This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ರಾಜ್ಯ ಬಯಲಾಟ ಅಕಾಡೆಮಿಯ ಗೌರವ, ವಾರ್ಷಿಕ ಪ್ರಶಸ್ತಿ ಪ್ರಕಟ

ನಿಮ್ಮ ಸುದ್ದಿ ಬಾಗಲಕೋಟೆ

ಕರ್ನಾಟಕ ಬಯಲಾಟ ಅಕಾಡೆಮಿಯ 2021 ಮತ್ತು 2022ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಯ ಆಯ್ಕೆ ಪಟ್ಟಿಯನ್ನು ಅಕಾಡೆಮಿಯ ಅಧ್ಯಕ್ಷ ಅಜಿತ ಬಸಾಪೂರ ಶುಕ್ರವಾರ ಬಿಡುಗಡೆ ಮಾಡಿದರು.

ನವನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ವರ್ಷ 5 ಗೌರವ ಪ್ರಶಸ್ತಿ ಹಾಗೂ 10 ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಎರಡು ವರ್ಷದ ಒಟ್ಟು 10 ಗೌರವ ಹಾಗೂ 20 ವಾರ್ಷಿಕ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಗೆ 50 ಸಾವಿರ ರೂ. ಹಾಗೂ ವಾರ್ಷಿಕ ಪ್ರಶಸ್ತಿಗೆ 25 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತಿದೆ. ಈ ಬಾರಿ ಕಲಾವಿದರನ್ನು ನೇರವಾಗಿ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

2021ನೇ ಸಾಲಿಗೆ ಗೌರವ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅನಸೂಯಾ ವಡ್ಡರ (ಶ್ರೀಕೃಷ್ಣ ಪಾರಿಜಾತ), ಬೆಳಗಾವಿಯ ಸಂಕೋನಟ್ಟಿ ಗ್ರಾಮದ ನರಸಪ್ಪಾ ಶಿರಗುಪ್ಪಿ (ಬಯಲಾಟ), ಕೊಪ್ಪಳ ಜಿಲ್ಲೆಯ ಮುಂಡರಗಿಯ ವೀರಪ್ಪ ಬಿಸರಳ್ಳಿ (ದೊಡ್ಡಾಟ), ಉಡುಪಿ ಜಿಲ್ಲೆಯ ಕುಂಜಿಬೆಟ್ಟು ಗ್ರಾಮದ ಎಸ್.ಎ.ಕೃಷ್ಣಯ್ಯ (ತೊಗಲು ಗೊಂಬೆಯಾಟ), ಹಾವೇರಿ ಜಿಲ್ಲೆಯ ಕಬನೂರ ಗ್ರಾಮದ ಗೋವಿಂದಪ್ಪ ತಳವಾರ (ದೊಡ್ಡಾಟ) ಆಯ್ಕೆಯಾಗಿದ್ದಾರೆ ಎಂದರು.

ವಾರ್ಷಿಕ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಸುಂದ್ರವ್ವ ಮೇತ್ರಿ (ಶ್ರೀಕೃಷ್ಣ ಪಾರಿಜಾತ), ಹಾವೇರಿ ಜಿಲ್ಲೆಯ ಕಲಕೇರಿಯ ಫಕಿರಪ್ಪ ಗೌರಕ್ಕನವರ (ಬಯಲಾಟ), ವಿಜಯಪುರದ ರಬಿನಾಳ ಗ್ರಾಮದ ಚಂದ್ರಶೇಖರ ಮೇಲಿನಮನಿ (ಶ್ರೀಕೃಷ್ಣ ಪಾರಿಜಾತ), ಕಲಬುರ್ಗಿಯ ಕೊಲ್ಲೂರಿನ ದುಂಡಪ್ಪ ಗುಡ್ಲಾ (ಬಯಲಾಟ), ಧಾರವಾಡದ ಹಿರೇಹರಕೂಣಿಯ ಚಂದ್ರಶೇಖರಯ್ಯ ಗುರಯ್ಯನವರ (ದೊಡ್ಡಾಟ), ಬೆಳಗಾವಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಸುಶೀಲಾ ಮಾದರ (ಸಣ್ಣಾಟ), ರಾಯಚೂರು ಜಿಲ್ಲೆಯ ಸಿಂಧನೂರಿನ ವೆಂಕೋಬ ಗೋನಾವರ (ದೊಡ್ಡಾಟ), ದಾವಣಗೇರೆ ಜಗಳೂರು ತಾಲೂಕಿನ ದೊಣ್ಣೆಹಳ್ಳಿಯ ಎಸ್.ಚಂದ್ರಪ್ಪ (ದೊಡ್ಡಾಟ), ಬೆಂಗಳೂರಿನ ಬನಶಂಕರಿಯ ಎಂ.ಆರ್.ವಿಜಯ (ಸೂತ್ರದ ಗೊಂಬೆಯಾಟ), ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿಯ ದಾನಪ್ಪ ಹಡಪದ (ದೊಡ್ಡಾಟ) ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

