ಬಸವೇಶ್ವರ ದೇವಸ್ಥಾನದ ಸಮೀಪದ ಅಂದಾಜು ೩೦೦ ಮೀಟರ್‌ನಷ್ಟು ದೂರ ಸೋರಿಕೊಂಡು ಹೋಗಿದೆ.
ಹೀಗಾಗಿ ರಸ್ತೆಯಲ್ಲೆಲ್ಲ ರಾಸಾಯನಿಕ ಚೆಲ್ಲಿದ ಪರಿಣಾದ ಹಲವಾರು ಬೈಕ್‌ಗಳು ಸ್ಕಿಡ್ ಆಗಿ ಬಿದ್ದಿವೆ. ಇದನ್ನು ಕಂಡ ಸಂಘಟನೆ ಸದಸ್ಯರು ಕೂಡಲೆ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಸ್ಥಳೀಯ ಠಾಣೆ ಎಸೈಗೂ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿ ತುರ್ತಾಗಿ ಮುತುವರ್ಜಿ ವಹಿಸಿ ಸಮೀಪದ ಇಟ್ಟಂಗಿ ಭಟ್ಟಿ ತಯಾರಿಕೆ ಕಾರ್ಮಿಕರು ಹಾಗೂ ಪಟ್ಟಣ ಪಂಚಾಯಿತಿ ಕಾರ್ಮಿಕರ ಸಹಾಯದಿಂದ ಒಂದು ಗಂಟೆಯ ಕಾರ್ಯಾಚರಣೆ ಮೂಲಕ ಅವ್ಯವಸ್ಥೆಯಾಗಿದ್ದ ರಸ್ತೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಸೋಷಿಯಲ್ ಹೆಲ್ಪ್ ಡೆಸ್ಕ್ ಸಂಘಟನೆ ಸದಸ್ಯರೂ ಸಹ ಸಾಥ್ ನೀಡಿದ್ದಾರೆ.
ಪಪಂ ಸದಸ್ಯ ವಿಜಯಕುಮಾಋ ಕನ್ನೂರ, ಬಾಬು ಛಬ್ಬಿ, ಯಮನೂರ ಕತ್ತಿ, ಶಿವು ಕನ್ನೂರ, ನಿಂಗಪ್ಪ ಅರಬಿ, ಯಮನಪ್ಪ ನಾಗರಾಳ, ಮುತ್ತಪ್ಪ ವಡ್ಡರ, ಸಂಗಣ್ಣ ಕುಂಬಾರ, ಸಂದೀಪ, ನಾಗಪ್ಪ ತುಂಬಗಿ, ಬಸವರಾಜ ಬೇವಿನಮಟ್ಟಿ ಇತರರು ಇದ್ದರು. ಸಂಘಟನೆ ಕರೆಗೆ ಓಗೊಟ್ಟು
ರಾತ್ರಿ ಆಗಮಿಸಿ ಸಂಚಾರ ಸುಗಮಗೊಳಿಸಿದ ಎಸೈ ಎಂ.ಕುಲಕರ್ಣಿ ಅವರನ್ನು ಸಂಘಟನೆ ಸದಸ್ಯರು ಸನ್ಮಾನಿಸಿದರು.