ಭಾರತ ಎಂದರೆ ಸಾಕು ವಿದೇಶಿಯರ ಗಮನಕ್ಕೆ ಬರುವುದು ಕೃಷಿ, ನಮ್ಮ ಮೂಲತ ಉದ್ಯೋಗವೇ ಇದಾಗಿದೆ ಹೀಗಿರುವಾಗ ಇತ್ತೀಚೆಗೆ ಯುವಕರು ಕೃಷಿ ಕಡೆ ಗಮನ ಕೊಡದೆ ನಗರಗಳನತ್ತ ಮುಖ ಮಾಡುತ್ತಿದ್ದಾರೆ. ಕಷ್ಟ ಎಂದರೆ ಭಯ ಎನ್ನುವ ರೀತಿಯಲ್ಲಿ ಇಂದಿನ ಯುವ ಪೀಳಿಗೆ ಮುಂದುವರೆಯುತ್ತಾ ಇದ್ದಾರೆ.
ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಕೃಷಿಯು ಜನರ ಪ್ರಮುಖ ಉದ್ಯೋಗವಾಗಿತ್ತು ಭೂಮಾಪನ ಮಾಡಿ ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಕಂದಾಯ ನಿಗದಿಗೊಳಿಸಲಾಗಿತ್ತು ಕೃಷಿಗೆ ರಾಜರು ಸೂಕ್ತ ಗಮನ ಕೊಡುತ್ತಿದ್ದರು ಭೂಮಿಯನ್ನು ನೀರಾವರಿ ಒಣ ಬೇಸಾಯ ಹಾಗೂ ತೋಟಗಾರಿಕಾ ಭೂಮಿ ಎಂದು ಅವರು ಅವರು ವಿಭಾಜಿಸಿದ್ದರು ಬತ್ತ ಬೆಳೆ ಕಾಳುಗಳು ಸಾಂಬರ್ ಪದಾರ್ಥಗಳು ಎಲೆ ಅಡಿಕೆ ಶುಂಠಿ ಅರಿಶಿನ ಹಣ್ಣು ಹಾಗೂ ಹೂಗಳುಗಳನ್ನು ಬೆಳೆಯುತ್ತಾ ಇದ್ದರು.
ಬ್ರೀಟಿಷ್ ರು ಸಹ ಬೆಚ್ಚಿ ಬಿದ್ದಿದ್ದರು ನಮ್ಮ ಬೇಸಾಯದ ಕಲೆಯನ್ನು ಕಂಡು ಆದರೆ ಇವತ್ತು ಯುವಕರು ಸ್ವಲ್ಪವೂ ಕೃಷಿ ಕಡೆ ಗಮನ ನೀಡದೆ ದೂರದ ಪಟ್ಟಣ ಗಳತ್ತ ಸಾಗಿ.ಅಲ್ಲಿ ಯಾವದೋ ಒಂದು ಪ್ಯಾಕ್ಟರಿಯಲ್ಲಿ ಹತ್ತು,ಹದಿನೈದು ಸಾವಿರಕ್ಕೆ ದುಡಿಯುತ್ತಾರೆ.ಇನ್ನು ಕೆಲವೊಂದಿಷ್ಟು ಯುವಕರು ಸಿಟಿ ಜೀವನದಿಂದ ಬೇಸತ್ತು ಹಳ್ಳಿ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾರೆ. ತಮಗೆ ಇರುವಂತಹ ಜಮೀನಿನಲ್ಲಿ ಕೃಷಿ ಮಾಡಲು ಆಸಕ್ತಿ ತೋರುತ್ತಿದ್ದಾರೆ.ಮತ್ತೆ ಇನ್ನು ಕೆಲವು ಯುವಕರು ಹೈನುಗಾರಿಕೆ, ಕೋಳಿ ಸಾಕಾಣಿಕೆ,ಮೇಕೆ ಸಾಕಾಣಿಕೆ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಇನ್ನು ಕೆಲವು ಯುವಕರಿಗೆ ನಗರದ ಜೀವನದ ವ್ಯವಸ್ಥೆ ಸುಸ್ತಾಗಿ, ಗ್ರಾಮೀಣಗಳತ್ತ ಸುಳಿಯುತ್ತಾ ಇದ್ದಾರೆ ನಗರದ ಕಂಪನಿಯಲ್ಲಿ ಇರುವ ಅವರ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು,ಅಲ್ಲಿಯ ವಾತಾವರಣ,ಅಲ್ಲಿರುವ ಊಟಕ್ಕೆ,ಮತ್ತು ವಾಹನಗಳ ಕಿರಿ ಕಿರಿ ಇವೆಲ್ಲಕ್ಕೂ ವಿದಾಯ ಹೇಳಿ ಕೃಷಿಯಲ್ಲಿ ತಲ್ಲೀನರಾಗುತ್ತಾ ಇದ್ದಾರೆ.
