ಬಾಗಲಕೋಟೆ:
ಪ್ರಸಕ್ತ ಸಾಲಿಗೆ ರೇಷ್ಮೆ ಇಲಾಖೆಯಿಂದ ಜಿಲ್ಲಾ ಪಂಚಾಯತ ಯೋಜನೆಯಡಿ ಸಹಾಯಧನ ಪಡೆಯಲು ಹೊಸದಾಗಿ ರೇಷ್ಮೆ ಕೃಷಿ ಕೈಗೊಂಡಿರುವ ರೇಷ್ಮೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೊಸದಾಗಿ ಹಿಪ್ಪು ನೇರಳೆ ತೋಟ ಸ್ಥಾಪನೆ, ಹಿಪ್ಪು ನೇರಳೆ ನರ್ಸರಿ ಉತ್ಪಾದನೆ, ಉದ್ಯೋಗಖಾತ್ರಿ ಯೋಜನೆಯಡಿ ವೈಯುಕ್ತಿಕ ಕಾಮಗಾರಿ ಅಡಿ ರೇಷ್ಮೆ ಕೃಷಿ ಅಬಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸಹಾಯಧನ ನೀಡಲಾಗುತ್ತಿದೆ. ಆಸಕ್ತರು ರೇಷ್ಮೆ ವಿಸ್ತರಣಾಕಾರಿಗಳನ್ನು ಸಂಪರ್ಕಿಸಿ ಸೆ.೧೫ರೊಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ರೇಷ್ಮೆ ಸಹಾಯಕ ನಿರ್ದೇಶಕರು ಹುನಗುಂದ (೯೦೦೮೩೭೨೭೧೨), ಜಮಖಂಡಿ (೯೪೪೮೮೩೮೧೬೭), ತಾಂತ್ರಿಕ ಸೇವಾ ಕೇಂದ್ರ, ಬಾಗಲಕೋಟೆ (೮೦೮೮೭೪೩೨೦೫), ಬಾದಾಮಿ, ಹುನಗುಂದ (೯೯೪೫೭೪೪೪೧೩), ತಾಂತ್ರಿಕ ಸೇವಾ ಕೇಂದ್ರ ಜಮಖಂಡಿ (೮೯೭೧೩೪೪೫೭೪)ಗೆ ಸಂಪರ್ಕಿಸುವAತೆ ರೇಷ್ಮೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.