ಬಾಗಲಕೋಟೆ:
ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ವಿದ್ಯುತ್ ಸೋರಿಕೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸೂಚಿಸಿದರು.
ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಂಗಳವಾರದAದು ನಡೆದ ಬಾಗಲಕೋಟೆ ಜಿಲ್ಲೆಯ ವಿದ್ಯುತ್ ಪೂರೈಕೆ ಮೇಲ್ವಿಚರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅನಗತ್ಯವಾಗಿ ಬೀದಿದೀಪಗಳು ಉರಿಯುವುದು ಸರ್ವೆ ಸಮಾನ್ಯ ಎನ್ನುವಂತಾಗಿದೆ. ಸ್ಥಳಿಯ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಗಲು ಬೀದಿದೀಪ ಉರಿಸುವುದನ್ನು ತಡೆಗಟ್ಟಬೇಕು. ಗೃಹ ಬಳಕೆಗೆಂದು ಪರವಾನಿಗೆ ಪಡೆದು, ವಾಣಿಜ್ಯ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಳ್ಳುವನ್ನು ನಿಲ್ಲಿಸಬೇಕು ಎಂದರು.
ಬರಗಾಲ ಇರುವದರಿಂದ ರಾಜ್ಯವು ವಿದ್ಯುತ್ ಅಭಾವವನ್ನು ಎದುರಿಸುತ್ತಿರುವ ಕಾರಣ, ಸಮಸ್ಯೆಯನ್ನು ಎದುರಿಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ. ವಿದ್ಯುತ್ ಉಳಿತಾಯ ಮಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಅಲ್ಲದೇ ಸಣ್ಣಪುಟ್ಟ ವಿದ್ಯುತ್ ಸೋರಿಕಗೆಗಳನ್ನು ಗುರುತಿಸಿ ಕೊರತೆಯನ್ನು ನಿಬಾಯಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಹೆಸ್ಕಾಂ ಬೆಳಗಾವಿ ವಲಯ ಕಚೇರಿ ಮುಖ್ಯ ಇಂಜನೀಯರ್ ಪ್ರಕಾಶ ವಿ. ಅವರು ಸಭೆಗೆ ಮಾಹಿತಿ ನೀಡಿ ಬಾಗಲಕೋಟೆ ಜಿಲ್ಲೆಗೆ ಪ್ರತಿ ದಿನ ಒಟ್ಟು 10 ರಿಂದ 11 ಮಿಲಿಯನ್ ಯುನಿಟ್ ವಿದ್ಯುತ್ ಅವಶ್ಯಕತೆ ಇರುತ್ತದೆ. ಮಾಸಿಕವಾಗಿ 330 ಮಿ ಯು ಬಳಕೆಯಾಗುತ್ತಿದೆ. ಈ ಪೈಕಿ ನೀರಾವರಿ ಪಂಪಸೆಟ್ ಬಳಕೆಗೆ ಸರಿಸುಮಾರು ಶೇ. 65 ರಿಂದ 70 (170 ಮಿಲಿಯನ್ ಯುನಿಟ್ ಮಾಸಿಕ) ರಷ್ಟು ವಿದ್ಯುತ್ ಅವಶ್ಯಕತೆ ಇರುತ್ತದೆ. ಹಿಂಗಾರು ಮತ್ತು ಮುಂಗಾರು ಮಳೆ ವಿಫಲವಾದ ಕಾರಣ ರೈತರು ಹೆಚ್ಚಿನ ಪ್ರಮಾಣದಲ್ಲಿ ಪಂಪಸೆಟ್‌ಗಳನ್ನು ಬಳಸಲು ಆರಂಬಿಸಿದ್ದರಿAದ, ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅಂದಾಜಿಸಲಾಗಿರುತ್ತದೆ. ಜಲ ವಿದ್ಯುತ್ ಕುಂಠಿತವಾಗಿರುವದರಿAದ ಮತ್ತು ಇನ್ನಿತರ ಕಾರಣಗಳಿಂದ ಪ್ರಸ್ತುತ ಸ್ಥಿತಿಯಲ್ಲಿ ಸರಕಾರದ ನಿರ್ದೇಶನದಂತೆ ಪ್ರತಿದಿನ ಒಟ್ಟು 6 ಗಂಟೆಗಳ ಕಾಲ ವಿದ್ಯುತ ಪೂರೈಕೆ ಮಾಡಲಾಗುತ್ತಿದ್ದು, ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ತೋಟದ ಮನೆಗಳಿಗೆ ಬೆಳಕಿಗಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕಬ್ಬು ಮತ್ತು ತೋಟಗಾರಿಕೆ ಬೆಳೆಗಳು ಪ್ರಮುಖವಾಗಿರುವದರಿಂದ ಹೆಚ್ಚಿನ ನೀರಿನ ಅವಶ್ಯಕತೆ ಇರುತ್ತದೆ. ಜಿಲ್ಲೆಯಲ್ಲಿ ಒಟ್ಟು 556 ನೀರಾವರಿ ಫೀಡರ್‌ಗಳಿದ್ದು, 56 ನೀರಾವರಿ ಫೀಡರ್‌ಗಳಿಗೆ 6 ಗಂಟೆ ಸತತವಾಗಿ ವಿದ್ಯುತ್ ನೀಡಲಾಗುತ್ತಿದೆ. 245 ನೀರಾವರಿ ಫೀಡರ್ ಗಳಿಗೆ ಹಗಲು 4 ಗಂಟೆ ಹಾಗೂ ರಾತ್ರಿ 2 ಗಂಟೆ ನೀಡುತ್ತಿದ್ದು, ಉಳಿದ 255 ನೀರಾವರಿ ಫೀಡರ್ ಗಳಿಗೆ ಹಗಲು 3 ಗಂಟೆ ಹಾಗೂ ರಾತ್ರಿ 3 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ. ಎಮ್. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಬಾಗಲಕೋಟ ಹೆಸ್ಕಾಂ ಮುಖ್ಯ ಅಧೀಕ್ಷಕ ಕಲೀಮ್ ಅಹಮ್ಮದ್ ಹಾಗೂ ಕೆ ಪಿ ಟಿ ಸಿ ಎಲ್ ಅಧಿಕಾರಿ ಉಪಸ್ಥಿತರಿದ್ದರು.