ಬಾಗಲಕೋಟೆ
ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘ ಹನುಮಸಾಗರ ಇದರ ಅಡಿಯಲ್ಲಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಶ್ರೀ ಪಿ.ಬಿ.ಧುತ್ತರಗಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಶ್ರೀಮತಿ ಸರೋಜಮ್ಮ ಧುತ್ತರಗಿ ಇವರ ಸ್ಮರಣಾರ್ಥಕವಾಗಿ ನಿಸರ್ಗ ಸಂಗೀತ ವಿದ್ಯಾಲಯದ 250ನೇ ಸರಣಿ ಕಾರ್ಯಕ್ರಮ ಹಾಗೂ 23ನೇ ವರ್ಷದ ಸವಿ ನೆನಪಿಗಾಗಿ ರಾಜ್ಯಮಟ್ಟದ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಮ. ನಿ. ಪ್ರ ಜಗದ್ಗುರು ವಿಜಯ ಮಹಾಂತ ಶಿವಯೋಗಿಗಳು ಮೈಸೂರು ಸಂಸ್ಥಾನ ಮಠ ಕುದುರೆಮೋತಿ ಇವರು ವಹಿಸಿಕೊಂಡಿದ್ದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಕೊಪ್ಪಳ ಜಿಲ್ಲೆಯ ಸಂಸದರು ಆಗಿರುವ ಶ್ರೀ ಸಂಗಣ್ಣ ಕರಡಿಯವರು ಉದ್ಘಾಟಿಸಿದರು.
ಧುತ್ತರಗಿ ದಂಪತಿಗಳ ಭಾವಚಿತ್ರಕ್ಕೆ ಕರಿಸಿದ್ದಪ್ಪ ಅಗಸಿಮುಂದಿನ ಹಾಗೂ ಅತಿಥಿ ಮಹನಿಯರು ಪುಷ್ಪ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶಿಕ್ಷಕರಾಗಿರುವ *ಶ್ರೀ ಮುತ್ತು. ಯ.ವಡ್ಡರ* ಇವರಿಗೆ *ರಾಜ್ಯ ಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ* ನೀಡಿ ಗೌರವಿಸಲಾಯಿತು.
ಸಂಗೀತ ವಿದ್ಯಾಲಯದ ಅಧ್ಯಕ್ಷರಾಗಿರುವ ಶ್ರೀ ಮಲ್ಲಯ್ಯ ಕೋಮಾರಿ ಹಾಗೂ ಕಾರ್ಯದರ್ಶಿಗಳಾಗಿರುವ ಶ್ರೀಮತಿ ಶ್ರೀದೇವಿ ಕೋಮಾರಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುಮಾರು ಹನ್ನೊಂದು ಜಿಲ್ಲೆಗಳಿಂದ ವಿವಿಧ ಕ್ಷೇತ್ರದ ಸಾಧಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 25ಕ್ಕೂ ಹೆಚ್ಚು ಜನರಿಂದ ಕವಿಗೋಷ್ಠಿ ನಡೆಯಿತು. ರಾಜ್ಯದ ಬೇರೆ ಬೇರೆ ಗಾಯಕರಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು. ಕಾರ್ಯಕ್ರಮದಲ್ಲಿ ಸುಮಾರು 2000 ಜನ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.