2022ನೇ ಸಾಲಿಗೆ ಗೌರವ ಪ್ರಶಸ್ತಿಗೆ ಬಳ್ಳಾರಿಯ ಸಂಡೂರ ತಾಲೂಕಿನ ಲಕ್ಷ್ಮಿಪುರದ ಕೆ.ಮೌನಾಚಾರಿ (ಬಯಲಾಟ), ಧಾರವಾಡದ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಸುರೇಂದ್ರ ಹುಲ್ಲಂಬಿ (ಸಣ್ಣಾಟ), ತುಮಕೂರಿನ ತೊಣಚಗೊಂಡನಹಳ್ಳಿಯ ಮಲ್ಲೇಶಯ್ಯ ಶತಕಂಠ (ದೊಡ್ಡಾಟ), ಮಂಡ್ಯ ಜಿಲ್ಲೆಯ ನಾಗಮಂಡಲದ ಚಂದ್ರಮ್ಮ (ತೊಗಲು ಗೊಂಬೆಯಾಟ) ಹಾಗೂ ಗದಗ ಜಿಲ್ಲೆ ಬೆಟಗೇರಿಯ ಅಶೋಕ ಸುತಾರ (ದೊಡ್ಡಾಟ) ಆಯ್ಕೆಯಾಗಿದ್ದಾರೆ ಎಂದರು.

ವಾರ್ಷಿಕ ಪ್ರಶಸ್ತಿಗೆ ಬಾಗಲಕೋಟೆ ರಬಕವಿ-ಬನಹಟ್ಟಿಯ ಮಲ್ಲಪ್ಪ ಗಣಿ (ಸಣ್ಣಾಟ), ಹಾವೇರಿ ಶಿಗ್ಗಾಂವ ತಾಲೂಕಿನ ಹುಲಸೋಗಿಯ ಫಕೀರಪ್ಪ ಬಿಸೆಟ್ಟಿ (ದೊಡ್ಡಾಟ), ವಿಜಯನಗರ ಕೂಡ್ಲಿಗಿ ತಾಲೂಕಿನ ವಿರುಪಾಪುರದ ನಾಗರತ್ಮಮ್ಮ (ಬಯಲಾಟ), ಬೆಳಗಾವಿಯ ಮಂಟೂರಿನ ಕೆಂಪಣ್ಣಾ ಚೌಗಲಾ (ಶ್ರೀಕೃಷ್ಣ ಪಾರಿಜಾತ), ಯಾದಗಿರಿ ಸುರಪುರ ತಾಲೂಕಿನ ಕರಡಕಲ್ಲು ಗ್ರಾಮದ ರಾಮಚಂದ್ರಪ್ಪ ಕಟ್ಟಿಮನಿ (ದೊಡ್ಡಾಟ), ಬಳ್ಳಾರಿಯ ಅಂಬುಜಮ್ಮ ಸುಂಕಣ್ಣವ(ಬಯಲಾಟ), ಚಿತ್ರದುರ್ಗ ಚೆಳ್ಳಕೆರೆ ತಾಲೂಕಿನ ಕಾಲುವೆಹಳ್ಳಿಯ ಕೆ.ಪಿ.ಭೂತಯ್ಯ (ದೊಡ್ಡಾಟ), ದಾವಣಗೇರೆ ಚನ್ನಗಿರಿ ತಾಲೂಕಿನ ಕಣಿವೆಯ ಜಿ.ರಾಮಪ್ರಭು (ಬಯಲಾಟ), ಶಿವಮೊಗ್ಗ ಜಿಲ್ಲೆಯ ಬಿ.ರತ್ಮಮ್ಮ ಸೋಗಿ (ದೊಡ್ಡಾಟ), ಧಾರವಾಡದ ಕಂಪ್ಲಿಕೊಪ್ಪ ಗ್ರಾಮದ ಪಕ್ಕೀರಪ್ಪ ನೆರ್ತಿ (ದೊಡ್ಡಾಟ) ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯ ವತಿಯಿಂದ ಬಯಲಾಟ ಸಂಭ್ರಮ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಮೂಲಕ ವಿವಿಧ ಕಲೆಗಳನ್ನು ಪ್ರದರ್ಶಿಸುವ ಮೂಲಕ ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೇ ಸಾಕ್ಷಚಿತ್ರಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಕರಾವಳಿ ಭಾಗದಲ್ಲಿ ಯಕ್ಷಗಾನ ಬೆಳೆದಷ್ಟು ಬಯಲಾಟಗಳು ಬೆಳೆದಿಲ್ಲ. ಪ್ರತಿಯೊಂದು ಮನೆಯನ್ನು ಒಬ್ಬ ಕಲಾವಿದರನ್ನು ಹುಟ್ಟು ಹಾಕಿದರೆ ಮಾತ್ರ ಇಂತಹ ಕಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಉಪಸ್ಥಿತರಿದ್ದರು.

Nimma Suddi
";