This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ಸಂಘದ ಏಳಿಗೆಗೆ ಶ್ರಮಿಸಿ

ಸಂಘದ ಏಳಿಗೆಗೆ ಶ್ರಮಿಸಿ

ಬಾಗಲಕೋಟೆ
ಸಂಘಗಳ ಏಳಿಗೆಗೆ ಪಿಗ್ಮಿ ತುಂಬುವುದರೊಂದಿಗೆ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಎನ್.ಬಿ.ರಾಮವಾಡಗಿ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ  ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕೃಷಿ ಸಹಕಾರಿ ಸಂಘಗಳಲ್ಲಿ ಏಕರೂಪತೆ ತರುವ ಉದ್ದೇಶದಿಂದ ಇದೀಗ ಸಂಘದ ಹೆಸರು ಬದಲಾಗಿದ್ದು ಅದರೊಂದಿಗೆ ನಾವು ಸಹ ಬದಲಾಗಬೇಕಿದೆ ಎಂದರು.

ಶೇರ್‌ದಾರರು ಪಿಗ್ಮಿ ತುಂಬುವದರೊAದಿಗೆ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಿ. ಮುಂದಿನ ದಿನಮಾನದಲ್ಲಿ ಇಂತಹ ಸಂಘಗಳಿAದ ಸುಪರ್ ಮಾರ್ಕೆಟ್ ಸೇರಿದಂತೆ ಹಲವು ವ್ಯಾಪಾರಿ ಅಭಿವೃದ್ಧಿ ಸಂಬAತ ಯೋಜನೆಗಳು ಜಾರಿಯಾಗುತ್ತವೆ. ಅವುಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಅಗಲಿದ ಹಿರಿಯ ಜೀವಿಗೆ ಶ್ರದ್ಧಾಂಜಲಿ

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಸಂಘದ ನಿರ್ದೇಶಕರಾಗಿದ್ದ ಸಿದಪ್ಪ ಕಂಠಿ ಅವರಿಗೆ ಸಭೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು. ಅತ್ಯಂತ ಸಹೃದಯಿ, ಹಿರಿಯ ಜೀವಿಯಾಗಿದ್ದು ಕಂಠಿ ಅವರು ಎಲ್ಲರೊಂದಿಗೆ ಸಹಜವಾಗಿ ಬೆರೆತು ಸಂಘದ ಏಳಿಗೆಗೆ ಸಲಹೆ, ಮಾರ್ಗದರ್ಶನ ಮಾಡುತ್ತಿದ್ದರು ಎಂದು ಸಭೆಯಲ್ಲಿ ಅವರನ್ನು ನೆನಪಿಸಿಕೊಳ್ಳಲಾಯಿತು.

ಸಂಘದ ನಿರ್ದೇಶಕ ಸುಭಾಷ ರಾಠೋಡ, ಡಿಸಿಸಿ ಬ್ಯಾಂಕ್ ಸುಪರ್‌ವೈಸರ್ ಎಂ.ಎಚ್.ತುAಬರಮಟ್ಟಿ ಮಾತನಾಡಿದರು. ಸಂಘದ ಅಧ್ಯಕ್ಷ ಹುಸೇನಬಾಷಾ ಬೇಪಾರಿ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಶಂಕ್ರಪ್ಪ ಪರಕಾಳಿ, ನಿರ್ದೇಶಕರಾದ ಹನಮಂತಪ್ಪ ಮಜ್ಜಗಿಯವರ, ಬಸೀರಅಹ್ಮದ್ ಅತ್ತಾರ, ಮಳಿಯಪ್ಪ ಕಮ್ಮಾರ, ಹನಮಂತ ತಳಗಲಮನಿ, ಮುತ್ತಪ್ಪ ಮುಂದಿನಮನಿ, ಲಕ್ಷಿö್ಮಬಾಯಿ ಸುರಪುರ, ಸಿಬ್ಬಂಇ ಎಂ.ಎA.ಗುಗ್ಗರಿ, ಮೈಬುಸಾ ಅಂಬಲಗಿ, ಎನ್.ವಿ.ಕಮ್ಮಾರ, ಬಿ.ಬಿ.ನಿಡಗುಂದಿ ಇತರರು ಇದ್ದರು.

 

";