ಸಂಗಮೇಶ್ವರ ಪಪೂ ಕಾಲೇಜ್
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಸಂಗಮೇಶ್ವರ ಪಪೂ ಕಾಲೇಜ್ ವಿದ್ಯಾರ್ಥಿಗಳು ಗುಡೂರಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಾನಾ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ಬಾಲಕರ ೧,೫೦೦ ಮೀ. ಓಟದಲ್ಲಿ ರಮೇಶ ಕುರಿ (ದ್ವಿತೀಯ), ೩,೦೦೦ ಮೀ. ಓಟದಲ್ಲಿ ಸಂತೋಷ ಸಜ್ಜನರ (ದ್ವಿತೀಯ), ಗುಡ್ಡಗಾಡು ಓಟದಲ್ಲಿ ರಮೇಶ ಕುರಿ ಮತ್ತು ರಮೇಶ ಸಜ್ಜನರ (ದ್ವಿತೀಯ), ಗುಂಡು ಎಸೆತ ಹಸನ್ ನದಾಫ್ (ದ್ವಿತೀಯ), ಭಲ್ಲೆ ಎಸೆತ ಕೃಷ್ಣಾ ಗಂಜಾಳ (ದ್ವಿತೀಯ), ಚಕ್ರ ಎಸೆತ ಹಾಗೂ ಹ್ಯಾಮರ್ ಥ್ರೋನಲ್ಲಿ ವಿಠ್ಠಲ ಅಳ್ಳೆಪ್ಪನವರ (ಪ್ರಥಮ), ತ್ರಿವಿದ ಜಿಗಿತ ಶರಣಗೌಡ ಪಾಟೀಲ (ಪ್ರಥಮ), ಅಡೆತಡೆ ಓಟ ಸುರೇಶ ಮಾದರ (ಪ್ರಥಮ), ಬಸವರಾಜ ಕುಳ್ಳೊಳ್ಳಿ (ದ್ವಿತೀಯ), ನಡಿಗೆಯಲ್ಲಿ ಸಂಗಮೇಶ ಬೈಲಕೂರ (ದ್ವಿತೀಯ), ಪೋಲ್‌ವಾಲ್ಟ್ ಬೀರಪ್ಪ ತೆಗ್ಗಿ (ಪ್ರಥಮ), ಎತ್ತರ ಜಿಗಿತ ಬೀರಪ್ಪ ತೆಗ್ಗಿ (ದ್ವಿತೀಯ) ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಅಡೆತಡೆ ಓಟ, ಗುಡ್ಡಗಾಡು ಓಟ, ೧೦೦ ಮೀ. ಓಟದಲ್ಲಿ ಅನ್ನಪೂರ್ಣ ಬಗಲಿ ಪ್ರಥಮ ಸ್ಥಾನ ಪಡೆದು ಸಮಗ್ರ ವೀರಾಗ್ರಣಿಗೆ ಪಾತ್ರಳಾಗಿದ್ದಾಳೆ. ಕಾವ್ಯಾ ರಾಠೋಡ ತ್ರಿವಿಧ ಜಿಗಿತ (ಪ್ರಥಮ), ೨೦೦ ಮೀ. ಓಟ (ದ್ವಿತೀಯ), ೪೦೦ ಮೀ. ಹಾಗೂ ೧,೫೦೦ ಮೀ ಓಟದಲ್ಲಿ ಲಕ್ಷಿö್ಮಬಾಯಿ ಬಾದವಾಡಗಿ (ದ್ವಿತೀಯ), ದಾನಮ್ಮ ನಾಟಿಕಾರ ಗುಡ್ಡಗಾಡು ಓಟದಲ್ಲಿ (ಪ್ರಥಮ), ೮೦೦ ಮೀ. ಓಟದಲ್ಲಿ (ದ್ವಿತೀಯ) ಸ್ಥಾನ ಪಡೆದು ಕಾಲೇಜ್‌ಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಯ ಎಂ.ಎನ್.ವAದಾಲ ತಿಳಿಸಿದ್ದಾರೆ.
ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆ ಅಧ್ಯಕ್ಷರೂ ಆಗಿರುವ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇAದ್ರ ಸ್ವಾಮೀಜಿ, ಚೇರಮನ್ ಐ.ಎಸ್.ಲಿಂಗದಾಳ, ಕಾಲೇಜ್‌ನ ಚೇರಮನ್ ಸಿ.ಡಿ.ಇಲಕಲ್, ಪ್ರಾಚಾರ್ಯ ಎಂ.ಎನ್.ವAದಾಲ ಇತರರು ಅಭಿನಂದನೆ ಸಲ್ಲಿಸಿದ್ದಾರೆ.