This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಸ್ಪರ್ಧಾಳುಗಳಲ್ಲಿ ಕ್ರೀಡಾ ಮನೋಭಾವನೆ ಮುಖ್ಯ : ಹತ್ತಳ್ಳಿ

ಸ್ಪರ್ಧಾಳುಗಳಲ್ಲಿ ಕ್ರೀಡಾ ಮನೋಭಾವನೆ ಮುಖ್ಯ : ಹತ್ತಳ್ಳಿ

*ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ವಿದ್ಯುಕ್ತ ಚ

ಬಾಗಲಕೋಟೆ:

ಕ್ರೀಡೆಗಳು ನಮ್ಮ ಜೀವನದಲ್ಲಿ ಮಹತ್ವದವಾದ ಪಾತ್ರ ವಹಿಸುತ್ತಿದ್ದು, ಸ್ಪರ್ಧಾಳುಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದು ಮುಧೋಳ ತಹಶೀಲ್ದಾರ ವಿನೋದ ಹತ್ತಳ್ಳಿ ಹೇಳಿದರು.

ಮುಧೋಳ ನಗರದ ದಾನಮ್ಮದೇವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ತಾಲೂಕಾ ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ, ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿ ಮಾತನಾಡಿದ ಅವರು ಕುಸ್ತಿಗೆ ವಿಶೇಷ ಸ್ಥಾನಮಾನವಿದ್ದು, ಶತಮಾನಗಳ ಇತಿಹಾಸವಿದೆ. 22 ವರ್ಷಗಳ ನಂತರ ಮುಧೋಳ ನಗರದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜನೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಎಲ್ಲ ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಪಾಲ್ಗೊಂಡು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಕರೆ ನೀಡಿದರು. ರಾಜ್ಯದಟ್ಟದಲ್ಲಿ ವಿಜೇತರಾಗಿ ನಂತರ ರಾಷ್ಟ್ರ ಮಟ್ಟದಲ್ಲಿಯೂ ಕೂಡಾ ತಮ್ಮ ಛಾಪವನ್ನು ಮೂಡಿಸಬೇಕು. ಕಾರ್ಯಕ್ರಮ ಯಶಸ್ವಿಗೆ ಈ ಭಾಗದ ಗಣ್ಯ ವ್ಯಕ್ತಿಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ಕ್ರೀಡಾ ಅಭಿಮಾನಿಗಳು ಸಹಾಯಹಸ್ತ ನೀಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಅವರು ಎರಡು ದಿನಗಳ ಕಾಲ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ಸುಮಾರು 26 ಜಿಲ್ಲೆಗಳಿಂದ 1010 ಕ್ರೀಡಾ ಪಟುಗಳು ಹಾಗೂ ಪ್ರತಿ ಜಿಲ್ಲೆಯಿಂದ ತಂಡದ ವ್ಯವಸ್ಥಾಪಕರು ಭಾಗವಹಿಸಿದ್ದಾರೆ. ಸದರಿ ಪಂದ್ಯಾವಳಿಯಲ್ಲಿ ಸುಮಾರು 50 ಜನ ನಿರ್ಣಾಯಕರಾಗಿ ಆಗಮಿಸಿದ್ದಾರೆ. ಕ್ರೀಡಾವಟುಗಳಿಗೆ ಹಾಗೂ ತಂಡದ ವ್ಯವಸ್ಥಾಪಕರಿಗೆ ತಾಲೂಕಿನ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಆರ್.ಛಬ್ಬಿ, ದೈಹಿಕ ಪರಿವೀಕ್ಷಣಾಕಾರಿ ಎಸ್.ಎಂ.ಕುರೂಗಿ, ಮುಖಂಡರಾದ ಶಿವಕುಮಾರ ಮಲಘಾಣ, ಸಂಗಪ್ಪ ಇಮ್ಮನ್ನವರ, ಉದಯ, ಎಂ.ಡಿ.ದಾಸರ, ಎಂ.ಕೆ.ದಾಸರಡ್ಡಿ, ಅನೀಲ, ಬಸವಂತಪ್ಪ ರಾಟಿ, ಮುದಕಪ್ಪ ಅಂಬಿಗೇರ, ಕಲ್ಮೇಶ ಹನಗೊಂಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು

