This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಬಿಎಸ್​ ಯಡಿಯೂರಪ್ಪನವರ ಕುಟುಂಬದ ಬಗ್ಗೆ ಮಾತನಾಡುವುದು ಅರ್ಥಹೀನ: ಈಶ್ವರಪ್ಪಗೆ ವಿಜಯೇಂದ್ರ ಟಾಂಗ್​

ಬಿಎಸ್​ ಯಡಿಯೂರಪ್ಪನವರ ಕುಟುಂಬದ ಬಗ್ಗೆ ಮಾತನಾಡುವುದು ಅರ್ಥಹೀನ: ಈಶ್ವರಪ್ಪಗೆ ವಿಜಯೇಂದ್ರ ಟಾಂಗ್​

ಶಿವಮೊಗ್ಗ: ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಬಿಎಸ್​ ಯಡಿಯೂರಪ್ಪ ಮತ್ತು ಪುತ್ರ ಬಿವೈ ವಿಜಯೇಂದ್ರ ಮೇಲೆ ಮುನಿಸಿಕೊಂಡು, ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಎಲ್ಲವೂ ಸರಿಯಾಗುತ್ತದೆ, ಎಲ್ಲವನ್ನು ಸರಿಪಡಿಸುವ ಕೆಲಸ ವರಿಷ್ಠರು ಮಾಡುತ್ತಾರೆ. ಬಿಎಸ್​ ಯಡಿಯೂರಪ್ಪನವರ ಕುಟುಂಬದ ಬಗ್ಗೆ ಮಾತನಾಡುವುದು ಅರ್ಥಹೀನ. ಸೈಕಲ್​ನಲ್ಲಿ ರಾಜ್ಯಾದ್ಯಂತ ಸುತ್ತಾಡಿ ಪಕ್ಷ ಕಟ್ಟಿದ ಫಲವಾಗಿ ರಾಜ್ಯದಲ್ಲಿ ಇಂದು ಪಕ್ಷ ಬಲಿಷ್ಠವಾಗಿದೆ. ಯಡಿಯೂರಪ್ಪ ಅವರಿಂದಲೇ ಕೆಲವರು ಮಂತ್ರಿ ಆಗಿದ್ದಾರೆ ಎಂದು ಪರೋಕ್ಷವಾಗಿ ಕೆಎಸ್​ ಈಶ್ವರಪ್ಪಗೆ ಟಾಂಗ್‌ ಕೊಟ್ಟರು.

ಬಿಎಸ್​ ಯಡಿಯೂರಪ್ಪನವರು ಕುತ್ತಿಗೆ ಹಿಸುಕಿದ್ದಾರೋ ಇಲ್ಲ ಎತ್ತರಕ್ಕೆ ಬೆಳೆಸಿದ್ದಾರೋ ಎಂದು ಲೋಕಸಭೆ ಚುನಾವಣೆ ಮುಗಿದ ಮೇಲೆ ಗೊತ್ತಾಗಲಿದೆ. ಎಲ್ಲವನ್ನೂ ಎದುರಿಸುವ ಧಮ್ ಮತ್ತು ತಾಕತ್ತು ನಮ್ಮ ಕಾರ್ಯಕರ್ತರಿಗೆ ಇದೆ. ಸಾಮೂಹಿಕವಾಗಿ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಗೆಲ್ಲುವ ಪಕ್ಷಕ್ಕೆ ಸಮಸ್ಯೆ ಬಹಳ. ಕಾಂಗ್ರೆಸ್​ಗೆ ಸಮಸ್ಯೆ ಯಾಕೆ ಇಲ್ಲ ಅಂದರೇ ಅಲ್ಲಿ ಹೋದರೆ ಠೇವಣಿ ಸಿಗುವುದಿಲ್ಲ ಎನ್ನುವುದು ಗೊತ್ತಿದೆ ಅದಕ್ಕೆ ಸಮಸ್ಯೆ ಇಲ್ಲ ಎಂದು ವ್ಯಂಗ್ಯವಾಡಿದರು.

ಅಪ್ಪ-ಮಕ್ಕಳು ವರ್ಸಸ್ ಹಿಂದುತ್ವದ ಚುನಾವಣೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಿಂದುತ್ವದ ನಾಯಕರು ಬಹಳ ಇದ್ದಾರೆ. ಎಲ್ಲವನ್ನು ಸರಿದೂಗಿಸುವ ಕೆಲಸ ವರಿಷ್ಠರು ಮಾಡುತ್ತಾರೆ. ಇದು ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರಲ್ಲ. ಎಲ್ಲವೂ ಸರಿ ಹೋಗುತ್ತೆ ಎಂದರು.

ಟಿಕೆಟ್ ತಪ್ಪಿದಾಗ ನೋವಾಗುವುದು ಸರ್ವೇ ಸಾಮಾನ್ಯ. ಏನೇ ಆಗಿದ್ದರೂ ಅದು ಪಕ್ಷದ ವರಿಷ್ಠರ ತೀರ್ಮಾನ. ಕೆ.ಎಸ್​.ಈಶ್ವರಪ್ಪನವರ ಪ್ರಶ್ನೆಗಳಿಗೆ ಉತ್ತರ ಸಿಗಲಿವೆ. ಸೂಕ್ತ ಸಮಯದಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ. ಅದು ರಾಷ್ಟ್ರೀಯ ನಾಯಕರ ತೀರ್ಮಾನ. ಎಲ್ಲದಕ್ಕೂ ಕಾಲ ಉತ್ತರ ಕೊಡಲಿದೆ. ಪಕ್ಷಾತೀತವಾಗಿ ರಾಘವೇಂದ್ರ ಅವರಿಗೆ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.

Nimma Suddi
";