ಬಾಗಲಕೋಟೆ
ಮೂಡಬಿದ್ರಿಯ ಆಳ್ವಾಸ್ ಕಾಲೇಜ್, ರೀಚ್ ಸಂಸ್ಥೆ ಹಾಗೂ ಬೀಳಗಿ ತಾಲೂಕಿನ ಸುನಗ ಗ್ರಾಪಂ ಸಹಯೋಗದಲ್ಲಿ ಸುನಗ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಶೌಚಾಲಯ ಬಳಕೆ, ಘನತ್ಯಾಜ್ಯ ನಿರ್ವಹಣಾ ನಿಯಮದ ಕುರಿತು ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನಗೊಂಡಿತು.
ಗ್ರಾಮದ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರಿಂದ ಸಂಭವಿಸಬಹುದಾದ ಅನಾಹುತಗಳು, ತ್ಯಾಜ್ಯದಿಂದಾಗಿ ಹರಡುವ ಹಲವು ಸಾಂಕ್ರಾಮಿಕ ಕಾಯಿಲೆಗಳ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.
ಸುನಗ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸ್ನೇಹ, ಅಶ್ವಿನಿ, ಸುಮಂಗಲ, ಸುಶ್ಮಿತಾ, ದೀಪ, ಅರುಣ್, ರೋ?Àನ್ ಮತ್ತು ಶ್ವೇತಾ ಬೀದಿನಾಟಕದಲ್ಲಿ ಕಲಾವಿದರಾಗಿ ಅಭಿನಯಿಸಿದರು. ೨೦೦ಕ್ಕಿಂತ ಹೆಚ್ಚು ಜನರು ಬೀದಿನಾಟಕ ವೀಕ್ಷಿಸಿದರು.
ನೆರೆದಿದ್ದ ಮಹಿಳೆಯರು ಒಲೆಗೆ ಪ್ಲಾಸ್ಟಿಕ್ ಹಾಕಿ ಸುಡುವುದು ತಪ್ಪು, ಇದರಿಂದ ಪರಿಸರ ಹಾಳಾಗುವುದರೊದಿಗೆ ಆರೋಗ್ಯಕ್ಕೂ ಹಾನಿಕಾರಕ ಎಂದು ಬೀದಿನಾಟಕದ ಮೂಲಕ ಮಕ್ಕಳಿಂದ ತಿಳಿದು ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಪಂ ಪಿಡಿಒ ಡಿ.ಆರ್.ಅಡ್ವಿ, ಕಾರ್ಯದರ್ಶಿ ದಳವಾಯಿ, ಸಿಬ್ಬಂದಿ, ಮುಖ್ಯಗುರುಮಾತೆ ಮಾಯಾ, ರೀಚ್ ಸಂಸ್ಥೆಯ ಆಂದೋಲನಾ ನಾಯಕಿ ಸುಧಾ, ಆಳ್ವಾಸ್ ಸಂಸ್ಥೆಯ ಸಮಾಜ ಕಾರ್ಯದ ವಿದ್ಯಾರ್ಥಿಗಳಾದ ಆರ್.ಹೃದಯ, ಅವಿನಾಶ್.ಎ.ಜಿ., ಗ್ರಾಮಸ್ಥರು, ಮಕ್ಕಳು, ಮಹಿಳೆಯರು ಇದ್ದರು.