Tag: ಎಪಿಎಲ್‌

  • ಎಪಿಎಲ್‌ ಕಾರ್ಡ್‌ದಾರರಿಂದ ಅಕ್ಕಿಗೆ ಬೇಡಿಕೆ ಹೆಚ್ಚು: ಮಧ್ಯಮ ವರ್ಗದವರಿಗೆ ಸರ್ಕಾರ ಶಾಕ್!

    ಎಪಿಎಲ್‌ ಕಾರ್ಡ್‌ದಾರರಿಂದ ಅಕ್ಕಿಗೆ ಬೇಡಿಕೆ ಹೆಚ್ಚು: ಮಧ್ಯಮ ವರ್ಗದವರಿಗೆ ಸರ್ಕಾರ ಶಾಕ್!

    ಮಾರುಕಟ್ಟೆಯಲ್ಲಿ 2 ತಿಂಗಳ ಹಿಂದೆ ಸರಾಸರಿ 50-55 ರೂ. ಇದ್ದ ಅಕ್ಕಿ ದರ ಪ್ರಸ್ತುತ 60-70 ರೂ.ಗೆ ಏರಿಕೆಯಾಗಿದೆ. ಮೊದಲು ಪಡಿತರ ಅಂಗಡಿಗಳಲ್ಲಿ ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ ಪ್ರತಿ ಕಿಲೋ ಅಕ್ಕಿಗೆ 15 ರೂ. ದರದಂತೆ ತಿಂಗಳಿಗೆ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ವಿತರಿಸಲಾಗುತ್ತಿತ್ತು ಎಂದು ಮಾಹಿತಿ ತಿಳಿದು ಬಂದಿದೆ.

    ಮಾರುಕಟ್ಟೆಯಲ್ಲಿದರ ಕಡಿಮೆ ಇದ್ದಾಗ ಎಪಿಎಲ್‌ ಕಾರ್ಡ್‌ ಹೊಂದಿರುವ ಮಧ್ಯಮ ವರ್ಗದ ಬಹುತೇಕ ಕುಟುಂಬಗಳು ಪಡಿತರ ಅಂಗಡಿಗಳಲ್ಲಿಅಕ್ಕಿ ಕೊಳ್ಳುತ್ತಿರಲಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿಅಕ್ಕಿ ದರ ಏರಿದ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳಲ್ಲಿ ಎಪಿಎಲ್‌ ಕಾರ್ಡ್‌ದಾರರಿಂದ ಅಕ್ಕಿಗೆ ಬೇಡಿಕೆ ಹೆಚ್ಚಾಗಿದ್ದು, ಆಹಾರ ಇಲಾಖೆಯಿಂದ ಪಡಿತರ ಅಂಗಡಿಗಳಿಗೆ ಕಳೆದ 2 ತಿಂಗಳಿಂದ ಎಪಿಎಲ್‌ ಕಾರ್ಡ್‌ ಕೋಟಾದ ಅಕ್ಕಿ ಪೂರೈಕೆ ಆಗುತ್ತಿಲ್ಲ.ರಾಜ್ಯ ಸರಕಾರ ನ್ಯಾಷನಲ್‌ ಅಗ್ರಿಕಲ್ಚರಲ್‌ ಕೋ ಆಪರೇಟಿವ್‌ ಮಾರ್ಕೆಟಿಂಗ್‌ ಫೆಡರೇಶನ್‌, ನ್ಯಾಷನಲ್‌ ಕೋ ಆಪರೇಟಿವ್‌ ಕನ್ಸೂಮರ್‌ ಫೆಡರೇಶನ್‌, ಮೊದಲಾದ ಸಂಸ್ಥೆಗಳಿದ ಪ್ರತಿ ಕಿಲೋ ಅಕ್ಕಿಗೆ 34 ರೂಪಾಯಿ ದರ ನೀಡಿ ಖರೀದಿಸುತ್ತದೆ.

    ಈ ಅಕ್ಕಿಯನ್ನು ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತವಾಗಿ ಮತ್ತು ಎಪಿಎಲ್‌ ಕಾರ್ಡ್‌ದಾರರಿಗೆ ಕಿಲೋಗೆ 15 ರೂಪಾಯಿ ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿತ್ತು.ಪ್ರಸ್ತುತ ರಾಜ್ಯ ಸರಕಾರ ಅನ್ಯ ಯೋಜನೆಗಳಿಗೆ ಹೆಚ್ಚು ಹಣ ಹೊಂದಿಸಬೇಕಾದ ಅನಿವಾರ್ಯತೆಯಲ್ಲಿದ್ದು, ಇನ್ನೊಂದೆಡೆ ಬಿಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ಪೂರೈಕೆ ನಿಲ್ಲಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಬಿಪಿಎಲ್‌ ಕಾರ್ಡ್‌ಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಎಪಿಎಲ್‌ ಕಾರ್ಡ್‌ನ ಅಕ್ಕಿ ಕೋಟಾವನ್ನು ಸರಕಾರ ಸ್ಥಗಿತಗೊಳಿಸಿದೆ.

    ಸರಕಾರ ನಿಯಮದ ಪ್ರಕಾರ ಗ್ರಾಮೀಣ ಭಾಗದಲ್ಲಿ ಒಟ್ಟು ಪಡಿತರ ಕಾರ್ಡ್‌ಗಳಲ್ಲಿ ಗರಿಷ್ಠ ಶೇಕಡಾ 74ರಷ್ಟು ಹಾಗೂ ನಗರ ಪ್ರದೇಶಗಳಲ್ಲಿಒಟ್ಟು ಪಡಿತರ ಕಾರ್ಡ್‌ಗಳಲ್ಲಿ ಗರಿಷ್ಠ ಶೇಕಡಾ 49ರಷ್ಟು ಬಿಪಿಎಲ್‌ ಕಾರ್ಡ್‌ ಇರಲು ಅವಕಾಶವಿದೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ಗ್ರಾಮೀಣ ಭಾಗದಲ್ಲಿಶೇ.85 ಹಾಗೂ ನಗರದ ಪ್ರದೇಶಗಳಲ್ಲಿ ಶೇಕಡಾ 70ರಷ್ಟು ಬಿಪಿಎಲ್‌ ಕಾರ್ಡ್‌ಗಳಿವೆ.