Tag: ವಸ್ತುಗಳ

  • ಕರಕುಶಲ ವಸ್ತುಗಳ ಪ್ರದರ್ಶನ & ಜಾಗೃತಿ

    ಕರಕುಶಲ ವಸ್ತುಗಳ ಪ್ರದರ್ಶನ & ಜಾಗೃತಿ

    ಬಾಗಲಕೋಟೆ:

    ಧಾರವಾಡದ ಕರಕುಶಲ ಸೇವಾ ಕೇಂದ್ರದಿಂದ ಬವಿವ ಸಂಘದ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜನಲ್ಲಿ ಮೂರು ದಿನಗಳ ಕಾಲ ಕರಕುಶಲ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಜರುಗಿತು.

    ಪ್ರದರ್ಶನದಲ್ಲಿ ನುರಿತ ಕರಕುಶಕರ್ಮಿಗಳ ಕೋಲ್ಹಾಪುರಿ ಚಪ್ಪಲ್ಸ್, ಕುಂಬಾರಿಕೆ, ಟೆರಾಕೋಟಾ, ಲಂಬಾಣಿ ಕಸೂತಿ ಸೆಣಬುಗಳಲ್ಲಿ ಕರಕುಶಲಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮವನ್ನು ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಎಸ್.ಜಂಗಮಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

    ದಾರವಾಡದ ಎಚ್.ಎಸ್.ಸಿ (ಕರಕುಶಲ) ಸಹಾಯಕ ನಿರ್ದೇಶಕ ದರ್ಶನ ರಾಘವನ್, ಇಂಜಿನೀಯರಿಂಗ್ ಕಾಲೇಜಿನ ವಾಣಿಜ್ಯ ಮತ್ತು ಉತ್ಪಾದನೆ ವಿಭಾಗದ ಪ್ರೊ.ಡಾ.ಎಸ್.ಎಂ.ಪರಶಿಯವರ ಉಪಸ್ಥಿತರಿದ್ದರು.
    ಭಾರತ ಸರ್ಕಾರದ ಜವಳಿ ಸಚಿವಾಲಯದ ಅಡಿಯಲ್ಲಿ ದೇಶದಲ್ಲಿ ಕರಕುಶಲ ಅಭಿವೃದ್ದಿಯ ಗುರಿಯನ್ನು ಹೊಂದಿರುವ ನೀತಿಗಳ ರಚನೆ ಮತ್ತು ಅನುಷ್ಠಾನದಲ್ಲಿ ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಇದು ದೇಶದಾದ್ಯಂತ 6 ಪ್ರಾದೇಶಿಕ ಕಚೇರಿಗಳು ಮತ್ತು 67 ಕ್ಷೇತ್ರ ಘಟಕಗಳನ್ನು ಹೊಂದಿದೆ. ಅಂತಹ ನಾಲ್ಕು ಕ್ಷೇತ್ರ ಘಟಕಗಳು ಕರ್ನಾಟಕ ರಾಜ್ಯದಲ್ಲಿ ಧಾರವಾಡ, ಬೆಂಗಳೂರು, ಮಂಗಳೂರು ಮತ್ತು ಮೈಸೂರು ದಕ್ಷಿಣ ಪ್ರಾದೇಶಿಕ ಕಚೇರಿ ಚೈನ್ಯೈ ಅಡಿಯಲ್ಲಿ ನೆಲೆಗೊಂಡಿರುತ್ತವೆ.

    ಕರಕುಶಲ ಸೇವಾ ಕೇಂದ್ರ ಧಾರವಾಡವು 8 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಬೆಳಗಾವಿ, ಬೀದರ್, ಬಾಗಲಕೋಟೆ, ವಿಜಯಪುರ, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಇಲಾಖೆಯ ವಿವಿಧ ಯೋಜನೆಗಳಾದ ಮಾರ್ಕೆಟಿಂಗ್ ಈವೆಂಟ್ಸ್, ಕೌಶಲ್ಯ ಉನ್ನತೀಕರಣ ತರಬೇತಿ, ವಿನ್ಯಾಸ ಮತ್ತು ತಾಂತ್ರಿಕತೆಯ ಮೂಲಕ ಕುಶಲಕರ್ಮಿಗಳನ್ನು ಬೆಂಬಲಿಸುವ ಉದ್ದೇಶ ಹೊಂದಿದೆ.

