ರಾಯಚೂರು: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಇತ್ತ ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಬಿರುಬಿಸಿಲಿನಿಂದಾಗಿ ಕಾದು ಕೆಂಡವಾಗುತ್ತಿದೆ. ನಿತ್ಯ ಬಿಸಿಲಿನ ಝಳಕ್ಕೆ ಜನರು ಹೈರಾಣು ಆಗುತ್ತಿದ್ದು, ಟ್ರಾಫಿಕ್ ಸಿಗ್ನಲ್ ನಲ್ಲಿ ವಾಹನ ಸವಾರರಿಗೆ ಜಿಲ್ಲಾಡಳಿತದಿಂದ ನೆರಳಿ ಆಸರೆ ಮಾಡಿದೆ.
ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿ ರೈತರನ್ನು ಕಂಕಷ್ಟಕ್ಕೆ ಸಿಲುಕಿಸಿದೆ. ಬೇಸಿಗೆ ಕಾಲದಲ್ಲಿ ಹಾಗೂ ಬರದ ಛಾಯೆಯಿಂದ ಪ್ರಸಕ್ತ ವರ್ಷದಲ್ಲಿ 0.5 ದಿಂದ 1 ಡಿಗ್ರಿ ಸೆಲಿಯಸ್ಸಿ ಉಷ್ಣಾಂಶ ಹೆಚ್ಚಾಗುವ ಬಿಸಿಲಿನ ಪ್ರಮಾಣ ಏರಿಕೆಯಾಗಿಲಿದೆ.
ಬೇಸಿಗೆ ಕಾಲ ಶುರುವಾದರೆ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸೂರ್ಯ ಶಿಖರಿ ಶುರುವಾಗುತ್ತದೆ. ಪ್ರತಿ ವರ್ಷ ಬೇಸಿಗೆಯಲ್ಲಿ ತನ್ನ ಪ್ರಖರತೆಯನ್ನ ತೋರಿಸಿ ಸೂರ್ಯ ಬಿಸಿಗಾಳಿ ಕಹಿ ಅನುಭವಿಸಬೇಕಾಗುತ್ತದೆ. ಆದ್ರೆ ಪ್ರಸಕ್ತ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಿಸಿಲಿನ ತಾಪಮಾನವನ್ನ ಜನರು ಅನುಭವಿಸುವಂತೆ ಮಾಡಿದೆ.
ಕಲ್ಯಾಣ-ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯೊಂದರಲ್ಲಿಯೇ ಮುಂಗಾರು ಮತ್ತು ಹಿಂಗಾರಿಗೆ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಈ ಕಾರಣಕ್ಕೆ ಜಿಲ್ಲೆಯ ಭೀಕರ ಬರಗಾಲ ಆವರಿಸಿದೆ. ಭೀಕರ ಬರದ ನೇರ ಪರಿಣಾಮ ಬೇಸಿಗೆ ತಗಲಿದ್ದರಿಂದ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅತಿಹೆಚ್ಚು 40.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು ಆಗಿತ್ತು.
ಬಿಸಿಲಿನ ತಾಪ ಏಪ್ರಿಲ್-ಮೇ ತಿಂಗಳಲ್ಲಿ ಸಹ ಮುಂದುವರೆದಿದೆ. ಏಪ್ರಿಲ್ ತಿಂಗಳಲ್ಲಿ ಸರಸಾರಿ 39.8 ಹಾಗೂ ಮೇ ತಿಂಗಳಲ್ಲಿ ಸರಸಾರಿ 40.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಆದ್ರೆ ಪ್ರಸಕ್ತ ಏಪ್ರಿಲ್ ತಿಂಗಳಲ್ಲಿ ಮುನ್ಸೂಚನೆಯಂತೆ 0.5ನಿಂದ 1 ಡಿಗ್ರಿ ಸೆಲ್ಸಿಯಸ್ ಯಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ.
2016 ರಲ್ಲಿ 43.8 ಗರಿಷ್ಠ ಉಷ್ಣಾಂಶ, 2020 ರಲ್ಲಿ 43.0 ಗರಿಷ್ಠ ಉಷ್ಣಾಂಶ ಜಿಲ್ಲೆಯಲ್ಲಿ ಅತಿಹೆಚ್ಚು ಬಿಸಿಲಿನ ತಾಪಮಾನ ದಾಖಲಾಗಿತ್ತು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬಿಸಿಲು ಪ್ರಮಾಣ ಏರಿಕೆಯಾಗಿರಲಿಲ್ಲ. ಆದರೆ ಈ ವರ್ಷದಲ್ಲಿ ಬಿಸಿಲಿನ ಪ್ರಮಾಣ ಏರಿಕೆಯಾಗಲಿದೆ ಅಂತಾರೆ ರಾಯಚೂರು ಕೃಷಿ ವಿವಿಯ ಹವಾಮಾನ ಇಲಾಖೆ ತಾಂತ್ರಿಕ ಸಹಾಯಕರಾದ ಶಾಂತಪ್ಪ.
ಕಳೆದ 30 ವರ್ಷಗಳ ಮಾರ್ಚ್ ತಿಂಗಳು ಉಷ್ಣಾಂಶ ಗಮನಿಸಿದಾಗ ಸರಾಸರಿ 37.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಪ್ರಸಕ್ತ ಮಾರ್ಚ್ ತಿಂಗಳ ಸುಮಾರು 37.8 ಉಷ್ಣಾಂಶ ದಾಖಲಾಗಿದ್ದು, 0.4ರಿಂದ 0.5 ಹೆಚ್ಚಳವಾಗಿದೆ. ಅಲ್ಲದೇ ಮಾರ್ಚ್ ತಿಂಗಳಲ್ಲಿ 40.6 ಗರಿಷ್ಠ ತಾಪಮಾನ ದಾಖಲಾಗುವ ಮೂಲಕ ಬೇಸಿಗೆ ಆರಂಭದ ದಿನಗಳಲ್ಲಿ ಬಿಸಿಲಿಗೆ ಜಿಲ್ಲೆಯ ಕಾದು ಕೆಂಡವಾಗಿದೆ.