This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsLocal NewsState News

ಕರ್ತವ್ಯದಲ್ಲಿ ಶ್ರಮವಿರಲಿ:ಎಸ್‌ಪಿ ಅಮರನಾಥ ರೆಡ್ಡಿ

ಕರ್ತವ್ಯದಲ್ಲಿ ಶ್ರಮವಿರಲಿ:ಎಸ್‌ಪಿ ಅಮರನಾಥ ರೆಡ್ಡಿ

ಬಾಗಲಕೋಟೆ

ನಾಗರಿಕ ಸಮಾಜದಲ್ಲಿ ಅತ್ಯಂತ ಕಠಿಣ ಕೆಲಸವೆಂದರೆ ಅದು ಪೋಲಿಸ ವೃತ್ತಿ. ಅಂತಹ ಕಠಣ ಕೆಲಸವನ್ನು ಸರಳವಾಗಿ ಡಿವೈಎಸ್‌ಪಿ ಪಂಪನಗೌಡರು ನಿಭಾಯಿಸಿದ್ದಾರೆಂದು ಎಸ್‌ಪಿ ಅಮರನಾಥ ರೆಡ್ಡಿ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಸಂಜೆ ಸೇವಾ ನಿವೃತ್ತಿ ಹೊಂದಿದ ಡಿವೈಎಸ್‌ಪಿ ಪಂಪನಗೌಡರಿಗೆ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ತವ್ಯದಲ್ಲಿ ಶ್ರಮವಿದ್ದರೆ ಜೀವನ ಸುಂದರವಾಗಿರುತ್ತದೆ. ಪಂಪನಗೌಡರು ಜನಮನದಲ್ಲಿ ಜನಸ್ನೇಹಿಯಾಗಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದು ಇಲಾಖೆಯಲ್ಲಿ ಯಾವುದೇ ರೀತಿಯಲ್ಲಿ ನಿ?Á್ಕಳಜಿ ಮಾಡದೆ ಕಟ್ಟುನಿಟ್ಟಾಗಿ ಕೆಲಸ ಮಾಡಿ ಇಲಾಖೆಗೆ ಗೌರವ ತಂದಿದ್ದಾರೆ ಎಂದು ಹೇಳಿದರು.

ಜಿಪಂ ಸಿಇಒ ಶಶಿಧರ ಕುರೇರ, ಸೇವಾ ಅವ ಪಯಣ ದಾಟಿ ನಿವೃತ್ತಿಯಾಗಿದ್ದು ಮುಂದಿನ ಜೀವನ ಸುಖಕರವಾಗಿರಲಿ. ಸುದೀರ್ಘ ಸೇವೆ ಸಲ್ಲಿಸಿ ಮುಕ್ತ ಮನಸ್ಸಿನಿಂದ ನಿವೃತ್ತಿ ಯಾಗುತ್ತಿದ್ದಾರೆ. ಶಾಂತ ಸ್ವಭಾವದ ವ್ಯಕ್ತಿತ್ವ ಹೊಂದಿದ ಪಂಪನಗೌಡ್ರು ಬಾಗಲಕೋಟೆ ಉಪ ವಿಭಾಗದ ಎಲ್ಲ ವಿಷಯಗಳಲ್ಲಿ ಉತ್ತಮ ಕೆಲಸ ಮಾಡುತ್ತ ಎಲ್ಲ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.

ಸನ್ಮಾನ ಸ್ವಿಕರಿಸಿದ ಡಿವೈಎಸ್‌ಪಿ ಪಂಪನಗೌಡ, ಪೊಲೀಸ್ ಇಲಾಖೆ ಕುಟುಂಬದ ಸದಸ್ಯನಂತಿದ್ದ ನಾನು ಇಂದು ನಾಗರಿಕ ಸಮಾಜದತ್ತ ಹೊರಟಿದ್ದೆನೆ. ದೇವಾಲಯಗಳು ಸಂಜೆ ಬಾಗಿಲು ಹಾಕುತ್ತವೆ ಆದರೆ ಪೊಲೀಸ್ ಇಲಾಖೆ ಬಾಗಿಲು ಹಾಕುವದಿಲ್ಲ. ಎಂದ ಅವರು ಬಾಗಲಕೋಟೆಯಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.

ಎಎಸ್ಪಿ ಮಹಾಂತೇಶ ಜಿದ್ದಿ, ಜಮಖಂಡಿ ವಿಭಾಗದ ಡಿವೈಎಸ್‌ಪಿ ಶಾಂತವೀರ, ಡಿಎಆರ್ ಡಿವೈಎಸ್‌ಪಿ ಪ್ರಭು ಪಾಟೀಲ, ಸಿಪಿಐಗಳಾದ ಆರ್.ಎಸ್.ಬಿರಾದಾರ, ಗುರುನಾಥ ಚೌಹಾಣ, ಕೆ.ಟಿ.ಶೋಭಾ, ಎಚ್.ಆರ್.ಪಾಟೀಲ, ಪಿಎಸ್‌ಐಗಳಾದ ಸಂಗಳದ, ಜ್ಯೋತಿ ವಾಲಿಕಾರ, ನಿವೃತ್ತ ಅಕಾರಿಗಳಾದ ರವೀಂದ್ರ ಶಿರೂರು, ಪಿ.ವಿ.ಜಗಲಿ, ಮುಖಂಡರಾದ ನಾಗರಾಜ ಹದ್ಲಿ, ಕರವೆ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಬಸವರಾಜ ಅಂಬಿಗೇರ, ಎ.ಎ.ದಂಡಿಯಾ ಇತರರಿದ್ದರು.

 

";