ನಿಮ್ಮ ಸುದ್ದಿ ಬಾಗಲಕೋಟೆ
ಬಾಗಲಕೋಟೆ ಕ್ಷೇತ್ರದ ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದು ಅವರ ಪಾಲಕರು ಹಾಗೂ ವಿದ್ಯಾರ್ಥಿಗಳ ಜೊತೆ ಮಾತನಾಡಿದ ಕ್ಷೇತ್ರದ ಶಾಸಕ ವೀರಣ್ಣ ಚರಂತಿಮಠ ಧೈರ್ಯದಿಂದ ಇರುವಂತೆ ತಿಳಿಸಿದರು.
ಅಪೂರ್ವ ಕದಾಂಪೂರ, ಮನೋಜ ಚಿತ್ರಗಾರ, ಕಿರಣ ಸವದಿ, ಸ್ಪೂರ್ತಿ ದೊಡಮನಿ ಅವರ ಪಾಲಕರೊಂದಿಗೆ ಮಾತನಾಡಿ, ಉಕ್ರೇನ್ ದಲ್ಲಿರುವ ಭಾರತೀಯರನ್ನು ಕರೆತರುವಂತಹ ಪ್ರಯತ್ನ ಮಾಡುತ್ತಿದೆ, ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಹ ಈ ಬಗ್ಗೆ ತಾವೇ ಸ್ವತಃ ಕಾಳಜಿ ವಹಿಸಿ ರಷ್ಯಾ ಹಾಗೂ ಉಕ್ರೇನ್ ದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಯಾವುದೇ ರೀತಿಯ ಭಯ ಬೇಡ, ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರೊಂದಿಗೂ ಸಹ ಮಾತನಾಡಿದ್ದೇನೆ, ಬಾಗಲಕೋಟೆಯ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆತರುವಂತಹ ಪ್ರಯತ್ನ ನಡೆಯುತ್ತಿದೆ.
. ಮನೋಜ ಚಿತ್ರಗಾರ ಹಾಗೂ ಕಿರಣ ಸವದಿ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದು ಅವರು ಸುರಕ್ಷಿತವಾಗಿರುವ ಬಗ್ಗೆ ತಿಳಸಿದ್ದಾರೆ, ನೆಲ ಮಹಡಿಯಲ್ಲಿರುವ ಬಾಂಬ್ ಟ್ಯಾಂಕರ್ ಗಳಲ್ಲಿ ಎಲ್ಲರನ್ನು ಸುರಕ್ಷಿತವಾಗಿ ಇರಿಸಲಾಗಿದೆ, ಅವರಿಗೂ ಧೈರ್ಯದಿಂದ ಇರಲು ಕೇಳಿಕೊಳ್ಳಲಾಗಿದೆ. ಅಲ್ಲಿನ ಪರಿಸ್ಥಿತಿ ತೀರ್ವ ಚಿಂತಾಜನಕವಾಗಿದ್ದು ಸರ್ಕಾರ ಅವರ ಸುರಕ್ಷತೆಗೆ ಬದ್ಧವಾಗಿದೆ.