ಬೆಂಗಳೂರು/ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆ ಸೋಲುಕಂಡಿರುವ ಮಾಜಿ ಸಚಿವ ಡಾ.ಕೆ ಸುಧಾಕರ್ ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ನೀಡಲಾಗಿದ್ದು, ಬೆನ್ನಲ್ಲೇ ರಾಜಕೀಯ ಎದುರಾಳಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರಪ್ಪ ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, IT, ED ಬಿಟ್ಟು ಕಾಟ ಕೊಡುತ್ತೀರಾ ಸುಧಾಕರ್ ಅವರೇ, ನಾನು ರೆಡಿ ಇದ್ದೇನೆ. ನಾನು ಹಗರಣ ಮಾಡಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ನಾಳೆ ನಂದಿಭೋಗ ನಂದೀಶ್ವರ ದೇಗುಲದಲ್ಲಿ ಆಣೆ ಮಾಡುತ್ತೇನೆ. ಸುಧಾಕರ್ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ ಎಂದು ಆಣೆ ಪ್ರಮಾಣದ ಸವಾಲೆಸೆದರು.
ಸುಧಾಕರ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿರುವ ಪ್ರದೀಪ್ ಈಶ್ವರ್, ನಾನು ಹಗರಣ ಮಾಡಿಲ್ಲ ಎಂದು ನಾಳೆ ನಂದಿಭೋಗ ನಂದೀಶ್ವರ ದೇಗುಲದಲ್ಲಿ ಆಣೆ ಪ್ರಮಾಣ ಮಾಡುತ್ತೇನೆ. ಸುಧಾಕರ್ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ? ಎಂದು ಸವಾಲು ಎಸೆದರು.
ಡಾ.ಕೆ.ಸುಧಾಕರ್ ನೂರಾರು ಕೋಟಿ ಆಸ್ತಿ ಮಾಡಿದ್ದಾರೆ. ತಂದೆ ಬಾಮೈದನ ಹೆಸರಲ್ಲಿ ನೂರಾರು ಎಕರೆ ರಿಜಿಸ್ಟರ್ ಆಗಿದೆ. ಸುಧಾಕರ್ ನೂರಾರು ಕೋಟಿ ರೂಪಾಯಿ ಮಾಡಿದ್ದಾರೆ. ಅನೇಕ ಕಂಪನಿಗಳಿಗೆ ಸುಧಾಕರ್ ಹೂಡಿಕೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಸುಧಾಕರ್ ಅವರ ಪ್ರಾಪರ್ಟಿ ಇದೆ. ಬೆಂಗಳೂರಿನ ಸದಾಶಿವನಗರದಲ್ಲಿ ಅವರ ಮನೆ ಇದೆ. ಇದೆಲ್ಲವೂ ಎಲ್ಲಿಂದ ಬಂದಿದೆ ಎಂದು ಅವರು ಹೇಳಲಿ ಎಂದು ವಾಗ್ದಾಳಿ ನಡೆಸಿದರು.
ಸುಧಾಕರ್ ಕಾಂಗ್ರೆಸ್ ಸೇರಲು ಬಹಳ ಪ್ರಯತ್ನ ಮಾಡಿದ್ರು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬರಲು ಬಹಳ ಪ್ರಯತ್ನ ಮಾಡಿದ್ದರು. ಕೆಲವು ನಾಯಕರ ಜೊತೆ ಸಿಎಂ, ಡಿಸಿಎಂ ಭೇಟಿ ಮಾಡಿಸಿ ಎಂದು ಹೇಳಿದ್ದರು. ಆದರೆ ಕೊನೆಗೆ ಸುಧಾಕರ್ ಏನು ಯೋಚನೆ ಮಾಡಿದ್ರೋ ಗೊತ್ತಿಲ್ಲ. ಬಿಜೆಪಿ ಬಿಟ್ಟರೆ ಐಟಿ, ಇಡಿ ರೇಡ್ ಆಗಬಹುದು ಎಂದು ಹೆದರಿದ್ದಾರೆ. ಸುಧಾಕರ್ ಟಾರ್ಚರ್ನಿಂದಲೇ ನಾನು ಶಾಸಕನಾಗಿದ್ದೇನೆ. ಸುಧಾಕರ್ಗೆ ಮತ ಹಾಕಿದ್ರೆ ಪ್ರಜಾಪ್ರಭುತ್ವಕ್ಕೆ ಮಾರಕ. ಸಾಮಾನ್ಯ ಜನರಿಗೆ ಸುಧಾಕರ್ ತೊಂದರೆ ಕೊಡುತ್ತಾರೆ ಎಂದು ಹೇಳಿದರು.