Tag: 22ನೇ

  • 22ನೇ ವಾರ್ಡಿನ 50ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮಹಿಳೆಯರು ಬಿಜೆಪಿಗೆ ಸೇರ್ಪಡೆ

    22ನೇ ವಾರ್ಡಿನ 50ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮಹಿಳೆಯರು ಬಿಜೆಪಿಗೆ ಸೇರ್ಪಡೆ

    ಬಾಗಲಕೋಟೆ

    ನಗರದ ಶಿವಾನಂದ ಜೀನ್ ನಲ್ಲಿರುವ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನವನಗರದ 22ನೇಯ ವಾರ್ಡಿನ ಸುಮಾರು 50 ಕ್ಕೂ ಹೆಚ್ಚು ಜನ ಅಲ್ಪಸಂಖ್ಯಾತ ಮಹಿಳೆಯರ ತಂಡ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.

    ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಬಿಜೆಪಿ ಸರಕಾರ ಅಲ್ಪಸಂಖ್ಯಾತರ ಏಳಿಗೆಗಾಗಿ ಹಲವಾರು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಗಾಗಿ ಅಂದಾಜು 41ಕೋಟಿಯಷ್ಟು ಅನುದಾನ ಸರಕಾರ ಬಿಡುಗಡೆ ಮಾಡಿದೆ.

    ನಗರದಲ್ಲಿ ಮೌಲಾನಾ ಅಜಾದ ಶಾಲೆ,ಅಬ್ದುಲ್ ಕಲಾಂ ಶಾಲೆ.ಅಲ್ಪಸಂಖ್ಯಾತ ಮುರಾರ್ಜಿ ವಸತಿ ಶಾಲೆಗಳು ಸೇರಿದಂತೆ ಅನೇಕ ಶಿಕ್ಷಣ ಪರ ಕೆಲಸಗಳು ಆಗಿವೆ, ಬಿಜೆಪಿ ಅಲ್ಪಸಂಖ್ಯಾತರು,ಬಹುಸಂಖ್ಯಾತರನ್ನು ಸಮನಾಗಿ ಕಾಣುವ ಪಕ್ಷ‌ ಬಿಜೆಪಿಯಾಗಿದೆ. ಯಾರ ಮಾತಿಗೂ ಕಿವಿಗೊಡದೆ ಬಿಜೆಪಿಯನ್ನು ಬೆಂಬಲಿಸಿ ಬಿಜೆಪಿಗೆ ಮತ ನಿಡಿ‌ ಎಂದರು.

    ಇನ್ನು ತ್ರಿವಳಿ ತಲಾಖ ನಿಷೇಧ ಮಾಡಿದ್ದರಿಂದ ಅಲ್ಪಸಂಖ್ಯಾತ ಮಹಿಳೆಯರ ಬದುಕು ಹಸನಾಗಿದೆ. ತಲಾಖನಿಂದಾಗಿ ಎಷ್ಟೊ ಜನ ಅಲ್ಪಸಂಖ್ಯಾತ ‌ಮಹಿಳೆಯರ ಬದುಕು ಕಮರಿ ಹೋಗುತ್ತಿತ್ತು. ಅಂಥಹ ತ್ರಿವಳಿ ತಲಾಖ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತ ಮಹಿಳೆಯರ ಬೆನ್ನೆಲುಬಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ.

    ಇದೇ ಸಂಧರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಜನ ಅಲ್ಪಸಂಖ್ಯಾತ ಯುವಕರು ಸಹ ಬಿಜೆಪಿ ಪಕ್ಷವನ್ನು ಸೇರಿದರು.

    ಮಮತಾಜ್ ನದಾಪ್,ಸಾಹೇಖಿ ದೊಡಮನಿ,ಹಾಜಬಿ ದೊಡಮನಿ,ನೂರಜನ ಜಮಾದಾರ,ರಜಿಯಾ ಬೇಪಾರಿ,ರಹಿಮಖಿ ಜಮಾದಾರ,ಅಜಂ‌ಶೇಖ,
    ಪಾತಿಮಾ ಕಮತಗಿ,
    ತಸ್ಮೀಯಾ‌ಮೋಮಿನ,
    ರಜಿಯಾ ಪಿತ್ತರಿ,ಸೇರಿದಂತೆ
    50 ಜನ ಮಹಿಳೆಯರು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

    ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯ ಸೀಮಾ‌ ನದಾಪ‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.