*ಮೆಕ್ಕೆಜೋಳ ಬೆಳೆಗಳಲ್ಲಿ ಸಮಗ್ರ ಪೋಷಕಾಂಶಗಳ ಬಳಕೆ*
ಬಾಗಲಕೋಟೆ: ಸೆಪ್ಟೆಂಬರ 11 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಯನ್ನು ಒಂದು ಪ್ರಮುಖ ಬೆಳೆಯನ್ನಾಗಿ ಬೆಳೆಯಲಾಗುತ್ತಿದ್ದು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 46306 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಮೆಕ್ಕೆಜೋಳ ಬೆಳೆಗೆ ಪ್ರತಿ ಎಕರೆಗೆ ಸಾರಜನಕ 60 ಕೆಜಿ, ರಂಜಕ 30 ಕೆಜಿ, ಪೋಟ್ಯಾಷ್ 15 ಕೆಜಿ, ಸತುವಿನ ಸಲ್ಫೇಟ್ 10 ಕೆಜಿ ಹಾಗೂ ಕಬ್ಬಿಣದ ಸಲ್ಫೇಟ್ 10 ಕೆಜಿ ಶಿಫಾರಸ್ಸು ಇದ್ದು, ಬಿತ್ತುವ ಸಮಯದಲ್ಲಿ ಸಾರಜನಕ 6 ಕೆಜಿ ಹಾಗೂ ಪೂರ್ಣ ಪ್ರಮಾಣದ ರಂಜಕ ಮತ್ತು ಪೋಟ್ಯಾಷ್ ಗೊಬ್ಬರವನ್ನು ಹಾಕಬೇಕು, ಉಳಿದ 54 ಕೆಜಿ ಸಾರಜನಕ ಮೇಲುಗೊಬ್ಬರವಾಗಿ ಬಿತ್ತನೆ ಮಾಡಿದ 20, 35, 50 ಮತ್ತು 65 ದಿನಗಳ ನಂತರ (4 ಎಲೆ, 8 ಎಲೆ, ತುರಾಯಿ ಬರುವ ಮತ್ತು ಕಾಳು ಕಟ್ಟುವ ಸಮಯದಲ್ಲಿ) ಎಕರೆಗೆ ಕ್ರಮವಾಗಿ 12, 18, 18 ಮತ್ತು 6 ಕೆಜಿ ಸಾರಜನಕ ಒದಗಿಸಬೇಕಾಗುತ್ತದೆ.

ಮೆಕ್ಕೆಜೋಳ ಬೆಳೆಯಲ್ಲಿ ಸಾರಜನಕ ಬೆಳೆವಣಿಗೆಗೆ, ರಂಜಕ ಬೇರು ಮತ್ತು ಕಾಂಡ ಸದೃಡವಾಗಿ ಬೆಳೆಯಲು, ಹಾಗೂ ಪೋಟ್ಯಾಷ್ ಕೀಟ, ರೋಗ, ಬರಗಾಲ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಯಾಗುತ್ತದೆ. ಸದ್ಯ ಮೆಕ್ಕೆಜೋಳ ಬೆಳೆಯು 45 ದಿವಸಗಳ ಬೆಳೆಯಿದ್ದು, ಬೆಳವಣಿಗೆ ಹಂತದಿಂದ ತುರಾಯಿ ಬಿಡುವ ಹಂತದಲ್ಲಿರುತ್ತವೆ, ಶಿಫಾರಸ್ಸುಕಿಂತ ಹೆಚ್ಚಿನ ಸಾರಜನಕ ಬಳಕೆ ಮಾಡಬಾರದು, ಯತೇಚ್ಛವಾಗಿ ಸಾರಜನಕ ಬಳಕೆಯಿಂದ ಬೇಸಾಯ ಖರ್ಚು ಹೆಚ್ಚು ಮಾಡುವುದರೊಂದಿಗೆ ಭೂಮಿಯ ಗುಣಮಟ್ಟವು ಹಾಳಾಗುತ್ತದೆ, ಅಲ್ಲದೆ ಕೀಟ, ರೋಗದ ಬಾಧೆಯು ಹೆಚ್ಚಾಗುವ ಸಂಭವ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

";