ಬೆಂಗಳೂರು: ದೇಶದಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಬದಲಾಗಿ, ಫ್ಯಾಸಿಸಂ ರಾಜಕಾರಣ ಶುರುವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.ಕೆಪಿಸಿಸಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಬಿಜೆಪಿಯಿಂದ ಅವನತಿಯತ್ತ ಸಾಗಿದೆ. ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಸಂವಿಧಾನ, ಪ್ರಜಾಪ್ರಭುತ್ವ ಆತಂಕದಲ್ಲಿದೆ. ಹಿಟ್ಲರ್ ಮಾದರಿಯ ಸರ್ವಾಧಿಕಾರಿಧೋರಣೆ ಸರ್ಕಾರದಲ್ಲಿ ಕಾಣುತ್ತಿದೆ. ಸಂವಿಧಾನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗ್ತಿದೆ. ದೇಶಕ್ಕಾಗಿ ಪ್ರತಿಯೊಬ್ಬರ ತ್ಯಾಗ ಬಲಿದಾನ ವ್ಯರ್ಥವಾಗುತ್ತಿದೆ ಎಂದರು.
ಮೋದಿ ಸರ್ಕಾರ ವಿರೋಧ ಪಕ್ಷಗಳ ವಿರುದ್ಧ ಏಜೆನ್ಸಿಗಳನ್ನು ಬಳಸಿಕೊಳ್ತಿದೆ. ಕಾಂಗ್ರೆಸ್ ಪಕ್ಷದ 11 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಇದರ ಪರಿಣಾಮವಾಗಿ ನಾವು, ಯಾವುದೇ ಜಾಹೀರಾತು ಕೊಡುವಂತಿಲ್ಲ. ಅಭ್ಯರ್ಥಿಗಳಿಗೆ ಚುನಾವಣಾ ಖರ್ಚಿಗೆ ಹಣ ಕೊಡಲು ಸಾಧ್ಯವಾಗ್ತಿಲ್ಲ ಎಂದರು.
ಸರ್ಕಾರ ವಿರೋಧ ಪಕ್ಷಗಳ ಬ್ಯಾಂಕ್ ಖಾತೆಯನ್ನು ಪ್ರೀಜ್ ಮಾಡ್ತಿದೆ. ಜನಸಾಮಾನ್ಯರ ಬ್ಯಾಂಕ್ ಖಾತೆ,ಎಟಿಎಂ ಎಲ್ಲವನ್ನ ಪ್ರೀಜ್ ಮಾಡಿದರೆ ಹೇಗಾಗುತ್ತದೆ? ಇದು ಆರ್ಥಿವಾಗಿ ಜನಸಾಮಾನ್ಯರನ್ನು ಆತಂಕಕ್ಕೆ ದೂಡಿದಂತಾಗುತ್ತಲ್ಲವೇ? ಅದೇ ರೀತಿಯಲ್ಲಿ ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದರೆ ಚುನಾವಣೆ ಎದುರಿಸುವುದು ಹೇಗೆ? ಎಂದು ಪ್ರಶ್ನಿಸಿದರು.