ಬಾಗಲಕೋಟೆ
ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವವಿದೆ ಎಂದು ಕ್ಷೇತ್ರ ಶಿಕ್ಷಣಾಕಾರಿ ಎಂ.ಎಸ್.ಬಡದಾನಿ ಹೇಳಿದರು.
ನಗರದ ವಿದ್ಯಾಗಿರಿಯ ಸೇಂಟ್ ಆನ್ಸ್ ಕಾನ್ವೆಂಟ್ ಪ್ರೌಢಶಾಲೆ ಹಾಗೂ ಪಪೂ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕ್ರೀಡಾ ದಿನೋತ್ಸವ ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು. ದೇಹವನ್ನು ದೈಹಿಕವಾಗಿ ಸದೃಢವಾಗಿಸಲು ಕ್ರೀಡೆಯು ಅತ್ಯುತ್ತಮ ಸಾಧನ. ಕ್ರೀಡೆಯು ಹೃದಯ ಕಾಯಿಲೆಗಳ ವಿರುದ್ದ ಹೋರಾಡುತ್ತದೆ. ಹಾಗೂ ಮಾತನಾಡುವ ಕೌಶಲ ವೃದ್ಧಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಿಸ್ಟರ್ ಸಹಾಯಾಮೇರಿ ಜೋಸೇಫ್, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಗಳೊಂದಿಗೆ ಅಧ್ಯಯನ ಮಾಡಬೇಕು. ಆತ್ಮವಿಶ್ವಾಸದಿಂದ ಮುನ್ನುಗ್ಗಿ ಗುರುಹಿರಿಯರ ಮಾರ್ಗದರ್ಶನ ಪಡೆಯಿರಿ. ಏಕಾಗ್ರತೆ ಸಾಸಿದಲ್ಲಿ ಯಶಸ್ಸು ನಿಮ್ಮದೇ ಎಂದರು.
2023-24ನೇ ಸಾಲಿನ 10ನೇ ತರಗತಿಯಲ್ಲಿ ಅತ್ಯಕ ಅಂಕಗಳನ್ನು ಪಡೆದ ಪ್ರಗತಿ ಅರಹುಣಸಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣ, ಹೊಯ್ಸಳ ವಂಶದ ವೈಭವ ಬಿಂಬಿಸುವ ನಾಟಕಗಳನ್ನಾಡಿದರು.
ದೇಶದ ಏಕತೆ ಹಾಗೂ ಕ್ರೀಡೆಯ ಮಹತ್ವ ಬಿಂಬಿಸುವ ಸಾಮೂಹಿಕ ನೃತ್ಯಗಳು ನಡೆದವು. ತಾಲೂಕು ದೈಹಿಕ ಶಿಕ್ಷಣಾಕಾರಿ ಆರ್.ಆರ್.ಪಾಟೀಲ, ಪುಂಡಲಿಕ ಪಾಟೀಲ, ಪಾದರ್ ಪ್ರಕಾಶ ಮೋರಾಸ್, ಮುಖ್ಯಶಿಕ್ಷಕಿ ಸಿಸ್ಟರ್ ಅನ್ಸೆಲ್, ಸಿಸ್ಟರ್ ಪ್ರಮೇಳಾ, ಪ್ರಾಚಾರ್ಯೆ ಸಿಸ್ಟರ್ ಮೇರಿ ಜಾಕೋಬ, ಸಿಸ್ಟರ್ ಸುಗಂಧಾ, ದೈಹಿಕ ಶಿಕ್ಷಕ ಶಿವಪುತ್ರಯ್ಯ ಹಳ್ಳೂರ, ದೈಹಿಕ ಶಿಕ್ಷಕಿ ಜ್ಯೋತಿ ಲಮಾಣಿ, ಸಿಬ್ಬಂದಿ ಕಾರ್ಯದರ್ಶಿ ಸಿದ್ಧಯ್ಯ ಹೀರೆಮಠ ಇತರರಿದ್ದರು.