ಇತ್ತ ಕೆಲವೊಂದು ಸನ್ನಿವೇಶದಲ್ಲಿ ಹಳ್ಳಿಯಲ್ಲಿ ಸಕಾಲಕ್ಕೆ ಮಳೆ ಬಾರದೆ ಹೋದರೆ ಮುಗೀತು ಭೂಮಿಯನ್ನು ನಂಬಿಕೊಂಡು ಬೀಜ ಬಿತ್ತನೆ ಮಾಡಿದ ರೈತರ ಸ್ಥಿತಿ ತುಂಬಾ ಚಿಂತಾಜನಕವಾಗುತ್ತದೆ. ಅಷ್ಟೋ ಇಷ್ಟೋ ಬೆಳೆ ಕೈಗೆ ಬಂದರು ಅದನ್ನು ಮಾರಲು ದಲ್ಲಾಳಿಗಳ ಕಾಟ,ಅಡತಿ ಅಂಗಡಿಗಳಲ್ಲಿ ಸರಿಯಾಗಿ ದರ ಸಿಗುವುದಿಲ್ಲ ಹೀಗಾಗಿ ರೈತರ ಸ್ಥಿತಿ ತುಂಬಾ ಕಷ್ಟ ಆಗಿದೆ ಇಷ್ಟೇಲ್ಲಾ ಇದ್ದರೂ ನಮ್ಮ ರೈತರು ತಮ್ಮ ಕಾಯಕವನ್ನು ಬದಲಾಯಿಸಿಕೊಳ್ಳುವುದಿಲ್ಲ.
ಆದರೆ ಹಳ್ಳಿಯ ವಾತಾವರಣಕ್ಕೂ ಸಿಟಿಯ ವಾತಾವರಣಕ್ಕೂ ತುಂಬಾ ವ್ಯತ್ಯಾಸವಿದ್ದು, ಕೃಷಿಯಲ್ಲಿ ಮಳೆ,ಬಿಸಿಲು,ಯಾವುದನ್ನು ಲೆಕ್ಕಿಸದೆ ರೈತರು ಕೆಲಸ ಮಾಡುತ್ತಾರೆ.ಆದರೆ ಪಟ್ಟಣಗಳಲ್ಲಿ ಕಂಪನಿಯ ಒಳಗಡೆನೆ ಕೆಲಸ ಮಾಡುತ್ತಾರೆ ,ಆದರೆ ಸಿಟಿಯಲ್ಲಿ ಕೆಲಸ ಮಾಡುವ ಜನರ ಪರಿಸ್ಥಿತಿ ತುಂಬಾ ಅಯೋಮಯವಾಗಿರುತ್ತದೆ ಸರಿಯಾಗಿ ಹೊಟ್ಟೆ ತುಂಬಾ ಊಟ ಇರುವುದಿಲ್ಲ,ಕೆಲವು ಸಮಯ ಊಟಕ್ಕೆ ದುಡ್ಡು ಇರುವುದಿಲ್ಲ,ಕೆಲವು ಸಮಯ ಕೆಲಸದ ಒತ್ತಡ,ಇನ್ನು ಅನೇಕ ರೀತಿಯ ತೊಂದರೆಗಳು ಇರುತ್ತವೆ ಆದರು ನೆರಳಿನಲ್ಲಿ ಕೆಲಸ ಎನ್ನುವ ಕಾರಣಕ್ಕೆ ಯುವಕರು ತಮ್ಮ ಆರೋಗ್ಯವನ್ನು ಗಮನಿಸದೆ ಸೀಟಿ ಜೀವನಕ್ಕೆ ಹೊಂದಿಕೊಂಡು ಬಿಡುತ್ತಾರೆ.
