This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಸುಪ್ರೀಂ ಕೋರ್ಟ್‌ ಬ್ರೇಕ್: ಸುಳ್ಳು ಸುದ್ದಿ ತಡೆಗೆ ಕೇಂದ್ರ ಸರ್ಕಾರದಿಂದ ‘ಫ್ಯಾಕ್ಟ್ ಚೆಕ್’ ಘಟಕ ಸ್ಥಾಪನೆ

ಸುಪ್ರೀಂ ಕೋರ್ಟ್‌ ಬ್ರೇಕ್: ಸುಳ್ಳು ಸುದ್ದಿ ತಡೆಗೆ ಕೇಂದ್ರ ಸರ್ಕಾರದಿಂದ ‘ಫ್ಯಾಕ್ಟ್ ಚೆಕ್’ ಘಟಕ ಸ್ಥಾಪನೆ

ನವದೆಹಲಿ: ಸತ್ಯ ಪರಿಶೀಲನಾ ಘಟಕ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದ್ದು, ಸತ್ಯ ಪರಿಶೀಲನಾ ಘಟಕ ಸ್ಥಾಪನೆಗೆ ಕಾನೂನಿನ ಮಾನ್ಯತೆ ಇದೆಯೇ ಎಂಬ ವಿಚಾರದ ಕುರಿತಾಗಿ ಬಾಂಬೆ ಹೈಕೋರ್ಟ್‌ನ ಮೂರನೇ ನ್ಯಾಯಮೂರ್ತಿಗಳು ತೀರ್ಪು ನೀಡುವವರೆಗೂ ಈ ರೀತಿಯ ಘಟಕ ಸ್ಥಾಪಿಸಬೇಡಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ನಡುವೆ ಕೇಂದ್ರ ಸರ್ಕಾರ ಮಾರ್ಚ್ 20 ಬುಧವಾರ ಸತ್ಯ ಪರಿಶೀಲನಾ ಘಟಕ ಸ್ಥಾಪನೆಗೆ ಅಧಿಸೂಚನೆ ಹೊರಡಿಸಿತ್ತು. ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಅಡಿಯಲ್ಲೇ ಈ ಫ್ಯಾಕ್ಟ್‌ ಚೆಕ್ ಘಟಕ ಕಾರ್ಯ ನಿರ್ವಹಿಸಲಿದೆ ಎಂದು ಸರ್ಕಾರ ಹೇಳಿತ್ತು. ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಕೇಂದ್ರ ಸರ್ಕಾರದ ಅಧಿಕೃತ ಸಂಸ್ಥೆಯಾಗಿದೆ.

ಸತ್ಯ ಪರಿಶೀಲನಾ ಘಟಕ ಸ್ಥಾಪನೆ ಸಂಬಂಧ ಈ ಹಿಂದೆ ಬಾಂಬೆ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿ ಒಳಗೊಂಡ ದ್ವಿಸದಸ್ಯ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ತೀರ್ಪು ನೀಡುವಾಗ ಇಬ್ಬರೂ ನ್ಯಾಯಮೂರ್ತಿಗಳೂ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದು, ಪ್ರಕರಣ ಸಂಬಂಧ ಮೂರನೇ ನ್ಯಾಯಮೂರ್ತಿಗಳು ವಿಚಾರಣೆ ನಡೆಸುತ್ತಿದ್ದು, ಅವರ ತೀರ್ಪಿನ ಮೇಲೆ ಇದೀಗ ಎಲ್ಲವೂ ಅವಲಂಬಿತವಾಗಿದೆ.

ಮಾಹಿತಿ ಮತ್ತು ತಂತ್ರಜ್ಞಾನ ನಿಯಮಗಳನ್ನ ಬದಲಾವಣೆ ಮಾಡಿ ಇತ್ತೀಚೆಗಷ್ಟೇ 2021ರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಈ ತಿದ್ದುಪಡಿ ಅನ್ವಯ ಫ್ಯಾಕ್ಟ್‌ ಚೆಕ್ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು, ಮಾರ್ಚ್ 21 ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಸಾರಥ್ಯದ ಪೀಠ, ಕೇಂದ್ರ ಸರ್ಕಾರದ ಅಧಿಸೂಚನೆಗೆ ತಡೆ ನೀಡಿದೆ. ಬಾಂಬೆ ಹೈಕೋರ್ಟ್‌ ಕೂಡಾ ಈ ಪ್ರಕರಣ ಸಂಬಂಧ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

Nimma Suddi
";