ಬಾಗಲಕೋಟೆ
ರಾಷ್ಟಿçಯ ಮತದಾರರ ದಿನಾಚರಣೆ ನಿಮಿತ್ತ ರಾಜ್ಯ ಸ್ವೀಪ್ ನೋಡಲ್ ಅಕಾರಿ ಪಿ.ಎಸ್.ವಸ್ತçದ ನೇತೃತ್ವದಲ್ಲಿ ವಿಡಿಯೋ ವರ್ಚ್ಯೂವಲ್ ಮೂಲಕ ಪ್ರಬಂಧ ಹಾಗೂ ಭಿತ್ತಿಚಿತ್ರ ಸ್ಪರ್ಧೆಗಳು ನಡೆದವು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ವಿಡಿಯೋ ವರ್ಚ್ಯೂಚಲ್ ಮೂಲಕ ನಡೆದ ಸ್ಪರ್ಧೆಗಳಲ್ಲಿ ಜಿಲ್ಲೆಯ ೯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೌಢಶಾಲಾ ವಿಭಾಗದಿಂದ ಮೈತ್ರಾವತಿ ಸೀಮಿಕೇರಿ (ಪ್ರಬಂಧ ಕನ್ನಡ), ಅಂಕಿತಾ ಪೊಲೀಸ್‌ಪಾಟೀಲ (ಪ್ರಬಂಧ ಇಂಗ್ಲೀಷ), ಆಫೀಯಾ ಮಹಾತ (ಭಿತ್ತಿಚಿತ್ರ) ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪಪೂ ವಿಭಾಗದಿಂದ ಪ್ರೇಮಾ ಮೀಶಿ (ಪ್ರಬಂಧ ಕನ್ನಡ), ಅನಿಶಾ ನದಾಪ್ (ಪ್ರಬಂಧ ಇಂಗ್ಲೀಷ), ಪ್ರತಿಭಾ ಸಜ್ಜನ (ಭಿತ್ತಿಚಿತ್ರ) ಹಾಗೂ ಪದವಿ ವಿಭಾಗದಿಂದ ದ್ಯಾಮಣ್ಣ ಕಂಬಾರ (ಪ್ರಬಂಧ ಕನ್ನಡ), ಅಂಜಲಿ ಆಲಗುಂಡಿ (ಪ್ರಬಂಧ ಇಂಗ್ಲೀಷ), ರಮೇಶ ಆಲೂರ (ಭಿತ್ತಿಚಿತ್ರ) ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತರ ಆಯ್ಕೆಗೆ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
ಸ್ಪರ್ಧೆ ಮುಗಿದ ನಂತರ ವಿದ್ಯಾರ್ಥಿಗಳ ಭಿತ್ತಿಚಿತ್ರಗಳನ್ನು ಅಪರ ಜಿಲ್ಲಾಕಾರಿ ಪರಶುರಾಮ ಶಿನ್ನಾಳಕರ, ಜಿಪಂ ಯೋಜನಾ ನಿರ್ದೇಶಕ ಎನ್.ವೈ.ಬಸರಿಗಿಡದ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ, ಜಿಪಂ ಸಹಾಯಕ ಯೋಜನಾಕಾರಿ ಭೀಮಪ್ಪ ತಳವಾರ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸ್ಪರ್ಧೆಯ ಮೇಲ್ವಿಚಾರಕರಾದ ಪಿ.ಎಸ್.ಚವ್ಹಾಣ, ಜೆ.ಬಿ.ಕುಲಕರ್ಣಿ, ಎಸ್.ಎಸ್.ಹಡಗಲಿ ಹಾಗೂ ವಿದ್ಯಾರ್ಥಿಗಳು ಇದ್ದರು.