This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ರಾಜ್ಯ ಸರಕಾರಿ ನೌಕರರ ದಿನಾಚರಣೆ

ನಿಮ್ಮ ಸುದ್ದಿ ಬಾಗಲಕೋಟೆ

ಮಾನವೀಯತೆ ನೆಲೆಗಟ್ಟಿನಲ್ಲಿ ಸೇವೆ ಸಲ್ಲಿಸಿ : ಪೂಜಾರ

ಸರಕಾರಿ ನೌಕರಿ ಸಿಗುವುದು ಅಪರೂಪವಾಗಿದ್ದು, ಅಂತಹ ಅವಕಾಶ ನಿಮಗೆ ದೊರೆತಿದೆ. ಆ ದೃಷ್ಠಿಯಲ್ಲಿ ನೌಕರಿಯನ್ನದೇ ಮಾನವೀಯತೆ ನೆಲೆಗಟ್ಟಿನಲ್ಲಿ ಸೇವೆ ಸಲ್ಲಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್‌ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ರಾಜ್ಯ ಸರಕಾರಿ ನೌಕರರ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ರಾಜ್ಯ ಸರಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರ ಮಿಷನ್ ಕರ್ಮಯೋಗಿ ಯೋಜನೆಯಡಿ ಸರಕಾರಿ ನೌಕರರಿಗೆ ಗೌರವ ನೀಡುವ ಕಾರ್ಯ ಮಾಡಲಾಗುತ್ತಿದೆ. ಅದೇ ರಾಜ್ಯ ಸರಕಾರವು ಕೂವಾ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವ ನೀಡಲಾಗುತ್ತಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ಪ್ರಶಸ್ತಿ ಕೊಡುವ ಕಾರ್ಯ ನಡೆದಿರಲಿಲ್ಲ. ಈ ಬಾರಿ ಕಳೇದ ಎರಡು ವರ್ಷ ಗಮನದಲ್ಲಿಟ್ಟುಕೊಂಡು ದಕ್ಷ ಹಾಗೂ ನಿಷ್ಟೇಯಿಂದ ಕಾರ್ಯನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಪ್ರತಿಯೊಬ್ಬ ಸರಕಾರಿ ನೌಕರ ನಮ್ಮ ಬಳಿ ಬರುವ ಸಾರ್ವಜನಿಕರ ಸಮಸ್ಯೆ ಅರಿತು ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊರತಂದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಿಸುವಂತಹ ಕಾರ್ಯವಾಗಬೇಕು ಎಂದರು. ಯಾವುದೇ ಅಧಿಕಾರಿ ಅಧಿಕಾರದ ದರ್ಪ ಹಾಗೂ ನನ್ನಿಂದಲೇ ಎಂ ಮನೋಭಾವ ತೊರೆದು ಸಾರ್ವಜನಿಕರ ಸೇವೆಗೆ ಅನಿಯಾಗಬೇಕು. ಇದರಿಂದ ವೃತ್ತಿಗೂ ಹಾಗೂ ಇಲಾಖೆಗೆ ಗೌರ ಸಿಗುತ್ತದೆ ಎಂದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯ ಸರಕಾರಿ ನೌಕರರು ಕಳೆದ ಎರಡು ವರ್ಷಗಳ ಕೋವಿಡ್ ಅವಧಿಯಲ್ಲಿಯೂ ಕೂಡಾ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳು ಪ್ರಾಣದ ಹಂಗು ತೊರೆದು ಸಮರ್ಥವಾಗಿ ಕೆಲಸ ನಿರ್ವಹಿಸಿದ ಹಿನ್ನಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಾಧ್ಯವಾಯಿತು. ಪ್ರಶಸ್ತಿ ಒಬ್ಬರಿಗೆ ದೊರೆತರೆ ಆ ಇಲಾಖೆ ಗೌರವ ತರುವ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ದಕ್ಷ, ಪ್ರಾಮಾಣಿಕ ಸೇವೆ ಸಲ್ಲಿಸಿದ ನೌಕರರಿಗೆ ಪ್ರಶಸ್ತಿ ಪಡೆಯುವಂತಾಗಲಿ ಎಂದರು.

