This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ತುಮಕೂರಿನಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಶಿಕ್ಷಕರಿಗೆ ಪಿಂಚಣಿ ಕಡಿತದ ಆತಂಕ

ತುಮಕೂರಿನಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಶಿಕ್ಷಕರಿಗೆ ಪಿಂಚಣಿ ಕಡಿತದ ಆತಂಕ

ತುಮಕೂರು: ಖಾಲಿ ಹುದ್ದೆಗೆ 1984 ರಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನಿವೃತ್ತಿ ಬದುಕಿಗೆ ಪಿಂಚಣಿ ಆಘಾತ ನೀಡುವ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಇದರಿಂದ ಶಿಕ್ಷಕರ ನಿವೃತ್ತಿ ಬದುಕು ಸಂಕಷ್ಟಕ್ಕೀಡಾಗಿದ್ದು, ಶಿಕ್ಷಕರು ಯಾವುದೇ ಕಾರಣಕ್ಕೂ 1999ರ ಕಾಲ್ಪನಿಕ ವೇತನ ತಡೆ ಆದೇಶ ಕಾರ್ಯಗತೊಳಿಸಬಾರೆಂದು ಆಗ್ರಹಿಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ರಾಜ್ಯದ ಸರಕಾರಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪ್ರಥಮದರ್ಜೆ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಖಾಲಿ ಇದ್ದ ಸುಮಾರು 12 ಸಾವಿರ ಹುದ್ದೆಗಳಿಗೆ 1984ರಲ್ಲಿ ಗುತ್ತಿಗೆ ಆಧಾರದಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ಸರಕಾರ ನೇಮಿಸಿಕೊಂಡಿತ್ತು.ಪ್ರಾಥಮಿಕ ಶಾಲಾ ಶಿಕ್ಷಕರು ಮಾಸಿಕ 540 ರೂ., ಪ್ರೌಢಶಾಲಾ ಶಿಕ್ಷಕರು ಮಾಸಿಕ 740 ರೂ., ಪದವಿಪೂರ್ವ, ಪದವಿ ಹಾಗೂ ಪಾಲಿಟೆಕ್ನಿಕ್‌ ಕಾಲೇಜು ಉಪನ್ಯಾಸಕರು ಮಾಸಿಕ 1040 ರೂ. ಮಾಸಿಕ ವೇತನ ಪಡೆದು, ಯಾವುದೇ ಭತ್ಯೆ, ಸೌಲಭ್ಯವಿಲ್ಲದೆ 7 ವರ್ಷಗಳ ಕಾಲ ದುಡಿದಿದ್ದರು.

1991 ರವರೆಗೆ ಒಂದೇ ವೇತನದಲ್ಲಿ ದುಡಿದಿದ್ದ ಶಿಕ್ಷಕರು, ಉಪನ್ಯಾಸಕರನ್ನು 1991ರ ಫೆಬ್ರವರಿ 19ರಲ್ಲಿಅಂದಿನ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಕಾಯಂಗೊಳಿಸಿದ್ದರು. ಆದರೆ, 1999ರಲ್ಲಿಸರಕಾರ ಕಾಲ್ಪನಿಕ ವೇತನ ಬಡ್ತಿ ತಡೆಯುವ ಆದೇಶ ಮಾಡಿತ್ತು. ತಾತ್ಕಾಲಿಕವಾಗಿ ವೇತನ ಬಡ್ತಿ, ಸೌಲಭ್ಯವನ್ನು ತಡೆಹಿಡಿದಿದ್ದ ಸರಕಾರ ವಿರೋಧದ ಹಿನ್ನೆಲೆಯಲ್ಲಿಸೌಲಭ್ಯ ಮುಂದುವರೆಸಿದ್ದು, ಆದರೆ, 2023 ರ ನವೆಂಬರ್‌ನಲ್ಲಿ ರಾಜ್ಯ ಸರಕಾರ 1999ರ ಆದೇಶ (ಕಾಲ್ಪನಿಕ ವೇತನ ಬಡ್ತಿ ವಾಪಸ್‌) ವನ್ನು ಕಾರ್ಯಗತಗೊಳಿಸಲು ಆದೇಶಿಸಿದೆ. ಅಧಿಕಾರಿಗಳು ಕ್ರಮವಹಿಸುವ ಪ್ರಕ್ರಿಯೆಯಲ್ಲಿನಿರತರಾಗಿದ್ದಾರೆ.

ಇದರಿಂದ ನಿವೃತ್ತ ಶಿಕ್ಷಕರಿಗೆ ಪಿಂಚಣಿ ಹೊಡೆತ ಬೀಳಲಿದೆ.ಶಿಕ್ಷಕರ ಕಾಲ್ಪನಿಕ ವೇತನ ಬಡ್ತಿ ಗೊಂದಲ ಬಗೆಹರಿಸಲು 2019 ರಲ್ಲಿ ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡರ ಅಧ್ಯಕ್ಷತೆಯಲ್ಲಿಸರಕಾರ ಸಮಿತಿ ರಚಿಸಿತ್ತು. ಈ ಸಮಿತಿಯು 2021 ರಲ್ಲಿ, 1999ರ ಆದೇಶವನ್ನು ರದ್ದುಪಡಿಸುವಂತೆ ಹಾಗೂ ಶಿಕ್ಷಕರಿಗೆ ನೀಡಬೇಕಾದ ಸೂಕ್ತ ವೇತನ ಬಡ್ತಿ ನೀಡಲು, ಇದರಿಂದ ಸರಕಾರಕ್ಕೆ ಯಾವುದೇ ಆರ್ಥಿಕ ಹೊರೆ ಆಗುವುದಿಲ್ಲವೆಂದು ಶಿಫಾರಸ್ಸು ಮಾಡಿದೆ. ಆದರೆ ವರದಿ ನೆನೆಗುದಿಗೆ ಬಿದ್ದಿದ್ದು, ಸರಕಾರ 1999ರ ಆದೇಶ ಜಾರಿಗೆ ಮುಂದಾಗಿರುವುದಕ್ಕೆ ಸುಮಾರು 12 ಸಾವಿರ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು ದಿಕ್ಕುತೋಚದಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

";