ಸತ್ಯ ಎನು ಎಂದರೆ ಬೇಸಾಯದಲ್ಲಿ ಉತ್ತಮ ನೆಮ್ಮದಿಯನ್ನು ಕಂಡುಕೊಳ್ಳಬಹುದು, ಕೃಷಿ ಮಾಡಲು ನೀರಿನ ಸೌಲಭ್ಯ ಇದ್ದರೆ ಅನುಕೂಲವಾಗುತ್ತದೆ.ಕೆಲವು ಕಡೆ ಕ್ಯಾನಲಗಳನ್ನು ನಿರ್ಮಾಣ ಮಾಡಿ,ಡ್ಯಾಂ ನಿರ್ಮಾಣ ಮಾಡಿ,ಡ್ರಿಪ್ ಮೂಲಕ ನೀರಿನ ಸೌಲಭ್ಯವನ್ನು ಕಲ್ಪಸಲಾಗಿದೆ ಇದರಿಂದ ರೈತರಿಗೆ ತುಂಬಾ ಅನುೂಲವಾಗಿದೆ.ನೀರಾವರಿ ಸೌಲಭ್ಯ ಇಲ್ಲದೆ ಇರುವವರು ತಮ್ಮ ಜಮೀನಿನಲ್ಲಿ ಬೋರವೆಲ್ ಹಾಕಿಸಿಕೊಂಡು ಕೃಷಿ ಮಾಡಿದರೆ ಒಳ್ಳೆ ಆದಾಯ ಪಡೆಯಬಹುದು.ಒಣ ಬೇಸಾಯಕ್ಕಿಂತ ನೀರಾವರಿ ಪದ್ಧತಿಯಲ್ಲಿ ವ್ಯವಸಾಯ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು
ಅದು ಹೇಗೆಂದರೆ ವಿಜಯನಗರ ಸಾಮ್ರಾಜ್ಯದ ಕೃಷಿ ತರಹದ ರೀತಿಯಲ್ಲಿ ಮತ್ತು ಸ್ವಲ್ಪ ಬದಲಾವಣೆಯನ್ನು ಕಂಡುಕೊಂಡು ಕಾಯಿಪಲ್ಯ,ಹೂ,ಹಣ್ಣಿನ ಮರಗಳನ್ನು ಬೆಳೆಸುವುದರ ಮೂಲಕ ಲಾಭ ಗಳಿಸಬಹುದು. ಕೃಷಿಯ ಜೊತೆಗೆ ಹೈನಗಾರಿಕೆ,ಕುರಿ,ಮೇಕೆ,ಕೋಳಿ ಸಾಕಾಣಿಕೆಯನ್ನು ಸಹ ಮಾಡಿ ಒಳ್ಳೆ ಆದಾಯ ಪಡೆಯಬಹುದು.ಆದ್ದರಿಂದ ಇಂದಿನ ಯುವಕರು ಪಟ್ಟಣದ ಕಡೆ ಮುಖ ಮಾಡದೆ ನಿಮ್ಮ ಸ್ವಂತ ಊರಿನಲ್ಲೆ ಕೃಷಿಯ ಮೇಲೆ ಗಮನ ಹರಿಸಿದರೆ ಆರಾಮದಾಯಕ ಜೀವನ ನಡೆಸಬಹುದು.
ನಾಗರಾಜ ಸಜ್ಜನ