ಜಿ.ಪಂ ಸಿಇಓ ಟಿ.ಭೂಬಾಲನ್ ಮಾತನಾಡಿ ಭಾರತೀಯ ನಾಗರಿಕ ಸೇವೆ ಎಂಬ ಹೆಸರಿನ ಯೋಜನೆ ಅಂದಿನ ವಲ್ಲಭಬಾಯಿ ಪಟೇಲರು ಅನುಷ್ಠಾನಕ್ಕೆ ತಂದು ನೌಕರರನ್ನು ಗೌರವಿಸುವ ದಿನವನ್ನು ಎಪ್ರೀಲ್ ೨೧ ರಂದು ಪ್ರಾರಂಭಿಸಿದ್ದರಿAದ ನಾಗರಿಕ ಸೇವೆ ಎಂದು ಬದಲಿಸಿ ಸರಕಾರಿ ನೌಕರರ ದಿನಾಚರಣೆಯನ್ನಾಗಿ ಮಾಡಲಾಗಿದೆ ಎಂದರು. ಪ್ರತಿಯೊಬ್ಬ ಸರಕಾರಿ ನೌಕರರನ್ನು ಗೌರವಿಸುವ ದಿನವಾಗಿದೆ. ಸರಕಾರಿ ನೌಕರರು ದಾನ, ಧರ್ಮ, ಪೂಜೆ ಪುನಸ್ಕಾರದತ್ತ ಗಮನ ಹರಿಸದೇ ತಾವು ಮಾಡುವ ಕಾರ್ಯವೇ ಪೂಜೆ ಎಂದು ಅರಿತು ಜನಸೇವೆ ಮಾಡಬೇಕು ಎಂದರು.

ಬೆಳಗಾವಿಯ ಜಾಗೃತಕೋಶದ ಉಪಕೃಷಿ ನಿರ್ದೇಶಕ ವೆಂಕಟರಾವಣಪ್ಪ ಅವರು ಸೇವಾ ನಿಯಮ ಮತ್ತು ಆರ್.ಟಿ.ಐ ಬಗ್ಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಯುಕೆಪಿಯ ಮಹಾವ್ಯವಸ್ಥಾಪಕ ಲೋಕಂಡೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಪರಿಷತ್ ಸದಸ್ಯ ಎಸ್.ವಿ.ಸತ್ಯರೆಡ್ಡಿ, ಗೌರವಾದ್ಯಕ್ಷ ಸುರೇಶ ಇಂಜಿಗನೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತರು
೨೦೨೧ನೇ ಸಾಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ನೇಮಗೌಡರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ವೆಂಕಟೇಶ ಆದಾಪೂರ, ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀನಿವಾಸ ಚಿಕ್ಕೂರ, ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ಲಕ್ಷö್ಮಣ ಚವ್ಹಾಣ, ಅಂಗನವಾಡಿ ಮೇಲ್ವಿಚಾರಕಿ ದೀಪಾ ಕಮತೆ, ಜಿಲ್ಲಾ ಆಸ್ಪತ್ರೆಯ ಶೂಶ್ರುಷಾಧಿಕಾರಿ ದಿವ್ಯ ವಿ, ಜಿ.ಪಂ ಕಚೇರಿ ಅಧೀಕ್ಷಕ ವೆಂಕಟೇಶ ತಿಮ್ಮನಾಯ್ಕರ, ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೆದಾರ ಜಿ.ವಿ.ರಜಪೂತ, ಪಶು ಚಿಕಿತ್ಸಾಲಯ ಡಿವರ್ಗದ ನೌಕರ ಮರಿಯಪ್ಪ ಸಂಗಾಪೂರ ಪ್ರಶಸ್ತಿ ಪಡೆದುಕೊಂಡರು.

೨೦೨೨ನೇ ಸಾಲಿನ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಚಂದ್ರಕಾಂತ ಜವಳಿ, ಬೀಳಗಿ ತಹಶೀಲ್ದಾರ ಶಂಕರ ಗೌಡಿ, ಪಂಚಾಯತ ಇಂಜಿನೀಯರಿಂಗ್ ವಿಭಾದ ಸಹಾಯಕ ಅಭಿಯಂತರ ಎಂ.ಎಸ್.ಸಾತಿಹಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಭಿವೃದ್ದಿ ನಿರೀಕ್ಷಕಿ ದ್ರಾಕ್ಷಾಯಿಣಿ ಪಾಟೀಲ, ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಮೋಹನ ಕೋರಡ್ಡಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯ ಅಧೀಕ್ಷಕ ಆಸೀಫ್ ಮೈದರಗಿ, ಗ್ರಾ.ಪಂ ಪಿಡಿಓ ಎಂ.ಎಸ್.ನಾಲತ್ತವಾಡ, ಉಪ ತಹಶೀಲ್ದಾರ ಮಹೇಶ ಸಂದಿಗವಾಡ, ಜಿ.ಪಂ ಕಾರ್ಯಾಲಯದ ಡ ವರ್ಗ ಪಕೀರಪ್ಪ ಕೊಂಡಕಿ ಅವರು ಪ್ರಶಸ್ತಿ ಪಡೆದುಕೊಂಡರು.

";