  • *ಸ್ವ-ಸಹಾಯ ಸಂಘಗಳಿಂದ ತಯಾರಿಸಿದ ವಸ್ತುಗಳ ಪ್ರದರ್ಶನ

    *ಸ್ವ-ಸಹಾಯ ಸಂಘಗಳಿಂದ ತಯಾರಿಸಿದ ವಸ್ತುಗಳ ಪ್ರದರ್ಶನ

    *ದೀಪಾವಳಿ ಹಬ್ಬದ ಪ್ರಯುಕ್ತ ದೀಪ ಸಂಜೀವಿನಿ | ಮಣ್ಣಿನ ಹಣತೆಗಳ ಮೇಳ*

    ಬಾಗಲಕೋಟೆ:

    ಜಿಲ್ಲೆಯ ವಿವಿಧ ಸ್ವ-ಸಹಾಯ ಸಂಘಗಳ ಕೈ ಚಳಕದಿಂದ ತಯಾರಿಸಲಾದ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶಾಸಕ ಎಚ್.ವಾಯ್.ಮೇಟಿ ಗುರುವಾರ ಚಾಲನೆ ನೀಡಿದರು.

    ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಪಂಚಾಯತ, ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ದಿ ಪಂಚಾಯತ ರಾಜ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಎರಡು ದಿನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ವಿವಿಧ ತರಹದ ವಸ್ತುಗಳನ್ನು ವೀಕ್ಷಣೆ ಮಾಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಜಿ.ಪಂ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡು ವೀಕ್ಷಣೆ ಮಾಡಿದರು.

    ಕಲಾದಗಿ ಐಶ್ವರ್ಯ ಲಕ್ಷ್ಮೀ ಸ್ವ-ಸಹಾಯ ಸಂಘ, ಮಹಮ್ಮದ ಪೈಗಂಬರ ಮಹಿಳಾ ಸಂಘ, ಗದ್ದನಕೇರಿ ಸರಸ್ವತಿ ಮಹಿಳಾ ಸಂಘ, ಬೇಲೂರಿನ ಭೀಮಾಂಬಿಕೆ ಸಂಜೀವಿನಿ ಮಹಿಳಾ ಸಂಘದಿಂದ ತಯಾರಿಸಿದ ಮಣ್ಣಿನ ಹಣತೆ, ಸೂಳೇಭಾವಿಯ ರೇವಣ ಸಿದ್ದೇಶ್ವರ ಇಲಕಲ್ಲ ಸೇರೆ ಉತ್ಪಾದಕರ ಸಂಘದಿಂದ ಇಲಕಲ್ಲ ಸೀರೆ, ಮುರನಾಳ ಗ್ರಾಮದ ಲಕ್ಷ್ಮೀದೇವಿ ಮಹಿಳಾ ಸಂಘ, ವಿಷ್ಣುವಲ್ಲಭ ಮಹಿಳಾ ಸಂಘದಿಂದ ಮನೆ ಅಲಂಕಾರಿಕ ವಸ್ತುಗಳು, ದಾನಮ್ಮದೇವಿ ಮಹಿಳಾ ಸಂಘದಿಂದ ಹೋಮ್ ಮೇಡ್ ಪ್ರಾಡಕ್ಟ ಹಾಗೂ ಕಟಗೇರಿ ಮಾಕೂಟೇಶ್ವರ ಸಂಜೀವಿನಿ ಮಹಿಳಾ ಸಂಘದಿದ ದೀಪದ ಹಣತೆಗಳ ಪ್ರದರ್ಶನ ಂ ಮಾರಾಟದಲ್ಲಿ ಇಡಲಾಗಿದೆ. ಪ್ರದರ್ಶನ ಮತ್ತು ಮಾರಾಟ ಮೇಳ ಎರಡು ದಿನಗಳ ಕಾಲ ನಡೆಯಲಿದೆ.